ಸರಕಾರದ 5 ಸಾವಿರ ಪಡೆಯಲು `ಬ್ಯಾಡ್ಜ್’ ಕಡ್ಡಾಯ

Advt_Headding_Middle
Advt_Headding_Middle

➡️ ಸೌಲಭ್ಯದಿಂದ ವಂಚಿತರಾಗುವ ಶೇ. 60 ರಿಕ್ಷಾ ಚಾಲಕರು

✍️ ಹರೀಶ್ ಬಂಟ್ವಾಳ್

ಕೊರೊನಾ ಲಾಕ್ ಡೌನ್‌ನಿಂದ ಸಂಪಾದನೆ ಇಲ್ಲದೆ ಜೀವನ ನಡೆಸುವುದೇ ಕಷ್ಟವೆನಿಸಿದ್ದ ಅಗಸರಿಗೆ, ಕ್ಷೌರಿಕರಿಗೆ, ಚಮ್ಮಾರರಿಗೆ ಹಾಗೂ ಅಟೋ ರಿಕ್ಷಾ -ಟ್ಯಾಕ್ಸಿ ಚಾಲಕರಿಗೆ ತಲಾ 5000 ರೂ.ಗಳನ್ನು ಸಹಾಯಧನವಾಗಿ ನೀಡಲಾಗುವುದೆಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರವರು ಘೋಷಣೆ ಮಾಡಿ ಎರಡು ವಾರ ಕಳೆದರೂ ನಿಯಮಾವಳಿ ರಚಿಸಲಾಗಿರಲಿಲ್ಲ. ಇದೀಗ ಅಟೋ ರಿಕ್ಷಾ ಚಾಲಕರು ಮತ್ತು ಟ್ಯಾಕ್ಸಿ ಚಾಲಕರಿಗೆ ಸಹಾಯಧನಕ್ಕಾಗಿ ಅರ್ಜಿ ಸಲ್ಲಿಸಲು ಸೇವಾ ಸಿಂಧು ಎಂಬ ವೆಬ್‌ಸೈಟ್ ಸಿದ್ಧಗೊಳಿಸಲಾಗಿದೆ. ಆದರೆ ಇದರಲ್ಲಿ `ಬ್ಯಾಡ್ಜ್` ಕಡ್ಡಾಯವಾಗಿರುವುದರಿಂದ ಬ್ಯಾಡ್ಜ್ ಇಲ್ಲದ ರಾಜ್ಯದ ಲಕ್ಷಾಂತರ ರಿಕ್ಷಾ ಚಾಲಕರು ಸರಕಾರದ ಸೌಲಭ್ಯದಿಂದ ವಂಚಿತರಾಗುವ ಆತಂಕಕ್ಕೆ ಒಳಗಾಗಿದ್ದಾರೆ.

ಯಾವ ವಾಹನ ಚಲಾಯಿಸಬೇಕಾದರೂ ಡ್ರೈವಿಂಗ್ ಲೈಸೆನ್ಸ್ ಬೇಕಾಗುತ್ತದೆ. ಬಾಡಿಗೆ ವಾಹನ ಓಡಿಸಬೇಕಾದರೆ ಸಾರಿಗೆ ಇಲಾಖೆಯಿಂದ ಡಿ.ಎಲ್.ನ ಜತೆಗೆ ಬ್ಯಾಡ್ಜ್ ಆರಂಭದಲ್ಲಿ ಬ್ಯಾಡ್ಜ್‌ಗೆ ಪ್ರತ್ಯೇಕ ಶರತ್ತುಗಳಿರಲಿಲ್ಲ. ಆದರೆ 5 – 10 ವರ್ಷಗಳ ಹಿಂದೆ
ಬ್ಯಾಡ್ಜ್‌ಗೆ 10 ನೇ ತರಗತಿ ವಿದ್ಯಾಭ್ಯಾಸ ಕಡ್ಡಾಯಗೊಳಿಸಿದ್ದರಿಂದ ಬ್ಯಾಡ್ಜ್ ಮಾಡಿಸುವವರ ಸಂಖ್ಯೆ ಕಡಿಮೆಯಾಗತೊಡಗಿತು. ಅದೇ ಸಂದರ್ಭ ಬಾಡಿಗೆ ವಾಹನ ಓಡಿಸುವವರಿಗೆ ಬ್ಯಾಡ್ಜ್ ಕಡ್ಡಾಯ ಸರಿಯಲ್ಲ ಎಂಬ ಅಭಿಪ್ರಾಯಗಳು ಬರತೊಡಗಿದುದರಿಂದ ಸ್ವಯಂ ಆಗಿ ಬ್ಯಾಡ್ಜ್ ಮಾಡಿಸುವವರ ಮತ್ತು ಹಿಂದೆ ಮಾಡಿಸಿದ ಬ್ಯಾಡ್ಜ್ ಅನ್ನು ನವೀಕರಣ ಮಾಡಿಸುವವರ ಸಂಖ್ಯೆ ಕಡಿಮೆಯಾಯಿತು.

