ಕನಕಮಜಲು ಯುವಕಮಂಡಲ ವತಿಯಿಂದ ಅಶ್ವಿತ್ ಮಳಿಯವರಿಗೆ ಶ್ರದ್ದಾಂಜಲಿ ಅರ್ಪಣೆ

Advt_Headding_Middle
Advt_Headding_Middle
Advt_Headding_Middle

 

ಮೇ 9 ರಂದು ವಿಧಿಯ ಕ್ರೂರ ಆಟಕ್ಕೆ ಸಿಲುಕಿ ಅಡ್ಕಾರಿನ ಪಯಸ್ವಿನಿ ನದಿಯಲ್ಲಿ ಬಲಿಯಾದ ಕನಕಮಜಲು ಯುವಕ ಮಂಡಲದ ಸದಸ್ಯ, ಕನಕಮಜಲಿನ ಅಶ್ವಿತ್ ಮಳಿ ಅವರಿಗೆ ಶ್ರದ್ಧಾಂಜಲಿ ಸಮರ್ಪಣಾ ಸಭೆಯು ಕನಕಮಜಲಿನ ಯುವಜನ ವಿಕಾಸ ಕೇಂದ್ರ ಯುವಕಮಂಡಲ ಇದರ ವತಿಯಿಂದ ಮೇ 31 ರಂದು ನಡೆಯಿತು.


ಯುವಜನ ವಿಕಾಸ ಕೇಂದ್ರ ಯುವಕಮಂಡಲದ ಪೂರ್ವಾಧ್ಯಕ್ಷ ದಾಮೋದರ ಕನಕಮಜಲು ಮಾತನಾಡಿ ಮೃತ ವ್ಯಕ್ತಿಯು ಕನಕಮಜಲಿನ ಯುವಕ ಮಂಡಲದ ಸಕ್ರಿಯ ಸದಸ್ಯನಾಗಿದ್ದು, ಎಲ್ಲರೊಡನೆ ಪ್ರೀತಿಯಿಂದ ಹೊಂದಿಕೊಳ್ಳುವ ವ್ಯಕ್ತಿತ್ವದವನಾಗಿದ್ದ. ಅದೇರೀತಿ ಈತನು ಮುಂದೊಂದು ದಿನ ಎತ್ತರಕ್ಕೆ ಬೆಳೆಯುತ್ತಿದ್ದ. ಎಲ್ಲರಿಗೂ ಹುಟ್ಟು ಸಾವು ಸಹಜ. ಆದರೆ ಇಂತಹ ಯುವ ಪ್ರತಿಭೆಗಳಿಗೆ ಇಷ್ಟು ಬೇಗ ನಮ್ಮನ್ನು ಅಗಲಿರುವುದು ವಿಧಿಯ ಆಟವೇ ಸರಿ. ಈತನು ಇಂದು ನಮ್ಮೊಂದಿಗೆ ಇಲ್ಲ ಎಂಬ ಸುದ್ದಿಯನ್ನು ನಂಬಲು ಕಷ್ಟವಾಗುತ್ತಿದೆ. ಅಶ್ವಿತ್ ನ ಅಗಲಿವಿಕೆಯು ಯುವಕ ಮಂಡಲಕ್ಕೆ ಹಾಗೂ ಕನಕಮಜಲು ಗ್ರಾಮಕ್ಕೆ ತುಂಬಲಾರದ ನಷ್ಟ ಎಂದರು.

ಈ ಸಂದರ್ಭದಲ್ಲಿ ಯುವಕ ಮಂಡಲದ ಅಧ್ಯಕ್ಷ ಜಯಪ್ರಸಾದ್ ಕಾರಿಂಥಿಯಾದ, ಉಪಾಧ್ಯಕ್ಷ ಬಾಲಚಂದ್ರ ನೆಡಿಲು , ಯುವಕ ಮಂಡಲದ ಪೂರ್ವ ಅಧ್ಯಕ್ಷರುಗಳು, ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರುಗಳು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.