Breaking News

ಮರೆಯಾಯ್ತು ಭಾರತದ ಹಾಕಿ ದಂತಕಥೆ…

Advt_Headding_Middle
Advt_Headding_Middle
Advt_Headding_Middle

ಭಾರತದ ರಾಷ್ಟ್ರೀಯ ಕ್ರೀಡೆ ಹಾಕಿ. ಈ ಕ್ರೀಡೆಯಲ್ಲಿ ತನ್ನನ್ನು ತೊಡಗಿಸಿಕೊಂಡು ಸತತ ಮೂರು ಬಾರಿ ಒಲಿಂಪಿಕ್ ಹಾಕಿ ಸ್ಪರ್ಧೆಯಲ್ಲಿ ಭಾರತಕ್ಕೆ ಚಿನ್ನದ ಪ್ರಾಧಿಕಾರದಲ್ಲಿ ಪ್ರಮುಖ ಪಾತ್ರ ವಹಿಸಿದ್ದು ಮಾತ್ರವಲ್ಲದೆ, ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕೆ ಹಲವು ಮಹತ್ತರ ಪಂದ್ಯಗಳನ್ನು ಗೆದ್ದು ಕೊಟ್ಟು ಹಾಕಿ ದಂತಕಥೆ ಎಂದೇ ಕರೆಸಿಕೊಂಡ ಬಲ್ಬೀರ್ ಸಿಂಗ್ ನಿನ್ನೆ ಇಹಲೋಕ ತ್ಯಜಿಸಿದ್ದಾರೆ.

ಬಲ್ಬೀರ್ ಸಿಂಗ್ 1924 ಅಕ್ಟೋಬರ್ 19ರಂದು ಪಂಜಾಬಿನ ಹರಿಪುರ ಖಾಲ್ಸದಲ್ಲಿ ಜನಿಸಿದರು. ಇವರ ತಂದೆ ದುಲೀಪ್ ಸಿಂಗ್ ರವರು ಸ್ವತಂತ್ರ ಹೋರಾಟಗಾರರು ಹೌದು. ಬಲ್ಬೀರ್ ಭಾರತದ ಮಾಜಿ ಹಾಕಿ ಕ್ರೀಡಾಪಟು ಮಾತ್ರವಲ್ಲದೆ ಭಾರತ ಹಾಕಿ ತಂಡದ ಅತ್ಯಂತ ಯಶಸ್ವಿ ಆಟಗಾರನಾಗಿ ದೇಶದ ಹೆಸರನ್ನು ವಿಶ್ವಕ್ಕೆ ಮತ್ತೊಮ್ಮೆ ಪರಿಚಯಿಸಿದವರು.

1936 ರ ಒಲಿಂಪಿಕ್ ನಲ್ಲಿ ಭಾರತ ಹಾಕಿ ತಂಡದ ಗೆಲುವಿನ ಕುರಿತಾದ ಸಿನಿಮಾವೊಂದನ್ನು ನೋಡಿದ ಇವರಿಗೆ ಆ ಸಿನಿಮಾ ತನ್ನ ಮೇಲೆ ಅಷ್ಟು ಪರಿಣಾಮ ಬೀರಬಹುದೆಂದು ಗೊತ್ತಿರಲಿಲ್ಲ. ಹೇಗೆ ಹಾಕಿ ಸ್ಟಿಕ್ ಹಿಡಿದುಕೊಂಡು ಧ್ಯಾನ್ ಚಂದ್ ಮಾಡಿದ ಕೈ ಚಮತ್ಕಾರದಿಂದ ನಿಬ್ಬೆರಗಾದರು ಮತ್ತು ಗಾಢವಾಗಿ ಪ್ರೇರಿತರಾದರು.

ತನ್ನ ಪ್ರಾಥಮಿಕ ಪ್ರೌಢ ಶಿಕ್ಷಣ ಮುಗಿಸಿ ಕಾಲೇಜ್ ಮೆಟ್ಟಿಲು ಹತ್ತಿದ್ದರು.ಖಾಲ್ಸ ಕಾಲೇಜಿನ ಹಾಕಿ ತಂಡದ ಭರವಸೆಯ ಆಟಗಾರನೆಂದು ಗುರುತಿಸಿಕೊಂಡರು. ಮತ್ತು ಅಲ್ಲಿನ ತರಬೇತುದಾರರಾದ ಹರ್ಬೇಲ್ ಅವರ ನೆಚ್ಚಿನ ಶಿಷ್ಯನು ಆಗಿದ್ದರು. ತದನಂತರ ಹರ್ಬೇಲ್ ಅವರ ಮಾರ್ಗದರ್ಶನದಡಿ ಕಠಿಣ ಪರಿಶ್ರಮ ಮತ್ತು ಸತತ ಪ್ರಯತ್ನದಿಂದ ಬಲ್ಬೀರ್ ಸಿಂಗ್ ಅವರು ಸಾಧನೆ ಮಾಡಲು ಸಾಧ್ಯವಾಯಿತು.
ಹೆಲ್ಸಿಂಕಿ ಮತ್ತು ಮೆಲ್ಬರ್ನ್ ನಲ್ಲಿ ನಡೆದ ಒಲಿಂಪಿಕ್ ನಲ್ಲಿ ಭಾರತೀಯ ರಾಷ್ಟ್ರೀಯ ಹಾಕಿ ತಂಡದ ತರಬೇತುದಾರರಾಗಿ ಹರ್ಬೇಲ್ ಅವರನ್ನೇ ನೇಮಿಸಿತ್ತು. ಗುರು-ಶಿಷ್ಯರ ಈ ಜೋಡಿ ಭಾರತಕ್ಕೆ ಒಲಿಂಪಿಕ್ ನಲ್ಲಿ ಚಿನ್ನದ ಪದಕ ತಂದುಕೊಡುವಲ್ಲಿ ಯಶಸ್ವಿಯಾಯಿತು.

