ಕೊರೊನಾ ಕಷ್ಟಕಾಲ….. ಸರಳ ರೀತಿಯಲ್ಲಿ ಈದ್ ಹಬ್ಬ ಆಚರಣೆ

Advt_Headding_Middle
Advt_Headding_Middle

 


ಮುಸ್ತಫಾ ಅಂಜಿಕ್ಕಾರ್

ರಂಜಾನ್ ನ ಉಪವಾಸ ಅಂದರೆ ಹಸಿವು ಬಗ್ಗೆ ಅರಿತುಕೊಳ್ಳುವುದು ಎಂದು ಎಲ್ಲರಿಗೂ ಗೊತ್ತಿತ್ತು, ಆದರೆ ಈ ವರ್ಷವೇ ಆ ಮಾತಿನ ಅರ್ಥ ವ್ಯಾಪಕವಾಗಿ, ಆಳವಾಗಿ ಎಲ್ಲರಿಗೆ ಅರ್ಥವಾಗಿದೆ,, ಬಡತನ ಎಂದರೆ ಏನು, ಹಸಿವು ಅಂದರೆ ಏನು, ಎಂದು ನಿಜವಾಗಿಯೂ ಎಲ್ಲರಿಗೂ ಮನದಟ್ಟಾಯಿತು, ದಾನ, ಧರ್ಮದ ನಿಜ ಅರ್ಥ ಈಗಲೇ ಎಲ್ಲರೂ ತಿಳಿದಿದ್ದು, ಯಾಕೆಂದರೆ ಈ ಕೊರೋನಾ, ಈ ಲಾಕ್ ಡೌನ್ ಜನರಿಗೆ ಎಲ್ಲಾ ತಿಳಿಸಿಕೊಟ್ಟಿತು, ನಮ್ಮವರು, ತಮ್ಮವರು, ಅಂದರೆ ಏನು, ಸಂಬಂಧಗಳು ಅಂದರೆ ಏನು, ಮಾನವತೆ ಎಂದರೆ ಏನು ನಿಜವಾಗಲೂ ಈಗಲೇ ಜನರಿಗೆ ಅರ್ಥವಾಗಿದ್ದು,

ಲಾಕ್ ಡೌನ್ ನಿಂದ ಎಷ್ಟೋ ಜನರು ಎಲ್ಲೆಲ್ಲಿಯೋ ಸಿಕ್ಕಿಹಾಕಿಕೊಂಡು, ತಮ್ಮವರನ್ನು ಸೇರಲು, ತಮ್ಮ ಮನೆಯ ಮುಖ ನೋಡಲು ಪಡುವ ಆ ಪಡಿಪಾಟಲು, ನೂರಾರು ಮೈಲಿ ನಡೆದುಕೊಂಡು ಬರುವುದು, ಕೆಲವರು ದಾರಿಯಲ್ಲೇ ಹಸಿವಿನಿಂದ ಪ್ರಾಣ ಬಿಟ್ಟದ್ದು, ಯಾವುದೇ ಊರಿನಿಂದ ಬಂದು ಯಾವುದೇ ಊರಿನಲ್ಲಿ ಸಾಯುವುದು, ಕೊರೋನಾ ಬಂದರಂತೂ ಅಬ್ಬಾ! ನಮ್ಮವರಿಂದ, ತಮ್ಮವರಿಂದ ದೂರವಿದ್ದು, ಏಕಾಂಗಿಯಾಗಿ ಪಡುವ ಆ ಸಂಕಟ, ಇದೆಲ್ಲಾ ನೋಡುತ್ತಿದ್ದರೆ ಜೀವನ ಇಷ್ಟೇ ಏನೋ ಅನಿಸುತ್ತಿತ್ತು,

ಆದರೆ ಕೊರೋನಾ ಬಂದು ಜನರಿಗೆ ಒಂದು ಒಳ್ಳೆಯ ಪಾಠ ಕಲಿಸಿಹೋಯಿತು, ಅದೇ ಮಾನವೀಯತೆಯ ಪಾಠ, ಯಾರಿಗೆ ಯಾರೋ ಸಂಬಂಧವಿಲ್ಲದವರು, ಬಡವರಿಗೆ, ಹಸಿದವರಿಗೆ ಅನ್ನದಾನ ಮಾಡಿದ್ದು, ಆಶ್ರಯ ನಿಡಿದ್ದು, ಇನ್ನೂ ಮಾನವೀಯತೆ ಬಾಕಿ ಇದೆ ಈ ಜಗತ್ತಿನಲ್ಲಿ ಎಂದು ಸಾರಿದಂತಾಯಿತು,

ಇನ್ನೂ ಡಾಕ್ಟರ್ಸ್, ನರ್ಸ್, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಪೋಲೀಸರು, ಪತ್ರಕರ್ತರು, ಅಷ್ಟೇ ಯಾಕೆ ಮಾಧ್ಯಮದವರು ಸಹಾ ತಾವೂ ದಾನ ಧರ್ಮದಲ್ಲಿ ಏನೂ ಕಡಿಮೆಯಿಲ್ಲ ಎಂದು ತೋರಿಸಿದರು, ಜಗತ್ತಿನಲ್ಲಿ ಎಷ್ಟೋ ಮೋಸ, ವಂಚನೆ, ಕೆಟ್ಟ ರಾಜಕೀಯ, ಏನೇ ಇರಲಿ, ಆದರೆ ಮಾನವೀಯತೆ ಇದೆಯಲ್ಲ, ಅದು ಇದ್ದರೆ ಇವು ಯಾವುವು ಕಾಣಿಸೋದಿಲ್ಲ, ತನಗೆ ತಾನೇ ಮಾಯವಾಗಿಬಿಡುತ್ತದೆ,

ಕೊನೆಗೆ ಹೇಳಬೇಕೆಂದರೆ ಎಂಥದೇ ಕೆಟ್ಟ ಪರಿಸ್ಥಿತಿ ಬರಲಿ ಜನರು ಮಾನವೀಯತೆ ಮರೆತಿಲ್ಲ, ಈ ರಂಜಾನ್ ಎಲ್ಲರಿಗೂ ಶುಭವನ್ನೇ ತರಲಿ ಎಂದು ಆಶಿಸುತ್ತಾ, ಬರೇ ರಂಜಾನ್ ಅಷ್ಟೇ ಅಲ್ಲ, ದಾನ ಧರ್ಮಕ್ಕೆ ಎಲ್ಲರೂ ಸದಾ ಕಾಲ ಮುಂದೆ ಬರಲಿ, ಹಾಗೆಯೇ ಮಾನವತೆಯನ್ನು ತೋರಿಸಲು ಕೆಟ್ಟ ಪರಿಸ್ಥಿತಿಯೇ ಬರಬೇಕೆಂದಿಲ್ಲ, ಮಾನವನಲ್ಲಿ ಮಾನವತೆ ಸದಾ ತುಡಿಯುತ್ತಿರಲಿ ಎಂದು ಆಶಿಸುತ್ತಾ, ಎಲ್ಲರಿಗೂ ರಂಜಾನ್ ಹಬ್ಬದ ಶುಭಾಶಯಗಳು
ಮುಸ್ತಫಾ ಅಂಜಿಕ್ಕಾರ್
ಯುವ ಸಮಾಜ ಸೇವಕರು ದೋಹಾ ಕತ್ತರ್

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.