ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ (IPPB) ಬಗ್ಗೆ ಮಾಹಿತಿ

Advt_Headding_Middle
Advt_Headding_Middle

✍️ ಧನ್ಯಶ್ರೀ ಎ. ಆಡಿಂಜ

ಯೌವನದ ಕಾಲದಲ್ಲಿ ಚೆಕ್ ಲೀಫ್ ಹಿಡ್ಕೊಂಡು ಬ್ಯಾಂಕ್ ಬ್ರಾಂಚ್ ಗಳಲ್ಲಿ ಕ್ಯೂ ನಿಂತು ದುಡ್ಡು ತಗೊಂಡ್ ಮಾತ್ರ ಅನುಭವ ಇರುವ ನಂದನ್ ರಿಗೆ ಈ ಹೊಸ ಮಾದರಿಯ ಇಂಟರ್ನೆಟ್ ಬ್ಯಾಂಕ್, ಮೊಬೈಲ್ ಬ್ಯಾಂಕ್, ಎಸ್ಎಂಎಸ್ ಬ್ಯಾಂಕ್ ಇತ್ಯಾದಿ ಬ್ಯಾಂಕ್ ಗಳು ಅರ್ಥವೇ ಆಗುತ್ತಿರಲಿಲ್ಲ.. ಇತ್ತೀಚೆಗೆ ಮಿಸ್ಕಾಲ್ ಬ್ಯಾಂಕ್ ಬೇರೆ ಬಂದಿದೆ ಎಂದು ‘ಎಲ್ಲೋ ಕೇಳಿ ಇದೇನಪ್ಪಾ ಈ ಪರಿ’? ಎಂದು ಗಾಬರಿ ಬಿದ್ದಿದ್ದಾರೆ..
ಅದಿರಲಿ, ಈಗ ದಿನ ಪತ್ರಿಕೆಗಳಲ್ಲಿ ಟಿ.ವಿ ಯಲ್ಲಿ ಪೇಮೆಂಟ್ ಬ್ಯಾಂಕ್ ಎಂಬ ಹೆಸರು ನೋಡಿ ಆದೇನಿರಬಹುದು ಹೊಸ ಪೀಡೆ ಮೂಲಭೂತ ಚಿಂತನೆ ನಂದನ್ ಅವರನ್ ಕಾಡುತಿತ್ತು. ಈ ಹೆಸರು ಯಾಕಾಗಿ ಬಂತು? ಅದರಲ್ಲಿ ಯಾರು ಯಾರಿಗೆ ಪೇಮೆಂಟ್ ಮಾಡುತ್ತಾರೆ? ಬ್ಯಾಂಕ್ ನಮಗೆ ಪೇಮೆಂಟ್ ಅಥವಾ ನಾವೇ ಬ್ಯಾಂಕ್ ಗೆ……? ಹಾಗಾದರೆ ತುಸು ಕಷ್ಟವೇ . ಸರಿ .. ಈ ಖಾತೆ ತೆರೆಯಲು ಮೋದಿ ಸೆಪ್ಟೆಂಬರ್ 1 ರಂದು ಲೋಕಾರ್ಪಣೆ ಮಾಡಿದ್ದಾರೆ.. ಏನೇ ಇರಲಿ ಇದರಲ್ಲಿ ಏನೋ ಪ್ರಯೋಜನ ಇರುವುದಂತೂ ಸತ್ಯ…
ಇತ್ತೀಚಿನ ದಿನಗಳಲ್ಲಿ ಪೇಮೆಂಟ್ ಬ್ಯಾಂಕ್ ಅನ್ನುವ ಪರಿಕಲ್ಪನೆ ಜನಪ್ರಿಯವಾಗುತ್ತಿದೆ. ಹೌಧು, ಸೆಪ್ಟೆಂಬರ್ 1 , 2018 ರಂದು ದೇಶದ 3250 ಕಡೆಗಳಲ್ಲಿ ಐಪಿಪಿಬಿ ಕಾರ್ಯಾರಂಭ ಮಾಡಿದೆ. ವರ್ಷಾಂತ್ಯದ ಒಳಗಾಗಿ ಎಲ್ಲಾ 1.55 ಲಕ್ಷ ಪೋಸ್ಟ್ ಆಫೀಸ್ ಗಳಲ್ಲಿ ಈ ಸೌಲಭ್ಯ ತೆರೆಯುವ ಇರಾದೆ ಸರಕಾರಕ್ಕೆ ಇದೆ.
