ಮೋಡ ಕವಿಯುತ್ತಿದೆ ಮಳೆಯು ಆರ್ಭಟಿಸಲಿದೆ

Advt_Headding_Middle
Advt_Headding_Middle
Advt_Headding_Middle

✍🏻 ಗಣೇಶ್ ಜಾಲ್ಸೂರು

ಈ ಬಾರಿಯಂತೂ ಬೇಸಿಗೆ ರಜೆ ಬರೀ ಹೆಸರಿಗೆ ಮಾತ್ರ ಸೀಮಿತವಾಯಿತು. .ಶಾಲಾ ಮಕ್ಕಳ ಈ ಶೈಕ್ಷಣಿಕ ವರ್ಷದ ಕೊನೆಯು ನೀರಸವಾಗಿಯೇ ಕೊನೆಗೊಂಡಿತು. ಕಾರಣ ಬಂದೆರಗಿದ ಕೊರೋನಾ ಬಗೆಗಿನ ವಿದ್ಯಮಾನದ ಸಂಗತಿಗಳು. ಕೇಂದ್ರ ಸರಕಾರ ಹಾಗೂ ರಾಜ್ಯ ಸರಕಾರದ ಸೂಚನೆಯಂತೆ ರಾಜ್ಯ ಶಿಕ್ಷಣ ಇಲಾಖೆಯು ಮಕ್ಕಳ ಹಿತದೃಷ್ಟಿಯಿಂದ ಈ ನಿರ್ಧಾರ ವನ್ನು ಕೈಗೊಳ್ಳಲೇಬೇಕಾಯಿತು. ಶಾಲೆಗೆ ರಜೆ ನೀಡುವಂತೆ ಆದೇಶ ನ್ನು ಹೊರಡಿಸಿತು. ಖಂಡಿತವಾಗಿಯೂ ಎಲ್ಲರೂ ಕೂಡ ಈ ನಿರ್ಣಯಕ್ಕೆ ಸಹಮತವನ್ನು ವ್ಯಕ್ತಪಡಿಸಿದರು. ಸರಕಾರ ಸೂಕ್ತ ಸಮಯದ ನಿರ್ಧಾರದಿಂದ ಕೊರೋನಾ ಬಿಗಡಾಯಿಸುವ ಮೊದಲೇ ಮಕ್ಕಳೆಲ್ಲರೂ ಸುರಕ್ಷಿತವಾಗಿ ಮನೆ ಸೇರುವಂತಾಯಿತು. ಆದರೆ ಶಾಲೆಯಲ್ಲಿಯೇ ನಿತ್ಯ ಪಾಠ ಕಲಿತು ಪರೀಕ್ಷೆಯನ್ನು ಬರೆದು ಫಲಿತಾಂಶದಲ್ಲಿ ತೇರ್ಗಡೆ ಹೊಂದಿ, ಫಲಿತಾಂಶ ಸುದ್ದಿಯನ್ನು ಮನೆಗೆ ಹೊತ್ತೊಯ್ದು ಖುಷಿ ಪಡುತ್ತಿದ್ದ ಕ್ಷಣವೆಲ್ಲವೂ ಈ ಬಾರಿ ಸ್ಥಬ್ದ ವಾಯಿತು. ಫಲಿತಾಂಶದ ಪ್ರಕಟಣೆಯೂ ಒಂದರಿಂದ ಒಂಬತ್ತನೆಯ ವಿದ್ಯಾರ್ಥಿಗಳು ನೇರವಾಗಿ ಮುಂದಿನ ತರಗತಿಗೆ ಅರ್ಹತೆ ಪಡೆದುಕೊಂಡರು.ಅಲ್ಲಿಗೆ ಪರೀಕ್ಷೆ ಫಲಿತಾಂಶದ ಗೊಂದಲಗಳಿಗೆ ತೆರೆ ಎಳೆಯಲಾಯಿತು.ಎಸ್ಸೆಸ್ಸೆಲ್ಸಿ ಪರೀಕ್ಷೆ ಯ ಕುರಿತಂತೆ ಮರು ವೇಳಾಪಟ್ಟಿ ಅಧಿಕೃತವಾಗಿ ಪ್ರಕಟಗೊಂಡಿದೆ ವಿದ್ಯಾರ್ಥಿಗಳಿಗೆ ಯಾವುದೇ ಆತಂಕಗಳು ಇಲ್ಲದೇ ನಿರಾಂತಕವಾಗಿ ನಡೆಯಬಹುದು..ಆದರೆ ದಿನೇ ದಿನೇ ಕೊರೋನಾ ಸಮಸ್ಯೆ ಬಿಗಡಾಯಿಸುತ್ತಲೇ ಇರುವುದರಿಂದ ಮಕ್ಕಳ ಆರೋಗ್ಯ ಕಾಳಜಿಯ ಬಗ್ಗೆ ಸರಕಾರ ಎಲ್ಲಾ ವ್ಯವಸ್ಥೆಗಳನ್ನು ಸಿದ್ದಗೊಳಿಸುತ್ತಿದೆ. ಆದರೆ ಈಗಾಗಲೇ ಹೇಳಿದಂತೆ ಒಂದರಿಂದ ಒಂಬತ್ತನೇ ತರಗತಿಯ ಮಕ್ಕಳು ಕೊರೋನಾ ಆತಂಕದಿಂದ ದೂರವಾಗಿ ಸುರಕ್ಷಿತವಾಗಿ ಮನೆಯಲ್ಲಿ ಉಳಿದರು.ಅಂತೆಯೇ. ಶಿಕ್ಷಕರು ಪಾಲಕರು ಪೋಷಕರು ಶಾಲಾಆಡಳಿತ ಸಮಿತಿ ವಿದ್ಯಾಭಿಮಾನಿಗಳು ಎಲ್ಲರೂ ನಿರಾಳವಾದರು.

