Breaking News

ಎಲ್ಲಾ ರಿಕ್ಷಾ ಚಾಲಕರರಿಗೂ ಸಹಾಯಧನ, ರಾಜ್ಯ ಸಚಿವ ಸಂಪುಟ ತೀರ್ಮಾನ ಸ್ವಾಗತಾರ್ಹ : ಚಂದ್ರಶೇಖರ್ ಕಡೋಡಿ

Advt_Headding_Middle
Advt_Headding_Middle


ಸರ್ಕಾರ ಘೋಷಣೆ ಮಾಡಿದ ಸಹಾಯಧನ ಪಡೆಯಲು ಇದ್ದ ಷರತ್ತುಗಳನ್ನು ತೆರವುಗೊಳಿಸಿ ಬ್ಯಾಡ್ಜ್ ರಹಿತ ರಿಕ್ಷಾ ಚಾಲಕರಿಗೂ ಸಹಾಯ ಧನ ಸಿಗುವಂತೆ ಕ್ರಮ ಕೈಗೊಂಡ ರಾಜ್ಯ ಸರಕಾರವನ್ನು ಬಿ.ಎಂ.ಎಸ್ ರಿಕ್ಷಾ ಚಾಲಕರ ಸಂಘದ ಗುತ್ತಿಗಾರು ವಲಯದ ಸಂಘಟನಾ ಕಾರ್ಯದರ್ಶಿ ಚಂದ್ರಶೇಖರ ಕಡೋಡಿ ಅಭಿನಂದಿಸಿದ್ದಾರೆ.


ಈ ಕುರಿತು ತಾವು ಮತ್ತು ರಿಕ್ಷಾ ಸಂಘಟನೆಗಳು ನೀಡಿರುವ ಮನವಿಗೆ ಸ್ಪಂದಿಸಿ ರಾಜ್ಯ ಸರ್ಕಾರದ ಗಮನ ಸೆಳೆದು ಯಶಸ್ವಿಯಾದ, ಶಾಸಕ ಎಸ್. ಅಂಗಾರ, ಹಾಗೂ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಮತ್ತು ಈ ಸಂದರ್ಭದಲ್ಲಿ ತೀವ್ರ ಆರ್ಥಿಕ ಸಂಕಷ್ಟದಲ್ಲಿರುವ ರಿಕ್ಷಾ ಚಾಲಕರ ಕುರಿತು ಮನಮುಟ್ಟವ ವರದಿ ಪ್ರಕಟಿಸಿದ ಸುದ್ದಿ ಸುಮೂಹ ಸಂಸ್ಥೆಗೆ ಅಭಿನಂದನೆಗಳು ಎಂದು ಕಡೋಡಿ ಹೇಳಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.