ಬಾರ್ಪಣೆ ಸೇತುವೆಯಲ್ಲಿ ಲಘು ವಾಹನ ಸಂಚಾರಕ್ಕೆ ಅವಕಾಶ

Advt_Headding_Middle
Advt_Headding_Middle
Advt_Headding_Middle

ನಿಟ್ಟುಸಿರು ಬಿಡುವಂತಾಗಿದೆ ಕೋಲ್ಚಾರು ಭಾಗದ ನಾಗರಿಕರು

ಆಲೆಟ್ಟಿ ಗ್ರಾಮದ ನಾರ್ಕೋಡು-ಕೋಲ್ಚಾರು ಸಂಪರ್ಕದ ರಸ್ತೆ ಮಧ್ಯೆ ಬಾರ್ಪಣೆ ಎಂಬಲ್ಲಿ ಸೇತುವೆ ನಿರ್ಮಾಣದ ಕಾಮಗಾರಿಯು ನಡೆಯುತ್ತಿದ್ದು, ತಾತ್ಕಾಲಿಕವಾಗಿ ಲಘು ವಾಹನ ಸಂಚಾರಕ್ಕೆ ಅವಕಾಶವನ್ನು ಜೂ.೩ ರಿಂದ ಕಲ್ಪಿಸಿಕೊಡಲಾಗುವುದು ಎಂದು ಗುತ್ತಿಗೆದಾರರು ತಿಳಿಸಿರುತ್ತಾರೆ. ಈಗಾಗಲೇ ಸೇತುವೆಯ ಎರಡು ಬದಿ ತಡೆಗೋಡೆ ನಿರ್ಮಿಸಿ ಮಣ್ಣು ತುಂಬಿಸುವ ಕಾರ್ಯ ತ್ವರಿತಗತಿಯಲ್ಲಿ ಸಾಗುತ್ತಿದೆ. ಟಿಪ್ಪರ್ ನಲ್ಲಿ ನಿರಂತರ ಎರಡು ದಿನಗಳಿಂದ ಮಣ್ಣು ತಂದು ಸೇತುವೆಗೆ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಮಣ್ಣು ತುಂಬಿಸಿ ವೈಬ್ರೆಟ್ ನಲ್ಲಿ ಸಮತಟ್ಟು ಮಾಡಲಾಗಿದೆ. ಮೇಲ್ಭಾಗಕ್ಕೆ ಸಿಮಂಟ್ ಹುಡಿ ಮಿಶ್ರಿತ ದೊಡ್ಡ ಗಾತ್ರದ ಜಲ್ಲಿ ಹಾಕಿ ವೈಬ್ರೆಟ್ ನಲ್ಲಿ ಸಮತಟ್ಟುಗೊಳಿಸಿದ ನಂತರ ನಾಳೆ ( ಜೂ.೩) ರಿಂದ ಸರಾಗವಾಗಿ ಲಘು ವಾನಗಳು ಸಂಚರಿಸಬಹುದೆಂದು ಗುತ್ತಿಗೆದಾರರು ತಿಳಿಸಿದರು.

ಕೋಲ್ಚಾರು ಭಾಗದ ನಾಗರೀಕರು ಪರ್ಯಾಯ ರಸ್ತೆಯಾಗಿ ಪೈಂಬೆಚ್ಚಾಲು ಮೂಲಕ ಸಂಚರಿಸುತ್ತಿದ್ದು ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಇದೀಗ ಈ ರಸ್ತೆಯು ಕೆಸರುಮಯವಾಗಿದ್ದು ಸಂಚರಿಸಲು ವಾಹನ ಸವಾರರು ಹರಸಾಹಸ ಪಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಸಮಯಕ್ಕೆ ಸರಿಯಾಗಿ ತ್ವರಿತಗತಿಯಲ್ಲಿ ಸೇತುವೆ ಸಂಪರ್ಕ ಕಲ್ಪಿಸಿಕೊಟ್ಟಿರುವುದರಿಂದ ಕೋಲ್ಚಾರು ಭಾಗದ ಜನತೆ ಇದೀಗ ನಿಟ್ಟುಸಿರು ಬಿಡುವಂತಾಗಿದೆ.