ಮತ್ತೊಮ್ಮೆ ನೆನಪಿಸುವುದಾದರೆ ವಿದ್ಯಾರ್ಥಿ ಜೀವನದಲ್ಲಿ ಬರುವ ಬೇಸಿಗೆ ರಜೆಯ ಮಜದ ಖುಷಿ ಯೇ ಅದ್ಬುತ. ಶಾಲೆಗೆ ಈ ದಿನ ರಜಾ ಎನ್ನುವಂತೆ ಏಪ್ರಿಲ್ 10ರಿಂದ ಪ್ರಾರಂಭಗೊಳ್ಳುವ ಬೇಸಿಗೆ ರಜೆಯು ಮೇ 29 ಕ್ಕೆ ಮುಕ್ತಾಯಗೊಂಡು ಮತ್ತೆ 30ಕ್ಕೆ ಹೊಸ ಹುರುಪಿನಿಂದ ಹೊಸ ಉಡುಪಿನಲಿ ಮಕ್ಕಳು ಶಾಲೆಗೆ ಹೆಜ್ಜೆ ಹಾಕುತ್ತಿದ್ದರು. ಆದರೆ ಇದೀಗ ನೂತನ ಶಾಲಾ ಶೈಕ್ಷಣಿಕ ವರ್ಷದ ತಿಂಗಳು ಪ್ರಾರಂಭವಾಗುವ ಸಮಯವಾದರೂ ಬಂದರೂ ಶಾಲಾ ಪುನರಾರಂಭದ ದಿನಾಂಕ ಇನ್ನೂ ಅಧಿಕೃತವಾಗಿ ಘೋಷಣೆಯಾಗಿಲ್ಲ. ಕಾರಣ ಕೊರೋನಾ ಸಂಕಟ ಇನ್ನು ಆರಿಲ್ಲ. ಆದರೆ ಸೂಚನೆಯನ್ನು ಮುಂದಿನ ದಿನಾಂಕವನ್ನು ಶಿಕ್ಷಣ ಇಲಾಖೆ ಮುಂದೆ ಸೂಚಿಸಬಹುದು

