Breaking News

ಕ್ವಾರೆಂಟೈನ್‌ನಲ್ಲಿರುವ ಯುವಕನಿಗೆ ಕೊರೊನಾ ಎಂದು ಅಪಪ್ರಚಾರ : ಪಂಜದ ಯುವಕನ ಅಳಲು

Advt_Headding_Middle
Advt_Headding_Middle


ಮಹಾರಾಷ್ಟ್ರದಿಂದ ಬಂದು ಸದ್ಯ ಪಂಜದ ಮೊರಾರ್ಜಿ ಸ್ಕೂಲ್‌ನಲ್ಲಿ ಕ್ವಾರೆಂಟೈನ್‌ನಲ್ಲಿರುವ ಯುವಕರೋರ್ವರು, ತನಗೆ ಕೊರೋನಾ ಇದೆ ಎಂಬ ಅಪಪ್ರಚಾರ ನಡೆಯುತ್ತಿದೆ ಎಂದು ಸುದ್ದಿಯೊಂದಿಗೆ ಅಳಲು ತೋಡಿಕೊಂಡಿದ್ದಾರೆ.
ಪಂಜದ ಪುಂಡಿಮನೆಯ ಯುವಕನಾಗಿರುವ ಇವರು ಮಹಾರಾಷ್ಟ್ರದ ರಾಯಗಡದಲ್ಲಿ ಸೂಪರ್‌ವೈಸರ್ ಆಗಿ ಕೆಲಸ ಮಾಡುತ್ತಿದ್ದು ಲಾಕ್‌ಡೌನ್ ಸಡಿಲಿಕೆ ಆದ ಬಳಿಕ ಸರಕಾರದ ಸೂಚನೆಯಂತೆ ಪಾಸ್ ಮೂಲಕ ಮೇ. ೧೭ರಂದು ಊರಿಗೆ ಮರಳಿದ್ದರು. ಬಳಿಕ ಇವರನ್ನು ೧೪ ದಿನಗಳ ಕಾಲ ಮೊರಾರ್ಜಿ ಸ್ಕೂಲ್‌ನಲ್ಲಿ ಕ್ವಾರೆಂಟೈನ್‌ನಲ್ಲಿರುವಂತೆ ಸೂಚಿಸಲಾಗಿತ್ತು.


ಅಲ್ಲಿಂದ ಸುದ್ದಿಯನ್ನು ದೂರವಾಣಿ ಮೂಲಕ ಸಂಪರ್ಕಿಸಿರುವ ರಮೇಶ್, ನಾನು ಸರಕಾರದ ಎಲ್ಲಾ ಸೂಚನೆಗಳನ್ನು ಪಾಲಿಸಿ ಮೇ. ೧೭ರಂದು ಪಾಸ್ ಮೂಲಕ ಇಲ್ಲಿಗೆ ಬಂದಿದ್ದೇನೆ. ಈ ಹಂತದಲ್ಲಿ ತಪಾಸಣೆಗೂ ಒಳಗಾಗಿದ್ದೇನೆ. ಅಂದಿನಿಂದ ಕ್ವಾರೆಂಟೈನ್‌ನಲ್ಲಿಯೇ ಇದ್ದೇನೆ. ಎಲ್ಲಿಗೂ ಓಡಾಡಿಲ್ಲ. ಆದರೂ ಕೆಲವರು ನನಗೆ ಕೊರೋನಾ ಇದೆ, ಹೊರಗಡೆ ಓಡಾಡುತ್ತಿದ್ದಾರೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ನನ್ನ ಮನೆಯ ಬಳಿ ರಾತ್ರಿ ವೇಳೆಯೂ ಈ ರೀತಿ ಬೊಬ್ಬೆ ಹಾಕುತ್ತಾರೆ. ನನಗೆ ಊಟ ತಂದುಕೊಡುತ್ತಿದ್ದ ತಾಯಿಯೊಂದಿಗೂ ಇಂತಹ ಚುಚ್ಚು ಮಾತುಗಳನ್ನು ಆಡುತ್ತಾರೆ. ಇದರಿಂದ ನೋವಾಗಿದೆ. ಪೊಲೀಸ್ ಠಾಣೆಗೂ ವಿಷಯ ತಿಳಿಸಿದ್ದೇನೆ ಎಂದು ಹೇಳಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.