ಸೇತುವೆಯ ಕಾಮಗಾರಿ ಕೆಲಸ ಶೇ ೧೦೦ ರಷ್ಟು ಸಂಪೂರ್ಣವಾಗಲಿಲ್ಲ. ಲಾಕ್ ಡೌನ್ ನಿಂದಾಗಿ ಸ್ಥಗಿತಗೊಂಡು ಕೂಲಿ ಕಾರ್ಮಿಕರು ತಮ್ಮ ಊರಿಗೆ ತೆರಳಿರುವುದರಿಂದ ಮಣ್ಣು ತುಂಬಿಸುವ ಕೆಲಸವನ್ನು ಲೋಕಲ್ ಹಿಟಾಚಿ ಬಳಸಿ ಮಾಡಿರುತ್ತಾರೆ. ಉಳಿದ ಅಂತಿಮ ಹಂತದ ಕೆಲಸ ಮಳೆಗಾಲ ಮುಗಿದ ಬಳಿಕ ಮಾಡುವುದಾಗಿ ತಿಳಿಸಿದ್ದಾರೆ.

ಸೇತುವೆ ಒಂದು ಬದಿಯಲ್ಲಿ ಮಣ್ಣು ತುಂಬಿಸಿ ಸಂಪರ್ಕ ಕಲ್ಪಿಸಲು ತಡೆಗೋಡೆ ನಿರ್ಮಿಸಿ ವೈಬ್ರೆಟ್ ಮೂಲಕ ಸಮತಟ್ಟು ಮಾಡುವಾಗ ತಡೆಗೋಡೆಯಲ್ಲಿ ಬಿರುಕು ಕಾಣಿಸಿದ್ದು ಇದನ್ನು ಫೊಟೋ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಹಾಕಲಾಗಿತ್ತು.
ಈ ಬಗ್ಗೆ ಗುತ್ತಿಗೆದಾರರಲ್ಲಿ ಸುದ್ದಿ ವಿಚಾರಿಸಿದಾಗ “ಇದು ಸೇತುವೆಗೆ ಲಿಂಕ್ ಇರುವುದಿಲ್ಲ. ಮಣ್ಣು ತುಂಬಿಸಿ ಹಂತ ಹಂತವಾಗಿ ಸುಮಾರು ಏಳುವರೆ ಟನ್ ಸಾಮರ್ಥ್ಯದ ವೈಬ್ರೆಟ್ ಮೂಲಕ ತಟ್ಟು ಮಾಡುವಾಗ ತಡೆಗೋಡೆ ಸ್ವಲ್ಪ ಬಿರುಕು ಕಾಣಿಸಿಕೊಂಡಿದೆ. ಇದರಿಂದ ಸೇತುವೆಗೆ ಹಾನಿಯಾಗುವುದಿಲ್ಲ. ಸಂಚಾರಕ್ಕೂ ಏನು ತೊಂದರೆಯಿಲ್ಲ ಎಂದು ಹೇಳಿದರು. ಈ ಸೇತುವೆ ಕಾಮಗಾರಿ ಕೆಲಸವನ್ನು ಕಾಸರಗೋಡಿನ ಲೋಫ್ ಕನ್‌ಸ್ಟ್ರಕ್ಷನ್ ವಹಿಸಿಕೊಂಡಿರುವುದಲ್ಲದೆ ಮುಂದಿನ 3 ವರ್ಷಗಳ ಅವದಿಯವರೆಗೆ ಸೇತುವೆ ನಿರ್ವಹಣೆಯ ಜವಾಬ್ದಾರಿ ವಹಿಕೊಂಡಿರುತ್ತದೆ” ಎಂದು ತಿಳಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.