ಶಾಲೆ ಪ್ರಾರಂಭಕ್ಕೆ ಇದು ಸಕಾಲವಲ್ಲ

Advt_Headding_Middle
Advt_Headding_Middle
Advt_Headding_Middle

 

✍️ ಪೂರ್ಣಿಮಾ ಪಂಜ

ಎಲ್ಲರಿಗೂ ತಿಳಿದಂತೆ ನಾವಿಂದು ಕೋವಿಡ್ 19 ನಿಂದ ಭಯಬೀತರಾಗಿದ್ದೀವಿ, ಲಾಕ್ ಡೌನ್ ಇರುವಾಗ ಇದ್ದ ಸ್ಥಿತಿ ಈಗಂತೂ ಖಂಡಿತ ಇಲ್ಲ, ಮೊದಲು ನಿಯಂತ್ರಣಕ್ಕೆಂದು ಮನೆಯಲ್ಲಿ ಹೆದರಿ ಕೂತದ್ದೇ ಹೆಚ್ಚು, ಈವಾಗ ಲಾಕ್ ಡೌನ್ ಸಡಿಲಿಕೆಯಾಯಿತು ರೋಗಿಗಳ ಸಂಖ್ಯೆ ಹೆಚ್ಚೇರಿತು.

ಈ ನಡುವೆಯಲ್ಲಿ ಶಾಲಾ ಪ್ರಾರಂಭದ ಆತಂಕ, ಯಾವಾಗ ಶಾಲೆ ಶುರುವಾಗುತ್ತೋ, ಮಕ್ಕಳನ್ನು ಬಿಟ್ಟು ಉದ್ಯೋಗಕ್ಕೂ ಹೋಗಲು ಕಷ್ಟ, ಶಾಲೆ ಪ್ರಾರಂಭವಾಗಲಿ ಎಂದು ಪೊಷಕರು ಇಚ್ಚಿಸುವವರೂ ಇದ್ದಾರೆ, ಹಾಗೇ ಶಾಲೆ ಪ್ರಾರಂಭವೆಂದಾಗ ಪೋಷಕರಿಗೂ, ಶಿಕ್ಷಕರಿಗೂ ಆತಂಕದ ಮನೆ ಮಾಡಿದೆ. ಒಮ್ಮೆ ಯೋಚಿಸಿದೆ, ಶಾಲೆಯಲ್ಲೀ ಹೇಗೇ ಸಾಮಾಜಿಕ ಅಂತರ ಕಂಡುಕೊಳ್ಳುವುದು, ಹೇಗೆ ಇರಬಹುದು ಅನ್ನೋದು ಒಂದು ಚಿತ್ರಣ ಕಣ್ಣ ಮುಂದೆ…
6ನೇ ತರಗತಿ ಇಂದ ಮೇಲೇ ಶಿಕ್ಷಕರು ಪೋಷಕರು ಹೇಳಿದ ರೋಗದ ವಿವರಣೆ ಸುರಕ್ಷತೆ ಬಗ್ಗೆ ಹೇಗೋ ಒಂದು ಹಂತಕ್ಕೆ ಅರ್ಥೈಸಬಹುದು ,ಕಾರ್ಯರೂಪಕ್ಕೆ ತರಬಹುದು, ಆದರೆ ಎಲ್ ಕೆಜಿ, ಯು ಕೆಜಿ, 1ರಿಂದ 5 ನೇ ತರಗತಿಯವರೆಗೆ ಹೇಗೆ ಅಂತರ ಕಾಯ್ದಕೊಳ್ಳುವುದು, ಒಂದು ಶೌಚಾಲಯವನ್ನು ಒಬ್ಬರಿಂದ ಮತ್ತೊಬ್ಬರಿಗೆ ಬಳಕೆ, ಕುಡಿಯುವ ನೀರಿನ ಲೋಟ, ಇತ್ಯಾದಿ, ಇವುಗಳನ್ನು ಒಂದೆರಡು ದಿನ ಒಬ್ಬ ಬಳಕೆ ಮಾಡಿದ ಕೂಡಲೇ ಸ್ವಚ್ಛ ಮಾಡಬಹುದು, ಪ್ರತಿ ಕ್ಷಣ ಸ್ವಚ್ಛ ಮಾಡಲು ಖಾಸಗಿ ಶಾಲೆಯಲ್ಲಿ ಸಹಾಯಕರಿದ್ದಾರೆ, ಸರಕಾರಿ ಶಾಲೆಯಲ್ಲಿ ಶಿಕ್ಷಕರು ಈ ಕೆಲಸವನ್ನು ಮಾಡಬೇಕಾದಿತು, ಮಕ್ಕಳ ಸಂಖ್ಯೆ ಹೆಚ್ಚಿದ್ದರೂ ಕೂಡ ಪಾಠಗಿಂತ ಹೆಚ್ಚು ,ಮಕ್ಕಳ ದೂರು, ಸ್ವಚ್ಛತೆಯಲ್ಲಿ ಕಾಲಹರಣವಾದರೆ ಶಾಲೆಗೆ ಬಂದು ಉಪಯೋಗವೇನು.??!!
ಆನ್ಲೈನ್ ತರಗತಿ ಶುರು ಮಾಡುವುದೆಂದರೆ ಎಲ್ಲಿಗೆ??! ಸರಿಯಾಗಿ ನೆಟ್ವರ್ಕ್ ಇಲ್ಲದ ಊರಿನಲ್ಲಿ, ಇದು ಸಾಧ್ಯವಾ?? ಮೊಬೈಲ್ ಫೋನ್ ಬಳಕೆ ಕಡಿಮೆ ಮಾಡಬೇಕೆಂದಲ್ಲಿ ಬಳಕೆಯ ಪರಿಮಾಣ ಹೆಚ್ಚಾಗುತ್ತಿದೆ.