ವಿಶ್ವವಿದ್ಯಾನಿಲಯ ಮಟ್ಟದಲ್ಲಿ ಪಂದ್ಯಗಳನ್ನು ಆಡುತ್ತಾ ಮುಂದೆ ರಾಷ್ಟ್ರೀಯ ತಂಡವನ್ನು ಸಹ ಪ್ರತಿನಿಧಿಸಿದ ಬಲ್ಬೀರ್ 1948 – 1956 ಈ ಅವಧಿಯಲ್ಲಿ ನಡೆದ ಮೂರು ಒಲಿಂಪಿಕ್ ನಲ್ಲಿ ಭಾರತದ ಹಾಕಿ ತಂಡವನ್ನು ಪ್ರತಿನಿಧಿಸಿ ತಂಡವನ್ನು ಗೆಲುವಿನ ದಡದತ್ತ ಕೊಂಡೊಯ್ದಂತೆ ನಿಜ.
ಬಲ್ಬೀರ್ ಅವರ ಒಲಿಂಪಿಕ್ ಸಾಧನೆಗಳು

1948 ರ ಲಂಡನ್ ಒಲಿಂಪಿಕ್: ಲಂಡನ್ ಒಲಿಂಪಿಕ್ ನ ಭಾರತದ ಎರಡನೇ ಹಾಕಿ ಪಂದ್ಯದಲ್ಲಿ ಅರ್ಜೆಂಟೀನಾ ವಿರುದ್ಧ ಕಾಣಿಸಿಕೊಂಡ ಇವರು ಈ ಪಂದ್ಯದಲ್ಲಿ ಹ್ಯಾಟ್ರಿಕ್ ಗೋಲ್ ಸಹಿತ ಹುಟ್ಟು ಆರು ಗೋಲ್ ಬಾರಿಸಿದರು ಭಾರತದ 9-1 ಗೋಲುಗಳ ಅಂತರದಿಂದ ಗೆಲುವು ಸಾಧಿಸಿತ್ತು.ಹಾಗೆ ಫೈನಲ್ ಪಂದ್ಯದಲ್ಲಿ ಗ್ರೇಟ್ ಬ್ರಿಟನ್ ತಂಡವನ್ನು ಸೋಲಿಸುವ ಮೂಲಕ ಚಿನ್ನದ ಪದಕಕ್ಕೆ ಮುತ್ತಿಟ್ಟರು. ಈ ಚಿನ್ನದ ಪದಕ ಸ್ವತಂತ್ರ ಭಾರತದ ಕ್ರೀಡಾ ಜಗತ್ತಿನಲ್ಲಿ ಮೊದಲನೆಯ ಪ್ರಮುಖ ಸಾಧನೆಯಾಗಿದೆ.

ಹೆಲ್ಸಿಂಕಿ ಒಲಂಪಿಕ್: 1952ರ ಒಲಂಪಿಕ್ ನಲ್ಲಿ ಭಾರತದ ಹಾಕಿ ತಂಡದ ಉಪ ನಾಯಕರಾಗಿದ್ದರು. ತುಂಬಾ ಆತ್ಮವಿಶ್ವಾಸದಿಂದಲೇ ಆಡಿದ ಭಾರತ ತಂಡ ಲೀಗ್ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿ ಸೆಮಿಫೈನಲ್ ಪ್ರವೇಶಿಸಿತು. ಸೆಮಿಫೈನಲ್ನಲ್ಲಿ ಗ್ರೇಟ್ ಬ್ರಿಟನ್ ವಿರುದ್ಧ 3-1 ಗೋಲುಗಳ ಅಂತರದಲ್ಲಿ ಗೆಲುವು ಸಾಧಿಸಿ ಫೈನಲ್ನಲ್ಲಿ ಹಾಲೆಂಡ್ ವಿರುದ್ಧ ಬಲ್ಬೀರ್ ಸಿಂಗ್ ರವರ ಅದ್ಭುತ ಹ್ಯಾಟ್ರಿಕ್ ಗೋಲ್ ನೊಂದಿಗೆ 6-1 ಅಂತರದಿಂದ ಗೆದ್ದು ಬೀಗಿತು.

