HomePage_Banner
HomePage_Banner
HomePage_Banner
HomePage_Banner

ದೊಡ್ಡತೋಟದಲ್ಲಿ ಬರೆ ಜರಿದು ರಸ್ತೆಯಲ್ಲೆ ನೀರು – ರಸ್ತೆ ಬದಿ ಹೊಂಡ

 

ದೊಡ್ಡತೋಟದಿಂದ ಮರ್ಕಂಜ ರಸ್ತೆಗೆ ತಿರುಗುವ ಶಿವರಾಮ ಗೌಡ ಎಂಬವರ ಮನೆಯ ಬದಿಯ ಬರೆ ಕಳೆದ ವರ್ಷದ ಮಳೆಗಾಲದಲ್ಲಿ ಕುಸಿದು ಬಿದ್ದು ಚರಂಡಿ ಬ್ಲಾಕ್ ಆಗಿತ್ತು.

ಆ ಸಂದರ್ಭ ಮತ್ತಷ್ಟು ಕುಸಿಯದಂತೆ ಟರ್ಪಲ್ ಹೊದಿಸಿ ಬರೆ ಮತ್ತೆ ಜರಿಯದಂತೆ ತಾತ್ಕಾಲಿಕವಾಗಿ ಮಾಡಲಾಗಿತ್ತು. ಆದರೆ ನಂತರ ಆ ಮಣ್ಣು ತೆಗೆದು ಚರಂಡಿ ದುರಸ್ಥಿ ಮಾಡುವ ಕೆಲಸ ಆಡಳಿತ ಮಾಡಲಿಲ್ಲ.

ಪರಿಣಾಮ ಈಗ ಸುರಿಯುತ್ತಿರುವ ಮಳೆಗೆ ಚರಂಡಿ ಬ್ಲಾಕ್ ಆಗಿ ಮಳೆ ನೀರು ರಸ್ತೆಯಲ್ಲೇ ಹರಿದು ಇನ್ನೊಂದು ಬದಿ ಕೊರೆದು ಹೋಗಿ ಹೊಂಡಗಳು ನಿರ್ಮಾಣವಾಗಿದೆ. ಇದರಿಂದ ವಾಹನ ಚಾಲಕರು ಅಪಾಯ ಎದುರಿಸುವಂತಾಗಿದೆ.
ಸಂಬಂಧಪಟ್ಟ ಜನಪ್ರತಿನಿಧಿಗಳು, ಅಧಿಕಾರಿಗಳು ಇತ್ತ ಗಮನಹರಿಸಬೇಕಾಗಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.