ಶಾಲೆಯೆಂದರೆ ಅದೊಂದು ಮಕ್ಕಳ ಲೋಕ. ದೊಡ್ಡವರಂತೆ ಮುಂದೆ ಬರುವ ಸಂಕಷಗಳ ಅರಿವು ಇರುವುದಿಲ್ಲ ಹಾಡು ಕುಣಿತ ನೆಗೆತ ಸಂಭ್ರಮ ಪಾಠ ಆಟ ಊಟವೆಂಬಂತೆ ಓಡಾಡುತ್ತಲೇ ಲವಲವಿಕೆಯಿಂದ ಇರುವವರು. ಹಾಗಾಗಿ ಶಾಲಾ ಬದುಕು ಅಮೂಲ್ಯ ವಾದುದು ಎಂಬುದನ್ನುನಾವೆಲ್ಲರೂ ಅರಿತವರೇ. ಈ ಸಂದಿಗ್ಧ ಸಮಯದಲ್ಲಿ
ಸಮಸ್ಯೆಗಳ ಮಧ್ಯೆ ಆತುರ ಪಡದೇ ಸೂಕ್ತ ಸಮಯ ಸಂದರ್ಭವನ್ನು ನೋಡಿಕೊಂಡು ಶಾಲಾ ಪುನರಾರಂಭದ ಯೋಚಿಸಿ ಮುಂದಣ ಹೆಜ್ಜೆ ಇಡಬೇಕಾಗಿದೆ.

ಆದರೆ ಬೇಸಿಗೆ ರಜೆ ಎಂದಾಗ ಅಜ್ಜನ ಮನೆ ಅಜ್ಜಿಯ ಮನೆ ಸಂಬಂಧಿಕರ ಮನೆ ತನ್ನ ಮನೆ ಗೆಳೆಯರ ಮನೆ ಕೌಟುಂಬಿಕ ಪ್ರವಾಸ ಪುಣ್ಯ ಕ್ಷೇತ್ರಗಳ ದರ್ಶನ ಶುಭ ಸಮಾರಂಭಗಳಿಗೆ ಹೋಗುವುದು ಸಾಂಸ್ಕೃತಿಕ ಕಾರ್ಯಕ್ರಮ ಗಳಲ್ಲಿ ಭಾಗವಹಿಸುವುದು ಜಿಲ್ಲೆ ಅಂತರ್ ರಾಜ್ಯ ವಿದೇಶ ಪ್ರವಾಸ ಹೋಗುವುದು ಹೀಗೆಯೇ ತಮ್ಮ ವಾಹನಗಳಲ್ಲೋ ಬಾಡಿಗೆ ವಾಹನಗಳಲ್ಲೋ, ರೈಲುಗಳಲ್ಲೋ, ವಿಮಾನಗಳಲ್ಲೋ, ಮನೆಯವರೊಂದಿಗೆ ಹೋಗಿ ಖುಷಿ ಪಡುವ ಒಂದಲ್ಲ ಒಂದು . ಸಂತಸದಾಯಕ ಕ್ಷಣ ಅದಾಗಿತ್ತು. ಅದರಲ್ಲೂ ತಮ್ಮ ಊರಿನಲ್ಲಿಯೋ ಶಾಲೆಯಲ್ಲಿಯೋ ನಡೆಯುವ ಬೇಸಿಗೆ ಶಿಬಿರವು ಚೆನ್ನಾಗಿ ನಡೆಯುತ್ತಾ ಅದರಲ್ಲಿ ಪಾಲ್ಗೊಳ್ಳುತ್ತಿದ್ದರು.ಆದರೆ ವಿಶ್ವ ವನ್ನೇ ಬೆಚ್ಚಿ ಬೀಳಿಸಿದ ಕೊರೋನಾ ನಿಯಂತ್ರಣ ಕ್ಕೆ ಸಾಮಾಜಿಕ ಅಂತರವೇ ಮುಖ್ಯ ವೆನಿಸಿ ಮಕ್ಕಳು ಮನೆಯವರೆಲ್ಲರೆಂಬಂತೆ ಮನೆಯೊಳಗೆಯೇ ಇರಬೇಕಾಯಿತು .ಮನೆಯ ಹೊಸ್ತಿಲ ದಾಟಿ ಬರದಂತೆಯೂ ಕೇಂದ್ರ ಸರಕಾರವು ಜನರ ರಕ್ಷಣೆ ಗಾಗಿ ಲಾಕ್ ಡೌನ್ ಲಕ್ಷ್ಮಣ ರೇಖೆಯನ್ನು ಎಳೆಯಿತು. ಹೀಗಾಗಿ ಮಕ್ಕಳು ತಮ್ಮ ಗೆಳೆಯ ಜೊತೆಯಾಗಲಿ ಮನೆಯವರ ಜೊತೆ ಸುತ್ತಾಡುವ ಎಲ್ಲಾ ಅವಕಾಶಗಳನ್ನು ಕಳೆದುಕೊಳ್ಳುವಂತಾಯಿತು