2017 ರಲ್ಲಿ ಬಂದ ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ಸಾರಿಗೆ ಇಲಾಖೆ ಕೂಡಾ ಬ್ಯಾಡ್ಜ್ ಮಾಡಿಸಬೇಕೆಂಬ ಶರತ್ತು ಜಾರಿಗೊಳಿಸದ ಕಾರಣ ಅದು ನೆನೆಗುದಿಗೆ ಬಿದ್ದಿತು.
ಸರಕಾರ ಘೊಷಿಸಿರುವ 5 ಸಾವಿರ ರೂ. ಪಢೆಯಲು ಬ್ಯಾಡ್ಜ್ ಬೇಕಂತೆ ಎಂಬ ಮಾಹಿತಿಗಳು ದೊರೆತ ಹಿನ್ನೆಲೆಯಲ್ಲಿ ರಿಕ್ಷಾ ಚಾಲಕರು ಮತ್ತು ರಿಕ್ಷಾ ಚಾಲಕರ ಸಂಘದವರು ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಮನವಿ ನೀಡಿ `ಬ್ಯಾಡ್ಜ್ ಇಲ್ಲದ ರಿಕ್ಷಾ ಚಾಲಕರಿಗೂ ಸರಕಾರದ ಕೊರೊನಾ ಸಹಾಯಧನ ನೀಡಬೇಕೆಂದು’ ಒತ್ತಾಯಿಸಿದ್ದರು.
ಆದರೆ ಇದೀಗ ಸೇವಾ ಸಿಂಧು ವೆಬ್‌ಸೈಟ್ ಮೂಲಕ ಆನ್‌ಲೈನ್ ಅರ್ಜಿ ತೆಗೆದುಕೊಳ್ಳಲು ಆರಂಭಿಸಿದ್ದಾರೆ. ಅದರಲ್ಲಿ ಬ್ಯಾಡ್ಜ್ ನಂಬರ್ ಎಂಬ ಕಾಲಂ ಇದ್ದು ಅಲ್ಲಿ ಬ್ಯಾಡ್ಜ್ ನಂಬರ್ ಹಾಕಿದರೆ ಮಾತ್ರ ಅರ್ಜಿ ಅಪ್‌ಲೋಡ್ ಆಗುತ್ತದೆ. ಇದರಿಂದಾಗಿ ಬ್ಯಾಡ್ಜ್ ಇಲ್ಲದವರಿಗೆ ಅರ್ಜಿ ಹಾಕಲು ಸಾಧ್ಯವಾಗುತ್ತಿಲ್ಲ. ಕರ್ನಾಟಕ ರಾಜ್ಯದಲ್ಲಿರುವ ರಿಕ್ಷಾ ಚಾಲಕರುಗಳಲ್ಲಿ ಅರ್ಧಕ್ಕಿಂತ ಹೆಚ್ಚು ಚಾಲಕರಿಗೆ ಬ್ಯಾಡ್ಜ್ ಇಲ್ಲ. ಸುಳ್ಯ ತಾಲೂಕಿನಲ್ಲಿರುವ ರಿಕ್ಷಾ ಚಾಲಕರಲ್ಲಿ 60 ಶೇಕಡಾ ಚಾಲಕರಿಗೆ ಬ್ಯಾಡ್ಜ್ ಇಲ್ಲ. ಸರಕಾರ ಈ ಚಾಲಕರನ್ನು ಹೊರಗಿಟ್ಟರೆ ಬಹುಭಾಗ ಚಾಲಕರು ಸೌಲಭ್ಯ ವಂಚಿತರಾಗುವುದು ಗ್ಯಾರಂಟಿ. ಹೀಗಾಗದಂತೆ ಸರಕಾರ ಸೂಕ್ತಕ್ರಮ ಕೈಗೊಳ್ಳಬೇಕಾಗಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.