HomePage_Banner
HomePage_Banner
HomePage_Banner
HomePage_Banner

ಸುಳ್ಯ: ಪ್ರಾಕೃತಿಕ ತುರ್ತು ಪರಿಸ್ಥಿತಿಗೆ ಈಗಲೇ ಸನ್ನದ್ಧರಾಗುವಂತೆ ಇಲಾಖಾಧಿಕಾರಿಗಳಿಗೆ ಶಾಸಕ ಎಸ್ ಅಂಗಾರ ಸೂಚನೆ

 

ಸುಳ್ಯ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ಪ್ರಾಕೃತಿಕ ವಿಕೋಪ ಮತ್ತು ತುರ್ತುಪರಿಸ್ಥಿತಿ ಅವಲೋಕನ ಸಭೆಯಲ್ಲಿ ಶಾಸಕರಾದ ಎಸ್ ಅಂಗಾರ ಮಾತನಾಡುತ್ತಾ ,ಮಳೆಗಾಲದಲ್ಲಿ ಉಂಟಾಗುವ ಪ್ರಾಕೃತಿಕ ದುರಂತಗಳು ಸಂಭವಿಸುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಗ್ರಾಮ ಮಟ್ಟದಲ್ಲಿ ಪ್ರಾಕೃತಿಕ ವಿಕೋಪ ಕಾರ್ಯಾಪಡೆಯನ್ನು ರಚಿಸಬೇಕು. ತಾಲೂಕು ಮಟ್ಟದ ಅಧಿಕಾರಿಗಳು ಕೇಂದ್ರಸ್ಥಾನದಲ್ಲಿದ್ದು ಕಾರ್ಯನಿರ್ವಹಣೆ ಮಾಡಬೇಕು.

ಮಳೆಗಾಲದಲ್ಲಿ ಸಾರ್ವಜನಿಕರಿಗೆ ಯಾವುದೇ ರೀತಿಯಲ್ಲಿ ತೊಂದರೆ ಆಗಬಾರದು. ಅಧಿಕಾರಿಗಳು ಕೇಂದ್ರಸ್ಥಾನದಲ್ಲಿದ್ದು ಸನ್ನದ್ದರಾಗಿರಬೇಕು. ಅಧಿಕಾರಿಗಳು ರಜೆ ಮಾಡುವುದಿದ್ದರೆ ಮೊದಲೇ ತಿಳಿಸಬೇಕು ಎಂದರು.


ನಗರ ವ್ಯಾಪ್ತಿಯಲ್ಲಿರುವ ಚರಂಡಿಗಳನ್ನು ನಗರ ಪಂಚಾಯತ್ ಕೂಡಲೇ ಸ್ವಚ್ಚ ಮಾಡುವ ಕೆಲಸ ಮಾಡಬೇಕು. ಹೆದ್ದಾರಿ ಮತ್ತು ರಾಜ್ಯ ಹೆದ್ದಾರಿ ಸಂಪರ್ಕ ರಸ್ತೆಗಳ ಚರಂಡಿಗಳನ್ನು ಮಳೆನೀರು ಹರಿಯುವಂತೆ ಸರಿಪಡಿಸಬೇಕು. ರಸ್ತೆ ಮತ್ತು ಮನೆಗಳ ಹತ್ತಿರ ಇರುವ ಅಪಾಯಕಾರಿ ಮರಗಳನ್ನು ತೆರವುಗೆ ಸೂಚನೆ ನೀಡಿದರು.

