HomePage_Banner
HomePage_Banner
HomePage_Banner
HomePage_Banner

ಮಾಸ್ಟರ್ ಅಥ್ಲೆಟಿಕ್ಸ್ ಅಸೋಸಿಯೇಶನ್ ರಾಷ್ಟ್ರೀಯ ಕಾರ್ಯದರ್ಶಿ ಪಂಜದ ಜೆರಾಲ್ಡ್ ಡಿಸೋಜ ಮುಂಬೈಯಲ್ಲಿ ನಿಧನ

 

ಮಾಸ್ಟರ್ ಅಥ್ಲೆಟಿಕ್ಸ್ ಅಸೋಸಿಯೇಶನ್ ರಾಷ್ಟ್ರೀಯ ಕಾರ್ಯದರ್ಶಿ , ಪಂಜದವರಾಗಿದ್ದ ಜೆರಾಲ್ಡ್ ಡಿಸೋಜ ಮುಂಬೈಯಲ್ಲಿ ಇಂದು ನಿಧನರಾಗಿದ್ದಾರೆ.

ಪಂಜದ ದಿ.ಮಾರ್ಷಲ್ ಡಿಸೋಜರವರ ಪುತ್ರರಾದ ಜೆರಾಲ್ಡ್ ಡಿಸೋಜರವರು ಸುಮಾರು ಐವತ್ತು ವರ್ಷಗಳಿಂದ ಮುಂಬೈಯಲ್ಲಿ ನೆಲೆಸಿದ್ದರು.

ಕೆಲವು ದಿನಗಳ ಹಿಂದೆ ಹೃದಯಾಘಾತಕ್ಕೆ ಒಳಗಾಗಿದ್ದ ಅವರನ್ನು ಮುಂಬೈಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಇಂದು ಬೆಳಿಗ್ಗೆ ಕೊನೆಯುಸಿರೆಳೆದರು. ಅವರಿಗೆ 69 ವರ್ಷ ವಯಸ್ಸಾಗಿತ್ತು.

ಅಬಕಾರಿ ಇಲಾಖೆಯಲ್ಲಿ ಡಿವೈಎಸ್ಪಿ ಯಾಗಿ ನಿವೃತ್ತರಾಗಿದ್ದ ಜೆರಾಲ್ಡ್ ಅವರು ಪಂಜ ಕಾಲೇಜಿನ ಕೋಟಿ ಚೆನ್ನಯ ಕ್ರೀಡಾಂಗಣಕ್ಕೆ ಅನುದಾನ ತರಿಸುವಲ್ಲಿ ಹಾಗೂ ಪಂಜದಲ್ಲಿ ರಾಷ್ಟ್ರೀಯ ಮಾಸ್ಟರ್ಸ್ ಅಥ್ಲೆಟಿಕ್ಸ್ ನಡೆಯಲು ಪ್ರಧಾನ ಕಾರಣರಾಗಿದ್ದರು.

ಮೃತರು ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿಯನ್ನು ಅಗಲಿದ್ದಾರೆ.

ಜೆರಾಲ್ಡ್ ಅವರು ಪಂಜದಲ್ಲಿ ಜನಪ್ರಿಯ ವೈದ್ಯರಾಗಿದ್ದ ದಿ.ಡಾ. ಸಿಲ್ವೆಸ್ಟರ್ ಡಿಸೋಜ ಅವರ ಸಹೋದರ.

” ಜೆರಾಲ್ಡ್ ಅವರ ಪಾರ್ಥೀವ ಶರೀರದ ಅಂತ್ಯಕ್ರಿಯೆ ಇಂದು ಸಂಜೆ ಮುಂಬೈಯಲ್ಲಿ ನಡೆಯಲಿದೆ” ಎಂದು ಡಾ. ಸಿಲ್ವೆಸ್ಟರ್ ಡಿಸೋಜ ಅವರ ಪುತ್ರ ಡಾ.ಪ್ರಕಾಶ್ ಡಿಸೋಜ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.