ಮೆಲ್ಬರ್ನ್ ಒಲಿಂಪಿಕ್: 1956 ರಲ್ಲಿ ಭಾರತ ಹಾಕಿ ತಂಡದ ನಾಯಕರಾದ ಇವರು ಅಫ್ಘಾನಿಸ್ತಾನದ ವಿರುದ್ಧ ಆರಂಭಿಕ ಪಂದ್ಯದಲ್ಲಿ 5 ಗೋಲ್ ಗಳಿಸಿದ್ದರು, ಆದರೆ ನಂತರದಲ್ಲಿ ತೀವ್ರವಾಗಿ ಗಾಯಗೊಂಡು ಲಿಗ್ ಪದಗಳಿಂದ ಹೊರ ಉಳಿಯಬೇಕಾಯಿತು. ನಾಯಕನ ಅನುಪಸ್ಥಿತಿಯಲ್ಲಿ ಸಹ ಲೀಗ್ ನಲ್ಲಿ ಉತ್ತಮ ಪ್ರದರ್ಶನ ನೀಡಿ ಭಾರತದ ಹಾಕಿ ತಂಡ ಸೆಮಿಫೈನಲ್ ಪ್ರವೇಶಿಸಿತ್ತು. ಸೆಮಿ ಮತ್ತು ಫೈನಲ್ ಪಂದ್ಯವನ್ನಾಡಿದ ಬಲ್ಬೀರ್ ಫೈನಲ್ ನಲ್ಲಿ 1-0 ಅಂತರದಿಂದ ಪಾಕಿಸ್ತಾನದ ವಿರುದ್ಧ ಗೆಲುವು ಸಾಧಿಸುವ ಮೂಲಕ ಸತತ ಮೂರನೇ ಬಾರಿ ಹಾಕಿಯಲ್ಲಿ ಒಲಿಂಪಿಕ್ ಪದಕ ತನ್ನದಾಗಿಸಿಕೊಂಡಿತ್ತು .ಮಾತ್ರವಲ್ಲದೆ ಬಲ್ಬೀರ್ ಸಿಂಗ್ ನಾಯಕನಾಗಿಯೂ ಯಶಸ್ವಿಯಾದರು.
ಪ್ರಶಸ್ತಿಗಳು
: ಹಾಕಿಯಲ್ಲಿ ಇವರು ಮಾಡಿದ ಸಾಧನೆಗೆ 1957 ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಪದ್ಮಶ್ರೀ ಪ್ರಶಸ್ತಿ ಪಡೆದ ಮೊದಲ ಕ್ರೀಡಾಪಟು ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.
1980 ರಲ್ಲಿ ಜನಾಭಿಪ್ರಾಯದ ಸಂಗ್ರಹಣೆಯಲ್ಲಿ ಇವರನ್ನು ಶತಮಾನದ ಆಟಗಾರನೆಂದು (ಪ್ಲೇಯರ್ ಆಫ್ ದಿ ಸೆಂಚುರಿ) ಗುರುತಿಸಲಾಯಿತು.
ಅಲ್ಲದೆ 2006ರಲ್ಲಿ ಇವರನ್ನು ಬೆಸ್ಟ್ ಸಿಖ್ ಹಾಕಿ ಪ್ಲೇಯರ್ ಆಫ್ ಆಲ್ ಟೈಮ್ ಎಂದು ಕರೆಯಲಾಯಿತು.

ಹೀಗೆ ಅದ್ಭುತ ಸಾಧನೆ ಮಾಡಿ ಭಾರತದ ಪಾಲಿಗೆ ಮೂರು ಒಲಿಂಪಿಕ್ ಚಿನ್ನದ ಪದಕ ಗೆಲ್ಲಿಸಿ ಕೊಡುವಲ್ಲಿ ಮಹತ್ತರ ಪಾತ್ರವಹಿಸಿ , ಹಾಕಿ ದಂತಕಥೆ ಎಂದೇ ಕರೆಸಿಕೊಂಡ ಬಲ್ಬೀರ್ ಸಿಂಗ್ ನಮ್ಮೆಲ್ಲರನ್ನೂ ಬಿಟ್ಟು ಆಗಲಿರುವುದು ನಿಜಕ್ಕೂ ಬೇಸರದ ಸಂಗತಿ. ಇವರ ಈ ಅಗಲುವಿಕೆ ಗೆ ಇಡಿಯ ಕ್ರೀಡಾ ಜಗತ್ತೇ ಕಂಬನಿ ಮಿಡಿದಿದೆ.

ಸಂದೀಪ್ .ಎಸ್. ಮಂಚಿಕಟ್ಟೆ
ಪ್ರಥಮ ಪತ್ರಿಕೋದ್ಯಮ ವಿಭಾಗ ವಿವೇಕಾನಂದ ಕಾಲೇಜು ಪುತ್ತೂರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.