ಆದರೆ ಮನೆಯೊಳಗಿದ್ದು ಸೃಜನಶೀಲತೆಯಲ್ಲಿ ಕೆಲವರವರಂತೂ ಸಮಯವನ್ನು ತುಂಬಾ ಖುಷಿಯಾಗಿಯೇ ಕಳೆಯುತ್ತಿದ್ದಾರೆ ಮನೆಯವರ ಮಾರ್ಗದರ್ಶನ ಶಾಲಾ ಶಿಕ್ಷಕರ ಸೂಚನೆಯಂತೆ ಸಾಹಿತ್ಯ ವನ್ನು ಬಳಸಿಕೊಂಡು ಒಳ್ಳೆಯ ರೀತಿಯಲ್ಲಿ ಸಮಯದ ಸದುಪಯೋಗವನ್ನು ಮಾಡುತ್ತಿದ್ದಾರೆ ರಾಜ್ಯ ಸರಕಾರವೂ ಮಕ್ಕಳವಾಣಿಯಂತಹ ವಿಶೇಷ ಕಾರ್ಯಕ್ರಮವನ್ನು ಚಂದನ ವಾಹಿನಿ ಮೂಲಕ ವಿದ್ಯಾರ್ಥಿಗಳ ಪ್ರತಿಭಾ ಅನಾವರಣಕ್ಕೆ ಆವಕಾಶ.ಮಾಡಿಕೊಟ್ಟಿದೆ ಹತ್ತನೆಯ ತರಗತಿ ವಿದ್ಯಾರ್ಥಿಗಳಿಗೆ ವಿಶೇಷವಾಗಿ ಪುನರ್ಮನನ ಎನ್ನುವ ಪಠ್ಯ ವಿಷಯಗಳ ತರಬೇತಿಯೂ ನಡೆಯುತ್ತಿದೆ. ವಿದ್ಯಾರ್ಥಿಗಳು ಮನೆಯವರು ಈ ಕಾರ್ಯಕ್ರಮ ವನ್ನು ಆನಂದಿಸುತ್ತಿದ್ದಾರೆ ನಾಡಿನ ಪುಟ್ಟ ಪ್ರತಿಭೆಗಳು ಎಲ್ಲರಿಂದಲೂ ಸೈ ಎನಿಸಿಕೊಳ್ಳುತ್ತಿದ್ದಾರೆ.ಅಂತೂ ಇಂತೂ ಈ ಬಾರಿಯ ಬೇಸಿಗೆ ಮುಗಿದು ಹೋಯಿತು ಆದರೆ ಶಾಲೆಯು ಸದ್ಯದ ಪರಿಸ್ಥಿತಿಯಲ್ಲಿ ಆರಂಭವಾಗದು. ಜುಲೈ ತಿಂಗಳಿಗೆ ಪ್ರಾರಂಭಗೊಳ್ಳಬಹುದೇನೋ.

