HomePage_Banner
HomePage_Banner
HomePage_Banner
HomePage_Banner

ಬಳ್ಪ ಕೊರೋನಾ ಕಾರ್ಯಪಡೆಯಿಂದ ಶ್ಲಾಘನೀಯ ಕಾರ್ಯ

 

ಜಗತ್ತಿನಾದ್ಯಂತ ಶರವೇಗದಲ್ಲಿ ಆವರಿಸುತ್ತಿರುವ ಕೊರೋನಾ ಸೋಂಕನ್ನು ತಡೆಗಟ್ಟುವ ನಿಟ್ಟಿನಲ್ಲಿ ಪ್ರತೀ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕಾರ್ಯಪಡೆ ರಚನೆಯಾಗಿದ್ದು, ಗ್ರಾ.ಪಂ. ವ್ಯಾಪ್ತಿಯಲ್ಲಿ ಉತ್ತಮ ಕಾರ್ಯ ಸಾಧನೆ ಮಾಡಿದ್ದಾರೆ.

ಬಳ್ಪ ಗ್ರಾ.ಪಂ. ವ್ಯಾಪ್ತಿಯಲ್ಲಿ ಗ್ರಾಮವಿಕಾಸ ಪ್ರತಿಷ್ಠಾನ ಬಳ್ಪ-ಕೇನ್ಯ, , ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ, ಬಳ್ಪ ಹಾಲು ಉತ್ಪಾದಕರ ಸಹಕಾರಿ ಸಂಘ, ಶ್ರೀ ಸದಾಸಿದ್ಧಿ ಮಿತ್ರ ಬಳಗ ಬೀದಿಗುಡ್ಡೆ ಮೊದಲಾದ ಸಂಘ ಸಂಸ್ಥೆಗಳು, ಶಾಸಕ ಅಂಗಾರ, ಸಂಸದ ನಳಿನ್‌ಕುಮಾರ್ ಕಟೀಲ್, ನಾಟಿ ವೈದ್ಯ ಆನಂದ ಗೌಡ ಕಾರ್ಜ, ವೆಂಕಪ್ಪ ಗೌಡ ಬೀದಿಗುಡ್ಡೆ, ಮುರಲಿ ಕಾಮತ್ ಬಳ್ಪ ಮೊದಲಾದವರು ಆಹಾರ ಕಿಟ್ ಮತ್ತು ಮಾಸ್ಕ್ ವಿತರಿಸಿದ್ದಾರೆ. ಬಳ್ಪ ಶ್ರೀ ತ್ರಿಶೂಲಿನೀ ದುರ್ಗಾಪರಮೇಶ್ವರಿ ಉತ್ಸವ ಸಮಿತಿ ವತಿಯಿಂದ ಪ್ರತೀ ಮನೆಯ ಪ್ರತೀ ಸದಸ್ಯರಿಗೆ ಸುಮಾರು ೫ ಸಾವಿರ ಮಾಸ್ಕ್ ಮತ್ತು ೧೩೦ ಕೊರೋನಾ ವಾರಿಯರ್‍ಸ್‌ಗೆ ಸನ್ಮಾನ ಪತ್ರ, ಶ್ರೀ ದೇವಿಯ ಪ್ರಸಾದ ನೀಡಿದರೆ, ಬಳ್ಪ ಗ್ರಾ.ಪಂ. ವತಿಯಿಂದ ೧ ಸಾವಿರ ಮಾಸ್ಕ್ ವಿತರಿಸಲಾಗಿದೆ.
ಕೊರೋನಾ ವಾರಿಯರ್‍ಸ್ ತಂಡದ ಅಧ್ಯಕ್ಷರಾಗಿ ಗ್ರಾ.ಪಂ. ಅಧ್ಯಕ್ಷ ಪ್ರಕಾಶ್ ಮುಡ್ನೂರು, ಸದಸ್ಯರಾಗಿ ಉಪಾಧ್ಯಕ್ಷೆ ಶ್ರೀಮತಿ ತಾರಾ ರೈ ಬಿರ್ಕಿ, ಸದಸ್ಯರಾದ ರಮಾನಂದ ಎಣ್ಣೆಮಜಲು, ವಿನೋದ್ ಬೊಳ್ಮಲೆ, ಧರ್ಮಪಾಲ ಕಣ್ಕಲ್, ಶ್ರೀಮತಿ ಸುಮಿತ್ರಾ ಬಿ.ಕೆರೆ, ಶ್ರೀಮತಿ ತಿರುಮಲೇಶ್ವರಿ ಎಡೋಣಿ, ಶ್ರೀಮತಿ ಬೇಬಿ ಭಾಸ್ಕರ ಕಟ್ಟ, ರವಿ ನೇಲ್ಯಡ್ಕ, ಶ್ರೀಮತಿ ಲಲಿತಾ, ಗ್ರಾ,ಪಂ. ಪಿಡಿಒ ಶ್ಯಾಂ ಪ್ರಸಾದ್, ಕಾರ್ಯದರ್ಶಿ ಗಂಗಯ್ಯ ಮಲೆಕುಡಿಯ, ಸಿಬ್ಬಂದಿಗಳಾದ ರವಿ ಕುಮಾರ್ ಕೆದ್ಕಾರ್, ಯೋಗೀಶ್ ಕುಳ, ಮೋಹನ್ ಕೇನ್ಯ, ಸಂಜೀವ ಕೊನ್ನಡ್ಕ, ವಸಂತ ಜತ್ತಿಲ ದುಡಿದಿದ್ದಾರೆ. ಪಂಚಾಯತ್ ಮೂಲಕ ನೇಮಿಸಲ್ಪಟ್ಟ ಕೊರೋನಾ ಸೈನಿಕರಾದ ಪ್ರವೀಣ್ ಗೆಜ್ಜೆ, ಹರ್ಷಿತ್ ಪಂಡಿ, ಪುನೀತ ಉಕ್ಕಿನಮನೆ ಸರಕಾರಕ್ಕೆ ಮಾಹಿತಿ ನೀಡುವ ಕಾರ್ಯ ಮಾಡಿದ್ದಾರೆ. ಆರೋಗ್ಯ ಸಹಾಯಕಿಯರಾದ ಶ್ರೀಮತಿ ಭಾಗ್ಯ, ಶ್ರೀಮತಿ ಕವಿತಾ, ಆಶಾ ಕಾರ್ಯಕರ್ತೆಯರಾದ ಶ್ರೀಮತಿ ವನಜ ಎಸ್.ರೈ, ಶ್ರೀಮತಿ ರಮಾ ಗುಣಸಾಗರ ಕಟ್ಟ, ಶ್ರೀಮತಿ ನೇತ್ರಾವತಿ ಪಾನ, ಶ್ರೀಮತಿ ರಾಧಾ ಕೊನ್ನಡ್ಕ, ಅಂಗನವಾಡಿ ಕಾರ್ಯಕರ್ತೆಯರಾದ ಶ್ರೀಮತಿ ಮೋಹಿನಿ ಬಳ್ಪ. ಶ್ರೀಮತಿ ಹರಿಣಾಕ್ಷಿ ಎಣ್ಣೆಮಜಲು, ಶ್ರೀಮತಿ ದಮಯಂತಿ ಕೇನ್ಯ, ಶ್ರೀಮತಿ ಮಮತಾ ಪೇರಳಕಟ್ಟೆ, ಶ್ರೀಮತಿ ಯಮುನಾ ಬೀದಿಗುಡ್ಡೆ ಕೊರೋನಾ ವಾರಿಯರ್‍ಸ್ ಆಗಿ ಕರ್ತವ್ಯ ನಿರ್ವಹಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.