ಬೆಳ್ಳಾರೆ: ಬಿ.ಎಸ್.ಎನ್.ಎಲ್. ಎಸ್.ಡಿ.ಇ. ಶಿವರಾಮ ಮಡಪ್ಪಾಡಿಯವರಿಗೆ ಬೀಳ್ಕೊಡುಗೆ

Advt_Headding_Middle
Advt_Headding_Middle

ಭಾರತೀಯ ದೂರ ಸಂಪರ್ಕ ಇಲಾಖೆಯಲ್ಲಿ ಸುಮಾರು 36 ವರ್ಷಗಳಷ್ಟು ಕಾಲ ವಿವಿಧ ಹುದ್ದೆಗಳನ್ನು ಅಲಂಕರಿಸಿ ಉಪ ವಿಭಾಗೀಯ ಅಭಿಯಂತರರಾಗಿ ಮೇ. 31 ರಂದು ನಿವೃತ್ತಿ ಹೊಂದಿದ ಶಿವರಾಮ ಮಡಪ್ಪಾಡಿಯವರಿಗೆ ಬೀಳ್ಕೊಡುಗೆ ಕಾರ್ಯಕ್ರಮ ಮೇ. 30 ರಂದು ಬೆಳ್ಳಾರೆ ದೂರವಾಣಿ ಕೇಂದ್ರದಲ್ಲಿ ನಡೆಯಿತು.

ಪುತ್ತೂರು ವಿಭಾಗದ ವಿಭಾಗೀಯ ಅಭಿಯಂತರರಾದ ಆನಂದ ಪೆರ್ಲ, ಸುಳ್ಯ ಉಪ ವಿಭಾಗದ ವಿಭಾಗೀಯ ಅಭಿಯಂತರರಾದ ಎನ್.ಆರ್. ಗೋಪಾಲಕೃಷ್ಣ ಭಟ್, ಶಿವರಾಮ ಮಡಪ್ಪಾಡಿಯವರ ಧರ್ಮಪತ್ನಿ, ಕುಕ್ಕುಜಡ್ಕ ಸ.ಹಿ.ಪ್ರಾ. ಶಾಲಾ ದೈಹಿಕ ಶಿಕ್ಷಣ ಶಿಕ್ಷಕಿ ಶ್ರೀಮತಿ ರಾಜೀವಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ನಿವೃತ್ತ ಬಿ.ಎಸ್.ಎನ್.ಎಲ್. ಉದ್ಯೋಗಿಗಳಾದ ಬಾಲಕೃಷ್ಣ ರೈ ಸ್ವಾಗತಿಸಿ, ಶೇಖರ ವಂದಿಸಿದರು.

ಎ.ಕೆ. ಮಣಿಯಾಣಿ ಕಾರ್ಯಕ್ರಮ ನಿರೂಪಿಸಿದರು. ರಾಮಕೃಷ್ಣ ನಾಯ್ಕ್ ಸನ್ಮಾನ ಪತ್ರ ವಾಚಿಸಿದರು. ಶಿವರಾಮ ಮಡಪ್ಪಾಡಿಯವರ ಧರ್ಮಪತ್ನಿ ಶ್ರೀಮತಿ ರಾಜೀವಿ, ಪುತ್ರಿ ಡಾ. ಚೈತ್ರಾ ಅವಿನಾಶ್, ಕಳಂಜ ಬಳಕೆದಾರರ ವೇದಿಕೆಯ ಅಧ್ಯಕ್ಷ ಈಶ್ವರ ವಾರಣಾಶಿ ನಿವೃತ್ತರಿಗೆ ಶುಭ ಹಾರೈಸಿದರು. ಸಿಬ್ಬಂದಿಗಳು, ನಿವೃತ್ತ ಸಿಬ್ಬಂದಿಗಳು, ಶಿವರಾಮ ಮಡಪ್ಪಾಡಿಯವರ ಕುಟುಂಬದ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.