ಆದರೆ ಇನ್ನೂ ಮಳೆಗಾಲದ ಆರಂಭ ಮುಂಗಾರು ಕಾಲಿಟ್ಟಿತೆಂದರೆ ಮುಂದೆ ಜೂನ್ ನಿಂದ ಸೆಪ್ಟೆಂಬರ್ ಅಂತ್ಯದವರೆಗೆ ಮಳೆಯ ಆರ್ಭಟ ಮುಂದುವರಿಯಬಹುದು. ಈಗಾಗಲೇ ವಾತಾವರಣ ದಲ್ಲಿ ದಟ್ಟವಾದ ಮೋಡ ಆವರಿಸಿದರೂ ಈಗ ಮತ್ತೆ ಇಂದು ನಾಳೆ ಎಂಬಂತೆ ಧಾರಕಾರವಾಗಿ ಮಳೆ ಸುರಿಯಬಹುದು.
ಕಳೆದ ವರ್ಷದ ಮಳೆಯ ದಿನಗಳನ್ನು ನೆನಪಿಸಿಕೊಂಡರೆ ಮೈ ಒದ್ದೆಯಾಗುವಂತೆ ರೋಮಾಂಚನವಾಗುತ್ತಿದೆ. ಸುರಿದ ಕುಂಭದ್ರೋಣ ಮಳೆಗೆ ನಾಡಿನೆಲ್ಲೆಡೆ ಆದ ಅನಾಹುತ ಅಷ್ಟಿಷ್ಟಲ್ಲ. ಪ್ರಕೃತಿ ವಿಕೋಪಗಳು ಮತ್ತೆ ಕಣ್ಣ ಮುಃದೆ ಹಾದು ಹೋಗುತಿದೆ. ಕರ್ನಾಟಕ ದ ಕಾಶ್ಮೀರ ವೆಂದೇ ಕರೆಸಿಕೊಳ್ಳುವ ಕೊಡಗಿನ ಸ್ಥಿತಿ ಯನ್ನು ಹೇಳುವುದಾದರೇ ಸಂಪೂರ್ಣ ಮಳೆಯಿಂದ ತತ್ತರಿಸಿದ ವಿಚಾರ ನಮಗೆಲ್ಲಾ ತಿಳಿದದ್ದೇ. ಆದರೆ ಅದರಿಂದ ಪಾರಾಗಿ ಹೊರಬರುತ್ತಿರಲು ಮತ್ತೇ ಆಘಾತವಾದುದು ಈ ಕೊರೋನಾ ಮಹಾಮಾರಿ. ಇಡೀ ಜಗತ್ತೇ ಇದಕ್ಕೆ ಹೊರತಾಗಿಲ್ಲ. ಇನ್ನೂ ಕೊರೋನಾ ಸೋಂಕು ಸುರಿವ ಮಳೆಯ ಅವಾಂತರಗಳು ಎಲ್ಲವೂಜೊತೆ ಜೊತೆಯಾಗಿ ನಮಗೆಲ್ಲಾ ಟಾಟಕೊಡಬಹುದು ಆದರೆ ಇವೆಲ್ಲವುಗಳಿಂದ ಬಚಾವಾಗಿ ಇದುವರೆಗೆ ಸವಾಲನ್ನು ಗೆದ್ದು ಬಂದಂತೆ ಬರುವ ಸವಾಲುಗಳ ಪ್ರವಾಹ ವಿರುದ್ಧ ನಾವೇ ಈಜಬೇಕು ಈಜಿ ಜಯಿಸಬೇಕು.