ಆದರೂ ಏನಿದು ಪೇಮೆಂಟ್ ಬ್ಯಾಂಕ್? ಹೆಸರೇ ಸೂಚಸುವಂತೆ ಇದು ಜನ ಪೇಮೆಂಟ್ ಅಥವಾ ಪಾವತಿಗಳಿಗೆ ಅನುಕೂಲವಾಗುವಂತಹ ಒಂದು ಬ್ಯಾಂಕ್. ಈ ಖಾತೆಯ ಮೂಲಕ ಮಾಮೂಲಿ ದುಡ್ಡಿನ ವರ್ಗಾವಣೆ, ಪೆನ್ಷನ್ ಪಡೆಯುದು, ವಿದ್ಯುತ್,ನೀರು, ಮೊಬೈಲ್ ಬಿಲ್ ಪಾವತಿ ಇತ್ಯಾದಿ ವ್ಯವಹಾರ ಮಾಡಬಹುದು.
ಹಾಗಾದರೆ ಐಪಿಪಿಬಿ ಖಾತೆಯ ಬಳಕೆ ಹೇಗೆ? ಈ ಖಾತೆಯಡಿಯಲ್ಲಿ ಯಾವುದೇ ಎಟಿಎಂ ಅಥವಾ ಡೆಬಿಟ್ ಕಾರ್ಡ್ ನೀಡಲಾಗುವುದಿಲ್ಲ. ಹಳ್ಳಿಗಳಲ್ಲಿ ಎಟಿಎಂ ಉಪಯೋಗ ಕಷ್ಟ ತಾನೇ? ಅದಕ್ಕೆ ಹೆಚ್ಚಿನ ಬಂಡವಾಳ ಬೇಕು.. ಇಲ್ಲಿ ಖಾತೆದಾರರಿಗೇ ಎಟಿಎಂ ಅಥವಾ ಡೆಬಿಟ್ ಕಾರ್ಡ್ ಬದಲಾಗಿ ಸುಲಭವಾಗಿ ಕೆಲಸ ಮಾಡುವ QR code ಇರುವ ಒಂದು QR ನೀಡಲಾಗುತ್ತಿದೆ., ಏನಿದು QR ಕಾರ್ಡ್ ಎಂದು ನೀವು ಕೇಳಬೇಕಲ್ಲವೆ..??
ಇತ್ತೀಚಿನ ದಿನಗಳಲ್ಲಿ ಹಲವಾರು ಅಂಗಡಿಗಳಲ್ಲಿ ಅಥವಾ ಆಧಾರ್ ಕಾರ್ಡ್ ನಲ್ಲೂ ಸಹ ಒಂದು ಚೌಕಾಕಾರದ ಚಿತ್ರಗಳನ್ನು ನೀವು ಗಮನಿಸಬಹುದು.
