ದೆಹಲಿಯಿಂದ ಬೆಂಗಳೂರಿಗೆ ಆಗಮಿಸಿದ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡರಿಗೆ ಹೋಂ ಕ್ವಾರಂಟೇನ್

Advt_Headding_Middle
Advt_Headding_Middle
Advt_Headding_Middle

 

 

 

ಲಾಕ್ ಡೌನ್ ಬಳಿಕ ಇದೇ ಪ್ರಥಮ ಬಾರಿಗೆ ದೆಹಲಿಯಿಂದ ಬೆಂಗಳೂರಿಗೆ ಆಗಮಿಸಿದ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡರು ಹೋಂ ಕ್ವಾರಂಟೇನ್ ಆಗಿದ್ದಾರೆ.

ಲಾಕ್ ಡೌನ್ ಘೋಷಣೆಯ ವೇಳೆ ದೆಹಲಿಯಲ್ಲಿದ್ದ ಸದಾನಂದ ಗೌಡರು ಬಳಿಕ ಬೆಂಗಳೂರಿಗೆ ಬರಲು ಸಾಧ್ಯವಾಗಿರಲಿಲ್ಲ. ಲಾಕ್ ಡೌನ್ ಸಡಿಲಿಕೆ ಬಳಿಕ ಇಂದು‌ ವಿಮಾನದಲ್ಲಿ ಬೆಂಗಳೂರಿಗೆ ಆಗಮಿಸಿದ ಅವರು ಹೋಂ ಕ್ವಾರಂಟೇನ್ ನಲ್ಲಿರಲು ನಿರ್ಧರಿಸಿದ್ದಾರೆಂದು ತಿಳಿದುಬಂದಿದೆ.

ಸರಕಾರದ ಮಾರ್ಗಸೂಚಿ ಪ್ರಕಾರ ದೆಹಲಿ ಸೇರಿದಂತೆ ಹಲವು ರಾಜ್ಯಗಳಿಂದ ಬಂದವರಿಗೆ ಏಳು ದಿನಗಳ ಹೋಟೆಲ್ ಕ್ವಾರಂಟೇನ್ ಮತ್ತು ಏಳು ದಿನಗಳ ಹೋಂ ಕ್ವಾರಂಟೇನ್ ಅನಿವಾರ್ಯವಾಗಿದೆ. ಆದರೆ ಜವಾಬ್ದಾರಿಯುತ ಜನಪ್ರತಿನಿಧಿಗಳು ಸೇರಿದಂತೆ ಕೆಲವರಿಗೆ ಇದರಲ್ಲಿ ವಿನಾಯಿತಿಯೂ ಇದೆ.

ಈ ಮಧ್ಯೆ ಸದಾನಂದ ಗೌಡರು, ವಿಮಾನ ನಿಲ್ದಾಣದಿಂದ ನೇರವಾಗಿ ಮುಖ್ಯಮಂತ್ರಿ ಕಚೇರಿಗೆ ಹೋಗಿದ್ದಾರೆಂಬ ವರದಿ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದು, ಇದಕ್ಕೆ ಸ್ಪಷ್ಟನೆ ನೀಡಿದ ಸಚಿವರು, ಸಾಕಷ್ಟು ಸುರಕ್ಷಾ ಕ್ರಮಗಳೊಂದಿಗೆ ಬಂದಿದ್ದೇನೆ. ಸರಕಾರದೊಂದಿಗೆ ವಿವಿಧ ಕ್ರಮಗಳ ಕುರಿತಾದ ಮಹತ್ವದ ವಿಷಯ ಚರ್ಚಿಸಬೇಕಿರುವುದು ನನ್ನ ಜವಾಬ್ದಾರಿಯಾಗಿರುವುದರಿಂದ ಹೋಗಿದ್ದೇನೆ ಎಂದಿದ್ದಾರೆ.

 

 

 

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.