ಆದ್ದರಿಂದ ಇನ್ನೇನೂ ಒಂದೆರಡು ದಿನಗಳಲ್ಲಿ ಮಳೆ ಪ್ರಾರಂಭವಾಗುವುದು ಶತ ಸಿದ್ಧ ಈ ಸಂದರ್ಭದಲ್ಲಿ ಪ್ರತಿಯೊಬ್ಬರೂ ಜಾಗರೂಕರಾಗಿ ಗುಡುಗು ಸಿಡಿಲು ಮಿಂಚು ಮಳೆಗಳ ಅನಾಹುತಕ್ಕೆ ಸಿಲುಕದಂತೆ ಎಚ್ಚರ ವಹಿಸಬೇಕು ಹತ್ತಿರದ ತೋಡು ಹೊಳೆ ಸೇತುವೆ ಬಾವಿ ಆಳವಾದ ಹೊಂಡಗಳು ವಿದ್ಯುತ್ ಕಂಬಗಳನ್ನು ತಂತಿಗಳನ್ನು ಮುಟ್ಟುವುದು ಅತೀ ವೇಗದಲ್ಲಿ ವಾಹನ ಚಲಾಯಿಸುವುದು ಹಳ್ಳಕ್ಕೆ ಬಟ್ಟೆ ತೊಳೆಯಲು ಹೋಗುವುದು ಗಾಳಿ ಬೀಸುವ ಸಂದರ್ಭದಲ್ಲಿ ತೋಟಕ್ಕೆ ಹೋಗುವುದು ನೀರಿನ ಪ್ರವಾಹ ಹೆಚ್ಚುತ್ತಿರುವಾಗ ನದಿಯಲ್ಲಿ ಈಜಾಡುವುದು ದೊಡ್ಡ ದೊಡ್ಡ ಮರಗಳ ಕೆಳಗೆ ನಿಲ್ಲವುದು ಗೊತ್ತಿಲ್ಲದೇ ಮನೆಯ ವಿದ್ಯುತ್ ಪೂರೈಕೆಯ ಬಗ್ಗೆ ರಿಪೇರಿ ಮಾಡುವುದು ಮೀನು ಹಿಡಿಯಲು ಹೋಗುವುದು ಇವೆಲ್ಲಾಅಪಾಯವನ್ನುಂಟು ಮಾಡುವುದು. ಆದರೆ ಈ ಬಾರಿಯ ಕೊರೋನಾ ವಿಚಾರದಲ್ಲಿ ಕಂಗಲಾಗಿರುವ ಜನರು ಇನ್ನೂ ಸಹಜ ಸ್ಥಿತಿಗೆ ಪೂರ್ಣ ವಾಗಿ ಬಂದಿಲ್ಲ.ಅದಾಗಲೇ ಕೊರೋನಾವೂ ಸಂಪೂರ್ಣ ಬಂದು ಜನಜೀವನವನ್ನು ಅಸ್ತವ್ಯಸ್ತ ಗೊಳಿಸಿ ಬಿಟ್ಟಿತು. ಅದರಲ್ಲೂ ಕಳೆದ ಎರಡೂ ವಾರಗಳಿಂದ ಸೋಂಕಿತರ ಸಂಖ್ಯೆಯೂ ಹೆಚ್ತಾಗುತ್ತಿರುವ ಬಗ್ಗೆಯೂ ಕೇಳುತ್ತಿದ್ದೇವೆ ಆದರೆ ಎಲ್ಲವೂ ನಿಯಂತ್ರಣದಲ್ಲಿದೆ ಎನ್ನುವುದು ನೆಮ್ಮದಿಯ ಸಂಗತಿಯಾಗಿದೆ.

