HomePage_Banner
HomePage_Banner
HomePage_Banner
HomePage_Banner

ಕೊರೊನಾ ಬಗ್ಗೆ ಒಂದಿಷ್ಟು ಜಾಗೃತರಾಗೋಣ… ಧನ್ಯಶ್ರೀ ಅಡಿಂಜ

ಕೊರನಾ ವೈರಸ್ ಒಂದು ಸಾಂಕ್ರಾಮಿಕ ಸೋಂಕು ಹೊಂದಿರುವ ವೈರಸ್ ಆಗಿದ್ದು, ಇತ್ತೀಚೆಗೆ ಪತ್ತೆಯಾಗಿರುತ್ತದೆ. ವಿಶ್ವದಲ್ಲೇ ಮೊದಲ ಬಾರಿಗೆ 2019ರ ಡಿಸೆಂಬರ್ ನಲ್ಲಿ ವ್ಯೂಹಾನ್ ನಲ್ಲಿ ಸೋಂಕು ಪತ್ತೆಯಾಗಿತ್ತು. ಜಗತ್ತಿನಾದ್ಯಂತ ಶರವೇಗದಲ್ಲಿ ಆವರಿಸುತ್ತಿರುವ ಕೊರೊನಾ ಸೋಂಕಿಗೆ ಇಡೀ ಮಾನವ ಸಂಕುಲವೆ ತತ್ತರಿಸಿ ಹೋಗಿದೆ. ಸೋಂಕು ತಡೆಗಟ್ಟುವಲ್ಲಿ ಮುಂಜಾಗೃತಾ ಕ್ರಮ ವಹಿಸದೆ ಇದ್ದಲ್ಲಿ ಮುಂದೊಂದು ದಿನ ವಿಶ್ವದ ಪ್ರತಿ ಹಳ್ಳಿ ಹಳ್ಳಿಯನ್ನು ಸೋಂಕು ತಲುಪುವುದರಲ್ಲಿ ಸಂದೇಹವಿಲ್ಲ. ಹಾಗಾದರೆ ಜನಸಾಮಾನ್ಯರಾದ ನಾವು ಕೋರೋನ ತಡೆಗಟ್ಟುವಲ್ಲಿ ಪಾಲಿಸಬೇಕಾದ ಸಾಮಾನ್ಯ ನಿಯಮಗಳೇನು ..??

* ಪ್ರತಿಯೊಬ್ಬರೂ ಸ್ಯಾನಿಟೈಸರ್ ಅಥವಾ ಸಾಬೂನುಗಳಿಂದ ತಮ್ಮ ಕೈಗಳನ್ನು ಆಗಾಗ ತೊಳೆಯುತ್ತಿರಬೇಕು. ಕೆಮ್ಮು ಅಥವಾ ಸೀನುತ್ತಿರುವ ವ್ಯಕ್ತಿಯಿಂದ ಕನಿಷ್ಟ ಒಂದು ಮೀಟರ್ ಅಂತರದಲ್ಲಿ ಇರಬೇಕು.

*ಆಗಾಗ ಕಣ್ಣುಗಳನ್ನು ಉಜ್ಜುವುದು, ಮೂಗು ಬಾಯಿಯನ್ನು ಮುಟ್ಟಿಕೊ ಳ್ಳಬಾರದು. ಏಕೆಂದರೆ ನಮ್ಮ ಕೈಯಲ್ಲಿರುವ ವೈರಾಣುಗಳು ಮೂಗು ಬಾಯಿ ಕಣ್ಣುಗಳ ಮೂಲಕ ದೇಹಕ್ಕೆ ಸೇರಬಹುದು.

* ಉತ್ತಮವಾದ ಆಹಾರವನ್ನು ಸೇವಿಸಬೇಕು.

* ಮನೆಯ ಸುತ್ತ ಮುತ್ತ ಶುಚಿತ್ವವನ್ನು ಕಾಪಾಡಿಕೊಳ್ಳಬೇಕು.

* ಅನಾರೋಗ್ಯ ಕಂಡು ಬಂದಲ್ಲಿ ಮನೆಯಲ್ಲಿ ಇರಬೇಕು. ಉಸಿರಾಟದ ಸಮಸ್ಯೆ ಜೊತೆಗೆ ಜ್ವರ, ಕೆಮ್ಮು, ಇದ್ದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯಬೇಕು.

*ಮನೆಯ ಸುತ್ತಮುತ್ತಲು ಇರುವ ಜನರು ಶುಚಿತ್ವ ಕಾಪಾಡುವ ಕುರಿತು ಕಾಳಜಿ ವಹಿಸಬೇಕು.

* ಪ್ರಯಾಣದ ಸಂದರ್ಭದಲ್ಲಿ ಕಡ್ಡಾಯವಾಗಿ ಮಸ್ಕ್ ಧರಿಸಬೇಕು.

* ಕೆಮ್ಮುವಾಗ ಸೀನುವಾಗ ಕರವಸ್ತ್ರದಿಂದ ಮುಚ್ಚಿಕೊಳ್ಳಬೇಕು.
* ಕಂಡ ಕಂಡಲ್ಲಿ ಉಗುಳಬಾರದು.

*ಸಮುದಾಯದಲ್ಲಿ ಸಾಮಾಜಿಕ ಅಂತರವನ್ನು ಪಾಲಿಸಬೇಕು. ಇದೆಲ್ಲದರ ಜೊತೆಗೆ ಸರ್ಕಾರ ತಂದ ನಿಯಮವನ್ನು ಪಾಲಿಸಬೇಕು.
ಮಿತ್ರರೇ.. ಕೊರೋಣಾದ ಅಟ್ಟಹಾಸ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಎಲ್ಲರೂ ಸಾಧ್ಯವಾದಷ್ಟು ಮನೆಯಲ್ಲೇ ಇರಿ., ಲಾಕ್ಡೌನ್ ಏನೋ ಸಡಿಲಿಕೆ ಗೊಂಡಿದೆ ಆದರೆ ಕೋರೋಣ ಅಲ್ಲ …. ಮನೆಯಲ್ಲೇ ಇದ್ದು ನಮ್ಮನ್ನು ನಮ್ಮವರನ್ನು ರಕ್ಷಿಸೋಣ…

…ಧನ್ಯಶ್ರೀ ಅಡಿಂಜ…

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.