ಬಾವಿಗೆ ಬಿದ್ದ ಕರುವನ್ನು ರಕ್ಷಿಸಲು ಬಾವಿಗೆ ಇಳಿದ ಸಹೋದರರು ಉಸಿರುಗಟ್ಟಿ ಮೃತ್ಯು

Advt_Headding_Middle
Advt_Headding_Middle
Advt_Headding_Middle
  1. ಕುಂಬಳೆಯ ಬಂದ್ಯೋಡು ಚೇವಾರು ಸಮೀಪದ ಸುಬ್ಬಯ್ಯಕಟ್ಟೆ ಮಜಿಲಾರು ಎಂಬಲ್ಲಿ ಬಾವಿಗೆ ಬಿದ್ದ ಕರುವನ್ನು ರಕ್ಷಿಸಲು ಬಾವಿಗೆ ಇಳಿದ ಸಹೋದರರು ಉಸಿರುಗಟ್ಟಿ ದಾರುಣವಾಗಿ ಮೃತಪಟ್ಟ ಘಟನೆ ಇಂದು ಬೆಳಿಗ್ಗೆ ನಡೆದಿದೆ.

ಮಜಿಲಾರು ನಿವಾಸಿ ದಿ.ಐತ್ತ-ಬಾಗಿ ದಂಪತಿಗಳ ಪುತ್ರರಾದ ನಾರಾಯಣ(45) ಹಾಗೂ ಅವರ ಸಹೋದರ ಸುಳ್ಯ ತಾಲೂಕು ಕೊಲ್ಲಮೊಗರು ಗ್ರಾ.ಪಂ. ಮಾಜಿ ಅಧ್ಯಕ್ಷೆ ಭಾರತೀ ಕಟ್ಟ ಎಂಬವರ ಪತಿ ಶಂಕರ(32) ಮೃತಪಟ್ಟ ದುರ್ದೈವಿಗಳು ಎಂದು ಗುರುತಿಸಲಾಗಿದೆ.

ಜಾಹೀರಾತು

ತಮ್ಮ ಮನೆಯ ಅಂಗಳದಲ್ಲಿ ಮೇಯಲು ಕಟ್ಟಿಹಾಕಿದ್ದ ಕರು ಆಕಸ್ಮಿಕವಾಗಿ ಬಾವಿಗೆ ಬಿದ್ದದ್ದನ್ನು ಗಮನಿಸಿ ಮೊದಲು ನಾರಾಯಣ ಅವರು ಕರುವನ್ನು ಮೇಲೆತ್ತಲು ಬಾವಿಗಿಳಿದು ಅಲ್ಪಹೊತ್ತಲ್ಲಿ ಪ್ರಾಣವಾಯು ಲಭ್ಯವಾಗದೆ ತೊಳಲಾಡುತ್ತಿರುವುದನ್ನು ಕಂಡು ಸಹೋದರ ಶಂಕರ ಕೂಡಾ ಬಾವಿಗಿಳಿದರು. ಇಬ್ಬರೂ ಪ್ರಾಣವಾಯು ಲಭ್ಯವಾಗದೆ ಅಸ್ವಸ್ಥಗೊಂಡು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಕುಂಬಳೆ ಠಾಣಾ ಪೋಲಿಸರು ಪ್ರಕರಣ ದಾಖಲಿಸಿದ್ದಾರೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.