ಕೋವಿಡ್ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ಸುಳ್ಯದ ಇನ್ನಷ್ಟು ವೈದ್ಯರು

Advt_Headding_Middle
Advt_Headding_Middle
Advt_Headding_Middle

 

 

 ಮಹಾರಾಷ್ಟ್ರದಲ್ಲಿ ಡಾ.ಕಾವ್ಯಶ್ರೀ, ಬೆಂಗಳೂರಿನಲ್ಲಿ ಡಾ. ವಿಕ್ರಂ ಭಟ್, ಮಂಗಳೂರಿನಲ್ಲಿ ಡಾ. ತಾಜುದ್ದೀನ್ ಕೊರೋನಾ ವಾರಿಯರ್ಸ್

✍️ ದುರ್ಗಾಕುಮಾರ್ ನಾಯರ್ ಕೆರೆ

ಕೊರೋನಾ ಕಾಲದ ಈ ಆತಂಕದ ಮತ್ತು ನಿರ್ಣಾಯಕ ಸಂದರ್ಭದಲ್ಲಿ ಕೋವಿಡ್ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸುವುದು ಕಷ್ಟದ ಮತ್ತು ರಿಸ್ಕಿನ ಕೆಲಸ. ಆದರೆ ಮಾಡಲೇಬೇಕಾದ ಕಾರ್ಯ.

ಸುಳ್ಯ ತಾಲೂಕಿನ ಅನೇಕರು ಈ ಕಾರ್ಯದಲ್ಲಿ ಮುಂಚೂಣಿಯಲ್ಲಿದ್ದು ಜವಾಬ್ದಾರಿಯಿಂದ ಈ ಸೇವೆ ಮಾಡುತ್ತಿರುವ ಸುಳ್ಯದ ಮಟ್ಟಿಗೆ ಹೆಮ್ಮೆ. ಇಂತಹ ಅನೇಕರನ್ನು ಪರಿಚಯಿಸುವ ಮೂಲಕ ಅವರ ಮಾದರಿ ಕಾರ್ಯವನ್ನು ಗೌರವಿಸುವ ಮಾದರಿ ಕಾರ್ಯವನ್ನು ‘ ಸುದ್ದಿ’ ಮಾಡುತ್ತಿದೆ.

ಇದೀಗ ಕೊರೋನಾ ವಾರಿಯರ್ಸ್ ಗಳಾಗಿರುವ ಇಂತಹ ಮತ್ತಷ್ಟು ವೈದ್ಯರ ಮಾಹಿತಿ ಲಭ್ಯ ವಾಗಿದ್ದು, ಓದುಗರ ಮುಂದಿಡುತ್ತಿದ್ದೇವೆ.

ಡಾ. ತಾಜುದ್ದೀನ್ ಅರಂತೋಡು

ಅರಂತೋಡಿನ ಪಾರೆಕಲ್ಲ್ ದಿ. ಮಮ್ಮುಂಞಿಯವರ ಪುತ್ರ ಡಾ. ತಾಜುದ್ಧೀನ್ ಅವರು ಮಂಗಳೂರಿನ
ವೆನ್‌ಲಾಕ್ ಕೋವಿಡ್ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಅರಂತೋಡು ಹಾಗೂ ಸುಳ್ಯಗಳಲ್ಲಿ ವಿದ್ಯಾಭ್ಯಾಸ ನಡೆಸಿದ ಬಳಿಕ ಪುತ್ತೂರಿನ ಸೈಂಟ್ ಫಿಲೋಮಿನಾ ಕಾಲೇಜಿನಲ್ಲಿ ಪಿ.ಯು.ಸಿ ಓದಿದ ತಾಜುದ್ದೀನ್ ಅವರು ನಂತರ ಬೆಳಗಾವಿಯ ಜವಾಹರ್‌ಲಾಲ್ ನೆಹರು ವೈದ್ಯಕೀಯ ವಿದ್ಯಾಲಯದಲ್ಲಿ ಎಂ.ಬಿ.ಬಿ.ಎಸ್. ಪದವಿ ಪಡೆದರು. ಬಳಿಕ ಮೈಸೂರು ವೈದ್ಯಕೀಯ ವಿಶ್ವವಿದ್ಯಾನಿಲಯದಲ್ಲಿ ಎಂ.ಡಿ ಪೂರೈಸಿದರು.
ತರುವಾಯ ಮಂಗಳೂರಿನ ಪ್ರತಿಷ್ಠಿತ ಮಣಿಪಾಲ ವೈದ್ಯಕೀಯ ವಿಶ್ವವಿದ್ಯಾನಿಲಯದಲ್ಲಿ ( ಕೆ.ಎಂ.ಸಿ.) ಪ್ರೊಫೆಸರ್ ಆಗಿ ಕರ್ತವ್ಯಕ್ಕೆ ಸೇರಿದರು. ಅನೇಕ ವರ್ಷಗಳಿಂದ ವೆನ್‌ಲಾಕ್ ಆಸ್ಪತ್ರೆಯಲ್ಲಿ ವೈದ್ಯರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.