ಇಂತಹ ಚೌಕಾಕಾರದ QUICK RESPONSE (QR) ಚಿತ್ರದಲ್ಲಿ ನಿಮ್ಮ ಖಾತೆಯ ಎಲ್ಲಾ ಮಾಹಿತಿಗಳೂ ಕೋಡೆಡ್ ಆಗಿರುತ್ತದೆ. ಆ ಕಾರ್ಡ್ ನ್ ಬಳಸಿ ಮೊಬೈಲ್ ಮೂಲಕ ಅಥವಾ ಮೈಕ್ರೋ ಎಟಿಎಂ ಅನ್ನುವ ಚಿಕ್ಕ ಸ್ಕ್ಯಾನರ್ ಮೇಶಿನು ಮೂಲಕ ವ್ಯವಹಾರ ಮಾಡಲು ಸಾಧ್ಯವಾಗುತ್ತದೆ.. ಇಲ್ಲಿ ಪಿನ್ ಕೋಡ್ ಇರುವುದಿಲ್ಲ..ನಿಮ್ಮ ಹೆಬ್ಬೆಟ್ಟು ನಿಮ್ಮ ಗುರುತು.. “ಏಕ್ದಂ ಅಂಗೂಟ ಛಾಪ್”! ಇದನ್ನೂ ದಿಲ್ಲಿಯಲ್ಲೂ, ಹಳ್ಳಿಯಲ್ಲೂ ಉಪಯೋಗಿಸಬಹುದು. ಬಹುತೇಕ ಮೊಬೈಲ್ ಅಂತರ್ಜಾಲವನ್ನು ಬಳಸಿಕೊಳ್ಳಬಹುದು. ಈ ಪದ್ಧತಿ ಯನ್ನು ದೇಶದ ಯಾವ ಮೂಲೆಯಲ್ಲೂ ಬಳಸಬಹುದು. ಒಟ್ಟು ಈ ವ್ಯವಸ್ಥೆಗೆ ಖರ್ಚು ಕಡಿಮೆ ಹಾಗೂ ಎಲ್ಲೆಡೆ ಸುಲಭವಾಗಿ ಬಳಸುವ ಸೌಕರ್ಯ ಬೇರೆ…
ಹಾಗಾದ್ರೆ ಅಂಚೆ ಕಚೇರಿಯಲ್ಲಿ ಐಪಿಪಿಬಿಯ ಸೌಲಭ್ಯ ವೇನು ಎಂಬುದು ನಂದನ್ ಅವರಿಗೆ ಕುತೂಹಲ..
* ಗೂಗಲ್ ಪ್ಲೇ ಸ್ಟೋರ್ ನಲ್ಲಿ ಐಪಿಪಿ ಬಿ ಆ್ಯಪ್ ನ್ನು ಡೌನ್ಲೋಡ್ ಮಾಡಿ ಅದರ ಮೂಲಕ ಖಾತೆ ತೆರೆಯಬಹುದು.
* ಯಾವ ಖಾತೆಗೂ ಅನ್ವಯವಾಗುವ ಕೆವೈಸಿ ದಾಖಲೆ ಗಳು ಅಗತ್ಯ ( ಆಧಾರ್/ಪಾನ್)..
* ನಿಮ್ಮ ಖಾತೆಯ ಮೇಲೆ ಶೇಕಡಾ 2.75% ಬಡ್ಡಿ ದರ , ಪ್ರತಿ ತ್ರೈಮಾಸಿಕ ಪಾವತಿಗಳ ಹಾಗೇಯೇ ಚೆಕ್ ಬುಕ್ ಸೌಲಭ್ಯವಿಲ್ಲ..
* ಖಾತೆ ಬಳಸಲು ಎಟಿಎಂ ಕಾರ್ಡ್ ನ ಬದಲಾಗಿ QR ಕಾರ್ಡ್ ಗೆ ಯಾವುದೇ ಶುಲ್ಕವಿಲ್ಲ. ಡುಪ್ಲಿಕೇಟ್ ಬೇಕಿದ್ದರೆ ಮಾತ್ರ ರೂ 25 ದಂಡ ಪಾವತಿಸಬೇಕು.
* ಶೂನ್ಯ ಉಳಿಕೆ ಯೊಂದಿಗೆ ಖಾತೆಯನ್ನು ತೆರೆಯಬಹುದು, ನಿರ್ವಹಿಸಬಹುದು..
