ತಾಲೂಕು ಆಡಳಿತದ ನಿರ್ಲಕ್ಷ್ಯವೇ ಬೆಳ್ಳಾರೆಯಲ್ಲಿ ಕೊರೋನಾ ಭೀತಿ ಹಬ್ಬಲು ಕಾರಣ : ಎಸ್.ಡಿ.ಪಿ.ಐ ಆರೋಪ

Advt_Headding_Middle
Advt_Headding_Middle

ಮಹಾರಾಷ್ಟ್ರದಿಂದ ಬೆಳ್ಳಾರೆ ಆಗಮಿಸಿದ ಸ್ಥಳೀಯ ಯುವಕನಿಗೆ ಕೊರೋನಾ ವರದಿ ಪಾಸಿಟಿವ್ ಬಂದಿದ್ದು, ಇದೀಗ ಇಡೀ ವ್ಯಾಪ್ತಿಯೇ ಸೀಲ್ ಡೌನ್ ಆಗುವ ಭೀತಿ ಕೂಡ ಉಂಟಾಗಿದ್ದು ಇದಕ್ಕೆಲ್ಲಾ ಸುಳ್ಯ ತಾಲೂಕು ಆಡಳಿತದ ನಿರ್ಲಕ್ಷ್ಯ ಧೋರಣೆಯೇ ನೇರ ಕಾರಣವೆಂದು ಎಸ್.ಡಿ.ಪಿ.ಐ ಆರೋಪಿಸಿದೆ.

ಮಹಾರಾಷ್ಟ್ರದಿಂದ ಬಂದ ವ್ಯಕ್ತಿಯು ಬೆಳ್ಳಾರೆ ಆಗಮಿಸಿದ ಮೂರು ದಿನಗಳ ನಂತರ ಆತನನ್ನು ಕ್ವಾರಂಟೈನ್ ಗೆ ಒಳಪಡಿಸಿದ್ದು,ಅಷ್ಟು ದಿನ ಊರೆಲ್ಲಾ ಸುತ್ತಾಡುತ್ತಿರುವುದು ಕಂಡು ಬಂದಿದೆ. ಮಹಾರಾಷ್ಟ್ರದಲ್ಲಿ ಕೊರೋನಾ ವೈರಸ್ ವ್ಯಾಪಕವಾಗಿ ಹರಡಿದ್ದು ಇಡೀ ದೇಶಕ್ಕೆ ತಿಳಿದಿದೆ, ಹೀಗಿರುವಾಗ ಆ ರಾಜ್ಯದಿಂದ ಬಂದವರನ್ನು ಗಡಿಯಲ್ಲೇ ಗುರುತಿಸಿ ನೇರವಾಗಿ ಕ್ವಾರಂಟೈನ್ ಗೆ ಕಳಿಸಬೇಕಾಗಿತ್ತು. ಆದರೆ ಈ ಕೆಲಸವನ್ನು ತಾಲೂಕು ಮತ್ತು ಜಿಲ್ಲಾಡಳಿತ ಸಮರ್ಪಕವಾಗಿ ನಿರ್ವಹಿಸದ ಕಾರಣ ಆ ವ್ಯಕ್ತಿ ಬಿಂದಾಸ್ ಆಗಿ ಊರೆಲ್ಲಾ ತಿರುಗಾಡಿದ್ದಾನೆ. ಮಾತ್ರವಲ್ಲದೆ ಕ್ವಾರಂಟೈನ್ ಗೆ ಒಳಪಡಿಸಿದ ನಂತರವೂ ಕ್ವಾರಂಟೈನ್ ಕೇಂದ್ರಕ್ಕೆ ಆ ವ್ಯಕ್ತಿಯ ತಾಯಿ ಮನೆಯಿಂದಲೇ ಅಡುಗೆ ತಯಾರಿಸಿ ರವಾನೆ ಮಾಡಿ ಊರಿಡೀ ತಿರುಗಾಟ ನಡೆಸುತ್ತಿದ್ದರು ಎಂಬ ಆರೋಪವೂ ಇದೆ. ಅದರೊಂದಿಗೆ ಕ್ವಾರಂಟೈನ್ ಕೇಂದ್ರದಲ್ಲಿ ಪಾರ್ಟಿ ನಡೆಸಿದ್ದರು ಎಂಬ ಮಾಹಿತಿ ಕೂಡ ಇದೆ.
ಇದಕ್ಕೆಲ್ಲ ತಾಲೂಕು ಆಡಳಿತದ ನಿರ್ಲಕ್ಷ್ಯ ಧೋರಣೆಯೇ ನೇರ ಕಾರಣವಾಗಿದೆ.
ಅದೇ ರೀತಿ ಕೊರೋನಾ ಪಾಸಿಟಿವ್ ಆಗಿರುವ ದರ್ಖಾಸ್ ಎಂಬ ಪ್ರದೇಶಕ್ಕೆ ಮೂಲಭೂತ ಸೌಕರ್ಯಗಳನ್ನು ಸ್ಥಳೀಯ ಆಡಳಿತ ಸರಕಾರಗಳು ಮಾಡಿಕೊಡಬೇಕು ಹಾಗೂ ಇಂತಹ ಘಟನೆಗಳು ನಡೆಯಲು ಕಾರಣವಾದ ಅಧಿಕಾರಿಗಳ ವಿರುದ್ಧ ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಇಲ್ಲದಿದ್ದಲ್ಲಿ ಪಕ್ಷದ ವತಿಯಿಂದ ಹೋರಾಟವನ್ನು ಮುಂದುವರೆಸಲಾಗುವುದೆಂದು ಎಸ್.ಡಿ.ಪಿ.ಐ ಸುಳ್ಯ ವಿದಾನಸಬಾ ಕ್ಷೇತ್ರದ ಅಧ್ಯಕ್ಷರಾದ ಅಬ್ದುಲ್ ಕಲಾಂ ಸುಳ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.