HomePage_Banner
HomePage_Banner
HomePage_Banner
HomePage_Banner

ದೇಶದ ಜನರ ಜೀವ ಉಳಿಯಬೇಕಾದಲ್ಲಿ ಕ್ವಾರಂಟೈನ್ ಅವಧಿಯನ್ನು ಹಿಂದಿನಂತೆ ಮುಂದುವರೆಸಿ : ವೆಂಕಪ್ಪ ಗೌಡ

ನಮ್ಮದೇಶ ಮತ್ತು ರಾಜ್ಯದಲ್ಲಿ ಮಾರ್ಚ್ ತಿಂಗಳ ವೇಳೆ ಕೊರೋನ ಖಾಯಿಲೆ ಹರಡಲು ಪ್ರಾರಂಭಿಸಿದಾಗ ರಾಜ್ಯ ಮತ್ತು ಕೇಂದ್ರ ಸರಕಾರಗಳು ಬಹಳಷ್ಟು ಮುತುವರ್ಜಿಯಿಂದ ದೇಶದ ಜನರ ಜೀವ, ದೇಶದ ಆರ್ಥಿಕತೆಗಿಂತ ಮುಖ್ಯ ಎಂಬ ದೃಷ್ಟಿಯಲ್ಲಿ ದೇಶಕ್ಕೆ ಪೂರಕವಾದ ಕ್ರಮವನ್ನು ತೆಗೆದುಕೊಂಡಿರುವುದು ಶ್ಲಾಘನೀಯ. ಆದರೆ ದಿನ ಕಳೆದಂತೆ ರೋಗವು ನಾಗಲೋಟದಲ್ಲಿ ವ್ಯಾಪಿಸುತ್ತಿರುವ ಈ ಸಮಯದಲ್ಲಿ ಆಸ್ಪತ್ರೆಗಳಲ್ಲಿ ಬೆಡ್ ಇಲ್ಲ. ಕ್ವಾರಂಟೈನ್ ಮಾಡುವರೇ ಸ್ಥಳಾವಕಾಶದ ಕೊರತೆ ಇದೆ ಎಂಬ ಕಾರಣಗಳನ್ನು ನೀಡಿ, ಹಿಂದೆ ಕ್ವಾರಂಟೈನ್ ವ್ಯವಸ್ಥೆಗೆ ಅನುಸರಿಸುತ್ತಿದ್ದ 14/ 28 ದಿನಗಳ ಬದಲಾಗಿ ಈಗ ಕೇವಲ 7/ 14 ದಿನಗಳ ಕ್ವಾರಂಟೈನ್ / ಹೋಂ ಕ್ವಾರಂಟೈನ್ ವಿಧಿಸುತ್ತಿರುವ ಕ್ರಮ ಈ ದೇಶದ ಜನರ ಭವಿಷ್ಯದ ಹಿತ ದೃಷ್ಟಿಯಿಂದ ಅತ್ಯಂತ ಶೋಚನೀಯವಾಗಿರತಕ್ಕಂತಹ ಕ್ರಮವಾಗಿರುತ್ತದೆ.

Advertisement

ಈ ಒಂದೇ ಕಾರಣದಿಂದ ನಮ್ಮ ರಾಜ್ಯಾದ್ಯಂತ ದಾಖಲೆಗಳ ಪ್ರಮಾಣದಲ್ಲಿ ಸೋಂಕಿತರ ಸಂಖ್ಯೆ ಏರುತ್ತಿರುವುದಾಗಿದೆ. ಇದನ್ನು ಗಮನಿಸಿದಾಗ ನಮ್ಮ ಸರಕಾರಗಳು ಕೈ ಚೆಲ್ಲಿ ಕುಳಿತು ಅವರವರ ತಲೆಯ ಅಡಿಗೆ ಅವರವರ ಕೈ ಎಂಬ ಒಂದು ಗಾದೆ ಮಾತಿನಂತೆ ನಡೆದುಕೊಳ್ಳುತ್ತಿರುವುದು ನಿಜಕ್ಕೂ ಅತ್ಯಂತ ಕಳವಳಕಾರಿಯಾದ ಸಂಗತಿಯಾಗಿರುತ್ತದೆ. ಮುಖ್ಯಮಂತ್ರಿಗಳು ಕ್ರಮ ಕೈಗೊಳ್ಳುವಂತರ ಕೆಪಿಸಿಸಿ ಮಾಜಿ ಕಾರ್ಯದರ್ಶಿ ಎಂ. ವೆಂಕಪ್ಪಗೌಡ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.