* ಕನಿಷ್ಠ ಮಾಸಿಕ ಉಳಿಕೆಯ ನಿರ್ಬಂಧ ಇಲ್ಲ
*ಆದ್ರೆ ಖಾತೆಯಲ್ಲಿ ಗರಿಷ್ಟ ಮೊತ್ತದ ಮಿತಿ ರೂಪಾಯಿ ಒಂದು ಲಕ್ಷ ಆಗಿರುತ್ತದೆ. ಈ ಯೋಜನೆ ಯನ್ನೂ ಬಡವರನ್ನು ತೆರೆಯಾಲಾಗಿದೆ.
ಒಂದು ವೇಳೆ ಖಾತೆಯಲ್ಲಿ ರೂಪಾಯಿ ಒಂದು ಲಕ್ಷ ಮಿತಿ ಮೀರಿದರೆ ಹೆಚ್ಚುವರಿ ಹಣವನ್ನು ಪೋಸ್ಟ್ ಆಫೀಸ್ ನ ಸೇವಿಂಗ್ಸ್ ಪಾಸ್ ಬುಕ್ ಗೆ ವರ್ಗಾಯಿಸಬಹುದು.
ಹಾಗೆಯೇ ಇನ್ನೊಂದು ವಿಚಾರ ಐಪಿಪಿಬಿ ಆ್ಯಪ್ ನಿಂದ ಸಹ ಮನೆಯಲ್ಲೇ ಕುಳಿತು ನೆಫ್ಟ್, IMPS ಮಾಡಬಹುದು ಹಾಗೂ ಅಂಚೆ ಕಚೇರಿಯ ಉಳಿತಾಯ ಖಾತೆಯಿಂದ. IPPB ಗೆ ಹಾಗೂ ಐಪಿಪಿಬಿ ಯಿಂದ ಉಳಿತಾಯ ಖಾತೆಗೆ ಹಣ ವರ್ಗಾಯಿಸಬಹುದು ..
ಆದ್ದರಿಂದ ಮನೆ ಬಾಗಿಲಿಗೆ ಬರುವ ಅಂಚೆ ಅಣ್ಣಂದಿರ ಕೈಗೆ ಕೊಟ್ಟು ಹಣ ಕಟ್ಟಿ ರಶೀದಿ ಪಡೆಯಬಹುದು. ಪೋಸ್ಟ್ ಮ್ಯಾನ್ಗಳು ತರುವ ಡಿಜಿಟಲ್ ಪ್ಯಾಡ್ ನಲ್ಲಿ ನೀವು ಬೆರಳಚ್ಚು ಒತ್ತಿ ನಿಮ್ಮ ಇತರ ಬ್ಯಾಂಕ್ ನಿಂದ ಹಣ ವನ್ನು ಡ್ರಾ ಮಾಡಬಹುದು.. ಬೇರೆಯವರಿಗೆ ಹಣ ಕಳುಹಿಸಲು ಕೂಡಾ ಇದೇ ಮಾದರಿ ಅನುಸರಿಸಬಹುದು.. ಐಪಿಪಿಬೀ ಯಿ0ದ ಮನೆ ಬಾಗಿಲಿಗೆ ಬರುವ ಅಂಚೆ ಅಣ್ಣನೇ ನಿಮ್ಮ ಬ್ಯಾಂಕ್ ಆಗಲಿದ್ದಾನೆ….
ಇಷ್ಟೆಲ್ಲಾ ಮಾಹಿತಿ ತಿಳಿದ ನಂದನ್ ರವರು ಇತ್ತೀಚಿನ ಪರಿಸ್ಥಿತಿ ಯಲ್ಲಿ ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ಬಡವರಿಗೆ ತುಂಬಾ ಸಹಕಾರಿಯಾಗಲಿದೆ ಎಂದು ಮನದಲ್ಲಿ ಮೋದಿಗೆ ಕೃತಜ್ಞತೆ ತಿಳಿಸುತ್ತಾ ತಮ್ಮ ಮನೆ ಕಡೆಗೆ ತೆರಳುತ್ತಾರೆ..,…

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.