ವೆನ್‌ಲಾಕ್ ಆಸ್ಪತ್ರೆ ಇದೀಗ ಕೋವಿಡ್ ಆಸ್ಪತ್ರೆಯಾಗಿರುವುದರಿಂದ ಡಾ. ತಾಜುದ್ದೀನ್ ಪೂರ್ಣ ಪ್ರಮಾಣದಲ್ಲಿ ಅಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಇಲ್ಲಿ ಕೋವಿಡ್ ರೋಗಿಗಳ ಸೇವೆಗೆಂದು ಎರಡು ವೈದ್ಯ ತಂಡಗಳನ್ನು ನೇಮಿಸಲಾಗಿದ್ದು ಒಂದು ತಂಡಕ್ಕೆ ಡಾ. ತಾಜುದ್ಧೀನ್ ನಾಯಕರಾಗಿದ್ದಾರೆ.
ಡಾ. ತಾಜುದ್ದೀನ್ ಅವರು, ಪತ್ನಿ ಹಾಗೂ ಮೂವರು ಮಕ್ಕಳೊಂದಿಗೆ ಮಂಗಳೂರಿನಲ್ಲೇ ನೆಲೆಸಿದ್ದಾರೆ.

” ಪಿ.ಪಿ.ಇ. ಕಿಟ್ ಧರಿಸಿ ಕರ್ತವ್ಯ ನಿರ್ವಹಿಸುವುದು ತುಂಬಾ ಕಷ್ಟದ ಕೆಲಸ. ಈಗ ಸೆಕೆಯಂತೂ ತಡೆಯಲಾಗುವುದಿಲ್ಲ. ಆದರೆ ಸುರಕ್ಷಾ ದೃಷ್ಟಿಯಿಂದ ಇದೆಲ್ಲ ಅನಿವಾರ್ಯ. ವೈದ್ಯರಾಗಿಯೂ ಇಂತಹ ಸಂದರ್ಭದಲ್ಲಿ ನಮ್ಮ ಜವಾಬ್ದಾರಿ ಮೆರೆಯಬೇಕಾಗಿದೆ ಎನ್ನುತ್ತಾರೆ ಡಾ. ತಾಜುದ್ದೀನ್.

ಡಾ. ಕಾವ್ಯಶ್ರೀ ಲೈನ್ಕಜೆ

ಸುಳ್ಯ – ಮಡಿಕೇರಿ ಗಡಿಭಾಗವಾದ ಸಂಪಾಜೆಯ ಅರೆಕಲ್ಲು ಬಳಿಯ ಲೈನ್ಕಜೆಯ ಡಾ. ಕಾವ್ಯಶ್ರೀಯವರು ಮಹಾರಾಷ್ಟ್ರದ ಸೊಲ್ಲಾಪುರದಲ್ಲಿನ ಡಾ.ವೈಶಂಪಾಯನ ಮೆಮೋರಿಯಲ್ ಸರಕಾರಿ ವೈದ್ಯಕೀಯ ಆಸ್ಪತ್ರೆಯಲ್ಲಿ ಕೊರೋನಾ ವಾರಿಯರ್ಸ್ ತಂಡದಲ್ಲಿ ವೈದ್ಯೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಲೈನ್ಕಜೆಯವರಾಗಿದ್ದು ಅನೇಕ ವರ್ಷಗಳಿಂದ ಕೋಲಾರದಲ್ಲಿ ನೆಲೆಸಿರುವ ಚಂದ್ರಶೇಖರ ಲೈನ್ಕಜೆ ಹಾಗೂ ಶ್ರೀಮತಿ ಭಾರತಿಯವರ ಪುತ್ರಿ ಕಾವ್ಯಶ್ರೀ. ಲೈನ್ಕಜೆಯ ದಿ. ಸಿದ್ಧಿ ಗಣಪತಿ ಭಟ್ ಅವರ ಮೊಮ್ಮಗಳು.

