ಗುರುಂಪುನಿಂದ ನಾಗಪಟ್ಟಣ ಸೇತುವೆ ತನಕ ಕಾಂಕ್ರಿಟೀಕರಣ ಕಾಮಗಾರಿ ಆರಂಭ

Advt_Headding_Middle
Advt_Headding_Middle
Advt_Headding_Middle


ಸುಳ್ಯ ಗಾಂಧಿನಗರದಿಂದ ಆಲೆಟ್ಟಿ ಕಡೆಗೆ ಹೋಗುವ ರಸ್ತೆ ಗುರುಂಪುನಿಂದ ನಾಗಪಟ್ಟಣ ಸೇತುವೆ ತನಕ ಹದಗೆಟ್ಟಿದ್ದು, ಕಾಮಗಾರಿಗೆ ಮೇ. ೨೯ರಂದು ಶಾಸಕ ಅಂಗಾರರು ಗುದ್ದಲಿಪೂಜೆ ನೆರವೇರಿಸಿದರು. ಜೂನ್  2 ರಿಂದ ಜೇಸಿಬಿಯಲ್ಲಿ ರಸ್ತೆ ಅಗೆಯುವ ಮೂಲಕ ಕಾಮಗಾರಿ ಆರಂಭಗೊಂಡಿದೆ.

ಅರ್ಥ್ ವರ್ಕ್ ಕಾಮಗಾರಿ ನಡೆಯುವ ಸಂದರ್ಭದಲ್ಲಿ ಒಂದು ಬದಿಯಲ್ಲಿ ವಾಹನ ಸಂಚಾರಕ್ಕೆ ಅವಕಾಶವಿರುವುದು. ಬಳಿಕ ಕಾಂಕ್ರೀಟಿಕರಣ ಕೆಲಸ ಏಕಕಾಲದಲ್ಲಿ ಮಾಡುವುದರಿಂದ ಸಂಚಾರವನ್ನು ನಿಷೇಧ ಮಾಡಲಾಗುವುದು. ಸುಮಾರು 5.5 ಮೀಟರ್ ಅಗಲದಲ್ಲಿ 8 ಇಂಚು ದಪ್ಪದಲ್ಲಿ ಕಾಂಕ್ರೀಟ್ ಕೆಲಸ ನಿರ್ವಹಿಸುವುದರಿಂದ ಸಂಚಾರ ಬಂದ್ ಮಾಡಬೇಕಾಗುವುದು.ಕಾಂಕ್ರಿಟ್ ಕಾಮಗಾರಿ ಸಂದರ್ಭದಲ್ಲಿ ಸುಮಾರು 15 ದಿನಗಳ ಕಾಲಾವಕಾಶ ಬೇಕು ಎಂದು ಇಂಜಿನಿಯರ್ ತಿಳಿಸಿರುತ್ತಾರೆ. ಕುಂದಾಪುರದ ಡೈನಾಮಿಕ್ ಕನ್ಸಟ್ರಕ್ಷನ್ ರವರು ಕೆಲಸ ನಿರ್ವಹಿಸಲಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.