HomePage_Banner
HomePage_Banner
HomePage_Banner
HomePage_Banner

ಪೋಲೀಸ್ ಮನೆಯವರಿಗೆ ಕೊರೊನ ಇಲ್ಲ : ಪರೀಕ್ಷೆಯಿಂದ ದೃಢ

ಕೊರೊನ ಪಾಸಿಟಿವ್ ಬಂದು ಮಂಗಳೂರು ಕೋವಿಡ್ ಆಸ್ಪತ್ರೆಯಲ್ಲಿರುವ ವಿಟ್ಲ ಪೋಲೀಸ್ ಠಾಣೆಯ ಹೆಡ್ ಕಾನ್ ಸ್ಟೇಬಲ್ ರವರ ಪತ್ನಿ ಮತ್ತು ಮಕ್ಕಳಿಗೆ ಕೊರೊನ ನೆಗೆಟಿವ್ ಬಂದಿದ್ದು ಅವರು ಕಂಟಕವೊಂದರಿಂದ ಪಾರಾದಂತಾಗಿದೆ.


ವಿಟ್ಲ ಪೋಲೀಸ್ ಠಾಣೆಯಲ್ಲಿ ಕರ್ತವ್ಯದಲ್ಲಿದ್ದ ಬೆಳ್ಳಾರೆ ಮೂಲದ ಹೆಡ್ ಕಾನ್ ಸ್ಟೆಬಲ್ ರೊಬ್ಬರಿಗೆ ಕೊರೊನಾ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಅವರನ್ನು ಮಂಗಳೂರಿಗೆ ಕಳುಹಿಸಿ , ಪತ್ನಿ ಮತ್ತು ಮಕ್ಕಳನ್ನು ಬೆಳ್ಳಾರೆ ಸಮೀಪದ ಅವರ ಮನೆಗೆ ಕರೆತಂದು ಕ್ವಾರೆಂಟೈನ್ ಮಾಡಲಾಗಿತ್ತು. ಅವರ ಗಂಟಲ ದ್ರವ ಪರೀಕ್ಷೆಗೆ ಕಳುಹಿಸಲಾಗಿತ್ತು. ಇಂದು ಅದರ ಪರೀಕ್ಷಾ ವರದಿ ಬಂದಿದ್ದು ಅವರಿಗೆ ನೆಗೆಟಿವ್ ಬಂದಿದೆ. ಇವರೊಂದಿಗೆ ಸಂಪರ್ಕ ಹೊಂದಿದ್ದಾರೆ ಎನ್ನಲಾಗಿದ್ದ 13 ಮಂದಿ ಪೋಲಿಸ್ ಸಿಬ್ಬಂದಿಗಳನ್ನು ಮತ್ತು ಇತರ 7 ಮಂದಿಯನ್ನು ಕ್ವಾರಂಟೈನ್ ನಲ್ಲಿ ಇಡಲಾಗಿತ್ತು. ಇಂದು ಎಲ್ಲಾ 20 ಮಂದಿಯ ವರದಿ ಬಂದಿದ್ದು, ಎಲ್ಲಾ ವರದಿಗಳು ನೆಗೆಟ್ವಿ ಬಂದಿರುವುದಾಗಿ ತಿಳಿದುಬಂದಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.