ಚಂದ್ರಶೇಖರ್‌ರವರು ಕೆ.ಜಿ.ಎಫ್‌ನಲ್ಲಿರುವ ಬಿ.ಇ.ಎಂ.ಎಲ್ ಕಂಪೆನಿಯ ಉದ್ಯೋಗಿಯಾಗಿದ್ದರೆ, ತಾಯಿ ಭಾರತಿಯವರು ಯೋಗ ಶಿಕ್ಷಕಿಯಾಗಿದ್ದಾರೆ.
ಕೋಲಾರದಲ್ಲಿ ಶಿಕ್ಷಣ ಮುಗಿಸಿದ ಬಳಿಕ ರಾಯಚೂರು ಸರಕಾರಿ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಎಂ.ಬಿ.ಬಿ.ಎಸ್ ಪೂರೈಸಿದ ಕಾವ್ಯಶ್ರೀಯವರು ಬಳಿಕ ಸೊಲ್ಲಾಪುರ ಡಾ.ವೈಶಂಪಾಯನ ಮೆಮೋರಿಯಲ್ ಸರಕಾರಿ ವೈದ್ಯಕೀಯ ಆಸ್ಪತ್ರೆಯಲ್ಲಿ ಒಂದು ವರ್ಷದಿಂದ ಸ್ತ್ರೀ ರೋಗದಲ್ಲಿ ಎಂ.ಡಿ ಪದವಿ ಪಡೆಯುತ್ತಿದ್ದಾರೆ. ಜತೆಗೆ ವೈದ್ಯರಾಗಿಯೂ ಸೇವೆಸಲ್ಲಿಸುತ್ತಿದ್ದು ಇದೀಗ ಕೋವಿಡ್ ವಾರಿಯರ್ಸ್ ತಂಡದಲ್ಲಿದ್ದಾರೆ.

ಮಹಾರಾಷ್ಟ್ರವೆಂದರೆ ದೇಶದಲ್ಲಿಯೇ ಅತ್ಯಧಿಕ ಕೊರೋನಾ ಕೇಸ್‌ಗಳಿರುವ ರಾಜ್ಯ. ಹೀಗಾಗಿ ಇಲ್ಲಿ ಕರ್ತವ್ಯ ನಿರ್ವಹಿಸುವುದೆಂದರೆ ತೀರಾ ರಿಸ್ಕ್. ಇಲ್ಲಿಯ ಕೆಲವು ವೈದ್ಯರಿಗೆ, ನರ್ಸ್ ಗಳಿಗೂ ಕೊರೋನಾ ಪಾಸಿಟಿವ್ ಬಂದಿದೆ. ಇಂತಹ ಸ್ಥಿತಿಯಲ್ಲಿ ಡಾ. ಕಾವ್ಯಶ್ರೀಯವರು ಇಲ್ಲಿ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ.

“ಪಿ.ಪಿ.ಇ ಕಿಟ್ ಧರಿಸಿ ಕೆಲಸ ಮಾಡುವುದಂತೂ ಸಿಕ್ಕಾಪಟ್ಟೆ ಕಷ್ಟದ ಕೆಲಸ. ಇಲ್ಲಿ ಪಿ.ಪಿ.ಇ ಕಿಟ್ ಸರಬರಾಜು ಆಗುವುದು ಕೂಡಾ ಕಡಿಮೆ. ಹೀಗಾಗಿ ಮತ್ತೆ ಮತ್ತೆ ಬಳಸಬಹುದಾದ ಕಿಟ್ ಗಳನ್ನು ಉಪಯೋಗಿಸಲಾಗುತ್ತಿದೆ. ಅನೇಕ ಸವಾಲುಗಳ ಮಧ್ಯೆ ವೃತ್ತಿ ಸೇವೆ ನಡೆಸಬೇಕಾಗಿದೆ” ಎನ್ನುತ್ತಾರೆ ಡಾ. ಕಾವ್ಯಶ್ರೀ. “ಕೋವಿಡ್ ಬ್ಲಾಕ್‌ನಲ್ಲಿ ಡ್ಯೂಟಿ ಮಾಡಿದಾಗ ಅಸ್ಪತ್ರೆಯಲ್ಲೇ ಐಸೋಲೆಟ್ ಆಗಿರುತ್ತೇವೆ. ಉಳಿದ ಸಮಯದಲ್ಲಿ ಹಾಸ್ಟೆಲ್‌ನಲ್ಲಿ ವಾಸ್ತವ್ಯದಲ್ಲಿರುತ್ತೇವೆ” ಎನ್ನುತ್ತಾರೆ.