ಜಾಹೀರಾತು

ಪ್ರಾಕೃತಿಕ ವಿಕೋಪಗಳನ್ನು ಎದುರಿಸಲು ಗೃಹರಕ್ಷಕ ದಳಕ್ಕೆ ಬೇಕಾಗುವ ಅಗತ್ಯ ಸಲಕರಣೆಗಳ ಹಾಗು ಅಗ್ನಿಶಾಮಕ ದಳದ ಯಾಂತ್ರೀಕೃತ ಬೋಟ್ ವ್ಯವಸ್ಥೆ ಮಾಡಲು ಅಂದಾಜು ವೆಚ್ಚದ ಪಟ್ಟಿ ನೀಡಿ ಒದಗಿಸುವ ವ್ಯವಸ್ಥೆ ಮಾಡುತ್ತೇವೆ ಎಂದು ಶಾಸಕರು ಹೇಳಿದರು. ಗೃಹರಕ್ಷಕದಳದೊಂದಿಗೆ ಆಗ್ನಿಶಾಮಕ ದಳ ಮತ್ತು ಪೋಲೀಸ್ ಇಲಾಖೆಯ ತಂಡಗಳು ಸನ್ನಧ ವಾಗಿದೆ ಎಂದು ಸುಳ್ಯ ಎಸ್.ಐ ಹರೀಶ್ ಕುಮಾರ್ ಹೇಳಿದರು. ಇವರೊಂದಿಗೆ ಅರಣ್ಯ ಇಲಾಖೆಯ ಒಂದು ತಂಡದ ಕಾರ್ಯಪಡೆ ಸಿದ್ದವಿದೆ ಎಂದು ಆರ್.ಎಫ್.ಓ ಮಂಜುನಾಥ್ ಹೇಳಿದರು.


ಉದ್ಯೋಗ ಖಾತ್ರಿ ಯೋಜನೆ ಯ ಬಗ್ಗೆ ಕೂಡ ಸಭೆಯಲ್ಲಿ ಚರ್ಚೆ ನಡೆಯಿತು. ಉದ್ಯೋಗ ಖಾತ್ರಿ ಯೋಜನೆಯಲ್ಲಿ ಹೆಚ್ಚು ಸಾಧನೆ ಆಗಬೇಕು. ಅದರಲ್ಲಿನ ಲೋಪದೋಷಗಳನ್ನು ಸರಿಪಡಿಸಿ ಕೆಲಸ ಮಾಡಬೇಕು. ಹೆಚ್ಚು ಹೆಚ್ಚು ಉದ್ಯೋಗ ಚೀಟಿಗಳನ್ನು ಮಾಡಿ ಯೋಜನೆಯನ್ನು ಕಾರ್ಯರೂಪಕ್ಕೆ ತರಬೇಕು ಹಾಗು
2020-21 ನೇ ಸಾಲಿನಲ್ಲಿ ಉದ್ಯೋಗ ಖಾತ್ತಿ ಯೋಜನೆಯಲ್ಲಿ ಪ್ರತಿಶತ ಶೇ. 100 ರ ಸಾಧನೆ ಮಾಡಬೇಕು ಎಂದು ಶಾಸಕರು ಹೇಳಿದರು.

ಜಾಹೀರಾತು

ಸಭೆಯಲ್ಲಿ ತಾಲೂಕು ಪಂಚಾಯತ್ ಅಧ್ಯಕ್ಷ ಚನಿಯ ಕಲ್ತಡ್ಕ, ಸ್ಥಾಯಿ ಸಮಿತಿ ಅಧ್ಯಕ್ಷೆ ಜಾಹ್ನವಿ ಕಾಂಚೋಡು, ತಹಶೀಲ್ದಾರ್ ಅನಂತ್ ಶಂಕರ್, ತಾ.ಪಂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಎನ್. ಭವಾನಿಶಂಕರ್, ವಿವಿಧ ಇಲಾಖೆಯ ತಾಲೂಕು ಮಟ್ಟದ ಅಧಿಕಾರಿಗಳು, ಗ್ರಾಮ ಪಂಚಾಯತ್ ಅಭಿವೃದ್ದಿ ಅಧಿಕಾರಿಗಳು, ಕಾರ್ಯದರ್ಶಿಗಳು ಭಾಗವಹಿಸಿದ್ದರು

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.