ತಮಿಳುನಾಡ್ ನಿಂದ ಬಂದ ಸುಳ್ಯದ ಯುವಕರಿಗೆ ಸುಳ್ಯದಲ್ಲಿ ಕ್ವಾರಂಟೈನ್ : ಆಹಾರ ಪೂರೈಕೆ ಮಾಡಿ ಸಹಕರಿಸಿದ ಎಸ್ಸೆಸ್ಸೆಫ್ ಹಾಗೂ ಎಸ್.ವೈ.ಎಸ್ ತುರ್ತು ಸೇವಾ ತಂಡ

Advt_Headding_Middle
Advt_Headding_Middle

 

ತಿಂಗಳುಗಳ ಮೊದಲು ತಮಿಳುನಾಡಿಗೆ ಕೆಲಸ ನಿಮಿತ್ತ ತೆರಳಿದ್ದ ಸುಳ್ಯದ ಆಸುಪಾಸಿನ ಏಳು ಮಂದಿ ಯುವಕರು ಲಾಕ್ ಡೌನ್ ಆದ ದಿನದಿಂದ ಊರಿಗೆ ಮರಳಲಾಗದೆ ಸಂಕಷ್ಟದಲ್ಲಿದ್ದರು. ತಮಿಳುನಾಡಿನಲ್ಲಿಯೇ ಎರಡು ತಿಂಗಳಿಗಿಂತಲೂ ಹೆಚ್ಚು ದಿನಗಳು ಕೆಲಸವಿಲ್ಲದೆ ಕಳೆದರು. ಮುಂದಕ್ಕೆ ಅಲ್ಲಿಯೇ ದಿನದೂಡಲು ಅಥವಾ ಊರಿಗೆ ಬರಲು ಖರ್ಚಿಗೆ ಹಣವಿಲ್ಲದೆ ಸಂಕಷ್ಟದಲ್ಲಿರುವಾಗ ಊರಿನ ಎಸ್ಸೆಸ್ಸೆಫ್ ನ ನಾಯಕರೊಂದಿಗೆ ಸಂಪರ್ಕಿಸಿ ಸಹಾಯವನ್ನು ಕೋರಿದರು. ಅದರಂತೆ ಅವರನ್ನು ಕರೆತಂದು ನಿಯಮಾನುಸಾರ ಸುಳ್ಯದಲ್ಲಿ ಕ್ವಾರಂಟೈನ್ ನಲ್ಲಿರಿಸಲಾಯಿತು. ಅವರ ಯಾತ್ರಾ ಖರ್ಚಿಗೆ ಸಹಾಯ ಹಾಗೂ ಅವರಿಗೆ ಕ್ವಾರಂಟೈನ್ ನಲ್ಲಿರುವಾಗ ಬೇಕಾದ ಆಹಾರ ಎಲ್ಲವನ್ನೂ ಉಚಿತವಾಗಿ ಎಸ್ಸೆಸ್ಸೆಫ್ ಹಾಗೂ ಎಸ್ ವೈ ಎಸ್ ತುರ್ತು ಸೇವಾ ತಂಡದ ವತಿಯಿಂದ ಮಾಡಿ ಮಾನವೀಯತೆಯನ್ನು ಮೆರೆದರು. ರಂಝಾನ್ ತಿಂಗಳ ಉಪವಾಸಕ್ಕೆ ತೊಂದರೆಯಾಗಬಾರದೆಂಬ ನಿಟ್ಟಿನಲ್ಲಿ ಉತ್ತಮ ಆಹಾರ ವ್ಯವಸ್ಥೆಯನ್ನು ಸಮಯೋಚಿತವಾಗಿ ತಲುಪಿಸಲಾಗಿದೆ. ತುರ್ತು ಸೇವಾ ತಂಡದ ಸದಸ್ಯರು ಇದಕ್ಕಾಗಿ ಉತ್ತಮ ಕಾರ್ಯಾಚರಣೆ ನಡೆಸಿ ಎಲ್ಲರಿಂದಲೂ ಪ್ರಶಂಸೆಗೆ ಪಾತ್ರರಾದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.