ಒಂದು ಪತ್ರಿಕೆಯಲ್ಲಿ ಓದಿದೆ, ದೊಡ್ಡವರು ಹೇಗೆ ಉದ್ಯೋಗಕ್ಕೇ ಹೋಗಿ ಬರುತ್ತಾರೇಯೋ ಹಾಗೇ, ಮಕ್ಕಳಿಗೆ ಮನೆಯೇ ಪಾಠ ಶಾಲೆವಾಗದಿರಲಿ ಎಂದು,ಮಕ್ಕಳು ಕೂಡ ಶಾಲೆಗೆ ಹೋಗಲಿ ಎಂದು, ದೊಡ್ಡವರಿಗೆ ಜವಬ್ದಾರಿ ಇದೆ,, ರೋಗ ಲಕ್ಷಣದ ಅರಿವಿದೆ ಹಾಗೆಂದು ಕರೋಣಾ ವಿರುದ್ಧ ಹೋರಾಟದಲ್ಲಿ ಸಂರಕ್ಷಣೆ ಜೊತೆ ದಿನ ಕಳೆಯುತ್ತಾರೆ. ಸಣ್ಣ ಮಕ್ಕಳು ಹಾಗಲ್ಲ ಅವರಿಗೆ ತರಗತಿಯಲ್ಲಿ ಬೆರೆತು, ಜತೆಯಲ್ಲಿ ಊಟ ಪಾಠ, ಆಟವಾಗಬೇಕು, ಇದನ್ನೆಲ್ಲ ಹೇಗೆ ದೂರ ಮಾಡಲು ಸಾದ್ಯ, ಒಂದು 2 ನಿಮಿಷ ತರಗತಿ ಬಿಟ್ಟರೆ ಮಕ್ಕಳ ಆಟ, ಪೈಟಿಂಗ್, ದೂಡಿಕೊಳ್ಳುವುದು ಇದನ್ನೆಲ್ಲಾ ನೋಡಿ ಶಿಕ್ಷಕ್ಷರೇನು ಮಾಡುವುದು, ಮಾಸ್ಕ್, ಹಾಕಿಕೊಂಡು ಕೂತರೆ, ಅದನ್ನು ಸ್ನೇಹಿತ ಎಳೆದು ಹಾಕುವುದು ಅದರಲ್ಲಿ ಆಟ, ಅತಿಯಾದ ಸಾನಿಟೈಸರಿ ಬಳಕೆಯು ತೀರಾ ಪರಿಣಾಮಕಾರಿ… ಮಾಸ್ಕ್, ಸಾನಿಟೈಸರಿ ಬಳಕೆ ಯಾಕೆಂದು ಪ್ರಶ್ನೆಗೆ ಉತ್ತರ ನೀಡುವಂತೆ ಪೋಷಕರು, ಶಿಕ್ಷಕರು ಹೇಳುವರು, ಆದರೇ ಮಕ್ಕಳ ಮನಸ್ಸಿನಲ್ಲಿ ಇದರ ಗಂಭೀರತೆ ಅಳವಡಿಸಲು ಸಾದ್ಯವಾ… ರೋಗದ ತೀವ್ರತೆಯನ್ನು ಅರಿಯದ ಮುಗ್ಧ ಮಕ್ಕಳನ್ನು ಬಲಿಪಶು ಮಾಡುವುದು ಸರಿಯೇ??!! ಎಂಟರಿಂದ ರಿಂದ ಹತ್ತು ಕಿಲೋಮೀಟರ್ ಒಳಗೆ ಯಾವುದೇ ಕೊರೋನಾ ರೋಗದ ಸಮಸ್ಯೆ ಇಲ್ಲದಿದ್ದಲಿ ಶಾಲೆ ನಡೆಸಲು ತುಸು ನೆಮ್ಮದಿ..ಆದರೆ, ಪೇಟೆಗೆ ಹೋಗಿ ಬರುವ ಮಕ್ಕಳನ್ನು ಸುರಕ್ಷತೆ ಎಷ್ಟು ಮಾಡಲು ಸಾಧ್ಯ??! ಲಾಕ್ ಡೌನ್ ಸಡಿಲಿಕೆಯಾಯಿತು ಎಂದು ಎಚ್ಚರ ತಪ್ಪಿದ್ದರೆ ಕಟ್ಟಿಟ್ಟ ಬುತ್ತಿ, ಒಂದಿಷ್ಟು, ಸಮಯ ಕಳೆಯಲಿ, ರೋಗ ಲಕ್ಷಣಗಳನ್ನು ಕಡಿಮೆಯಾಗಿ ಮತ್ತೆ ಶಾಲಾ ಪ್ರಾರಂಭವಾಗಲಿ ಎಂದರೆ ಕಡಿಮೆಯಾಗುವುದು ಅನುಮಾನ. ಮಕ್ಕಳ ಹಿತ ದೃಷ್ಟಿಯಿಂದ ಒಂದೆರಡು ತಿಂಗಳು ಕಾದು ನೋಡಬೇಕಿತ್ತು….
ಏನೋ ಎಲ್ಲರ ಮನದಲ್ಲಿ ಆತಂಕ, ಹಾಗೂ ಗೊಂದಲದ ವಾತವರಣ..

✍️ ಪೂರ್ಣಿಮ ಪಂಜ, ಚೊಕ್ಕಾಡಿ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.