ಹಾಗಾಗಿ ಮುಂದಿನ ದಿನಗಳಲ್ಲಿ ಧಾರಕಾರವಾಗಿ ಸುರಿಯುವ ಮಳೆಯ ಸಂದರ್ಭದಲ್ಲಿ ಹಿರಿಯರೆಲ್ಲರೂ ತಮ್ಮ ಮಕ್ಕಳ ಜಾಗರೂಕತೆಯ ಬಗ್ಗೆ ನಿಗಾ ವಹಿಸುವುದು ಉತ್ತಮ. ಸುರಿಯುವ ಅತಿಯಾದ ಮಳೆ ಬೀಸುವ ಚಂಡ ಮಾರುತ ಆರ್ಭಟಿಸುವ ಗುಡುಗುಗಳು ಹೊಡೆಯುವ ಮಿಂಚುಗಳು ಹಾಗೆಯೇ ವಿದ್ಯುತ್ ಕೈಕೊಡುವ ಸಂದರ್ಭಗಳಲ್ಲಿ ಅನಾವಶ್ಯಕ ಹೊರ ಬರದಂತೆ ಎಚ್ಚರ ವಹಿಸುವುದು ಮುಖ್ಯವಾಗಿದೆ ಈ ಸಂದರ್ಭದಲ್ಲಿ ಮೊಬೈಲ್ ಬಳಕೆ ಮಾಡದಂತೆ ಬ್ಯಾಟರಿ ಚಾರ್ಜ್ ಮಾಡದಂತೆ ಕಿವಿಗೆ ಫೋನ್ ಇಟ್ಟು ಹಾಡು ಕೇಳದಂತೆ ತಿಳಿ ಹೇಳವುದು ಉತ್ತಮ ಈಗಾಗಲೇ ಅಲ್ಲೊಂದು ಇಲ್ಲೊಂದು ಘಟನೆಗಳು ನಡೆದು ಪ್ರಾಣವನ್ನೇ ಕಳೆದುಕೊಂಡ ಸಂಗತಿಗಳನ್ನು ಪತ್ರಿಕೆ ರೇಡಿಯೋ ಟಿ ವಿ ಗಳಲ್ಲಿ ಕೇಳುತ್ತಲೇ ಇದ್ದೇವೇ ಓದುತ್ತಲೇ ಇದ್ದೇವೆ ಹಾಗಾಗಿ ಇಂತಹ ದುರ್ಘಟನೆ ಗಳು ನಮ್ಮ ಕಣ್ಣ ಮುಂದೆ ನಡೆಯದಂತೆ ಬಹಳಷ್ಟು ಎಚ್ಚರ ವಹಿಸೋಣ

.ಹಾಗಾಗಿ ಒಂದೆಡೆ ಕೊರೋನಾ ಕಂಟಕ ಇನ್ನೊಂದೆಡೆ ಅತಿವೃಷ್ಟಿಯಾದರೆ ತಂದೊಡ್ಡುವ ಸವಾಲುಗಳಿಂದ ನಾವೆಲ್ಲರೂ ಪಾರಾಗುವ ಬಗ್ಗೆ ಎಚ್ಚರವಿರಬೇಕು.ಮಲೇರಿಯಾ ಡೆಂಗ್ಯೂ ಜ್ವರ ಬರದಂತೆ ಮನೆಯ ಸುತ್ತ ಮುತ್ತಲೂ ಶುಚಿಯಾಗಿರಿಸಿಕೊಳ್ಳಬೇಕು. ಹವಾಮಾನ ಇಲಾಖೆಯು ಆಗಾಗ ಹವಮಾನ ವರದಿಯ ಮೂಲಕ ಮುನ್ಸೂಚನೆಯನ್ನು ನೀಡುತ್ತಿದೆ ಒಟ್ಟಿನಲ್ಲಿ ಮಳೆಗಾಲದ ಸಂದರ್ಭದಲ್ಲಿ ಅಪಾಯಗಳನ್ನು ಕಾಣದೇ ಕಾದ ನೆಲಕ್ಕೆ ಮಳೆ ಬರುವಂತಾಗಲಿ. ನಾಡು ನಿತ್ಯ ಹರಿದ್ವರ್ಣವಾಗಿ ಕಂಗೊಳಿಸಲಿ. ಸ್ವಚ್ಛತೆ ಯ ಬಗೆಗೆ ನಮ್ಮ ಕಾಳಜಿ ಎಂದೂ ನಿರ್ಲಕ್ಷ್ಯವಾಗದಿರಲಿ. ಚಾತಕ ಪಕ್ಷಿಯಂತೆ ಶಾಲೆಯ ಸುಂದರ ಕನಸುಗಳನ್ನು ಕಾಣುತ್ತಾ ಕಾದಿರುವ ಮಕ್ಕಳಿಗೆ ಎಲ್ಲ ಅವಕಾಶಗಳು ಸುಗಮವಾಗಿ ಕೂಡಿ ಬರಲಿ. ವಿದ್ಯಾ ಅಧಿದೇವತೆ ಶ್ರೀ ಶಾರದೆ ಎಲ್ಲರನ್ನೂ ಅನುಗ್ರಹಿಸಲಿ

ಗಣೇಶ್ ಜಾಲ್ಸೂರು

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.