ದೂರದಲ್ಲಿದ್ದರೂ ಕಾವ್ಯಶ್ರೀಯವರು ಪ್ರತಿ ವರ್ಷ ರಜಾ ಕಾಲದಲ್ಲೂ ಅಪ್ಪ ಅಮ್ಮನೊಂದಿಗೆ ಊರಿಗೆ ಬರುತ್ತಾರೆ. ಲೈನ್ಕಜೆ ಮನೆ, ಕಾಡಿನ ನೆನಪುಗಳು, ಸುಳ್ಯದ ರಂಗಮನೆಯ ನೆನಪುಗಳು ಈಗಲೂ ಹಸಿರಾಗಿದೆ ಎನ್ನುತ್ತಾರೆ ಕಾವ್ಯಶ್ರೀ.

ಡಾ.ಕಾವ್ಯಶ್ರೀಯವರಿಗೆ ಕೆಲವು ತಿಂಗಳ ಹಿಂದಷ್ಟೇ ವಿವಾಹ ನಿಶ್ಚಿತಾರ್ಥವಾಗಿದೆ. ಮದುವೆಯಾಗುವ ವರ ಕೂಡ ವೈದ್ಯ. ಮುಂಬೈಯಲ್ಲಿದ್ದಾರೆ. ವಿಶೇಷವೆಂದರೆ ಇಬ್ಬರೂ ಬೇರೆ ಬೇರೆ ಕಡೆ ರೆಡ್‌ಝೋನ್‌ಗಳಲ್ಲಿ ಕೆಲಸ ಮಾಡುತ್ತಿದ್ದಾರೆ.

ಡಾ‌. ವಿಕ್ರಮ್ ಭಟ್ ಸಂಕಬಿತ್ತಿಲು

ದೊಡ್ಡತೋಟ ಸಮೀಪದ ಸಂಕಬಿತ್ತಿಲಿನವರಾಗಿದ್ದು, ಪ್ರಸ್ತುತ ಮಂಗಳೂರಿನಲ್ಲಿ ವೈದ್ಯರಾಗಿರುವ
ಡಾ.ಜಿ.ಕೆ.ಭಟ್ ಸಂಕಬಿತ್ತಿಲು (ಕರ್ನಾಟಕ ವೈದ್ಯಕೀಯ ಮಂಡಳಿ ಸದಸ್ಯ, ಐ.ಎಂ.ಎ. ರಾಜ್ಯ ಉಪಾಧ್ಯಕ್ಷ ) ಹಾಗೂ ಸ್ತ್ರೀರೋಗ ತಜ್ಞೆ ಡಾ. ಉಷಾ ಜಿ.ಕೆ. ಭಟ್ ರವರ ಪುತ್ರ ಡಾ ವಿಕ್ರಮ್ ಜಿ.ಕೆ.ಭಟ್‌ ಅವರು ಬೆಂಗಳೂರಿನ ಕೋವಿಡ್ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಮಂಗಳೂರಿನ ಕೆ.ಎಂ.ಸಿ.ಯಲ್ಲಿ ಎಂ.ಬಿ.ಬಿ.ಎಸ್. ಪದವಿ ಗಳಿಸಿದ ಬಳಿಕ ಪ್ರಸ್ತುತ ಬೆಂಗಳೂರು ವೈದ್ಯಕೀಯ ಕಾಲೇಜು ಹಾಗೂ ಸಂಶೋಧನಾ ಸಂಸ್ಥೆಯಲ್ಲಿ ದ್ವಿತೀಯ ವರ್ಷದ ಎಂ.‌ಎಸ್ (ಆರ್ಥೋಪಿಡಿಕ್ಸ್) ಅಭ್ಯಸಿಸುತ್ತಿದ್ದು,
ಮೇ.23 ರಿಂದ ಬೆಂಗಳೂರು ವಿಕ್ಟೋರಿಯಾ ಆಸ್ಪತ್ರೆಯ ಕೋವಿಡ್ ವಾರ್ಡಿನಲ್ಲಿ ವೈದ್ಯಕೀಯ ಸೇವೆ ನೀಡುತ್ತಿದ್ದಾರೆ.

” ಕೆಲಸದ ಅನುಭವ ಖುಷಿ ಕೊಡುತ್ತಿದೆ. ಇಲ್ಲಿ ಎಲ್ಲ ಸುರಕ್ಷ ಕ್ರಮಗಳೂ ಇವೆ. ಪಿ.ಪಿ.ಇ. ಕಿಟ್ ಧರಿಸಿ ಡ್ಯೂಟಿ ಮಾಡುವುದು ಹೊಸ ಅನುಭವ ಎನ್ನುತ್ತಾರೆ” ಡಾ. ವಿಕ್ರಮ್ ಭಟ್

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.