ಸಂಪಾಜೆ : ಘನ ತ್ಯಾಜ್ಯ ಘಟಕದ ಬೇಡಿಕೆಯ ಸ್ಥಳ ಪರಿಶೀಲನೆ ಮಾಡಲು ಉಪ ಅರಣ್ಯ ಸಂರಕ್ಷಣಾ ಅಧಿಕಾರಿ ಕರಿಕಲನ್ ಸಂಪಾಜೆಗೆ ಭೇಟಿ

Advt_Headding_Middle
Advt_Headding_Middle
Advt_Headding_Middle

ಸಂಪಾಜೆ ಗ್ರಾಮ ಪಂಚಾಯತ್ ಘನ ತ್ಯಾಜ್ಯ ಘಟಕದ ಬೇಡಿಕೆಯ ಸ್ಥಳ ಪರಿಶೀಲನೆ ಮಾಡಲು ಉಪ ಅರಣ್ಯ ಸಂರಕ್ಷಣಾ ಅಧಿಕಾರಿ ಕರಿಕಲನ್ ಸಂಪಾಜೆಗೆ ಭೇಟಿ ನೀಡಿದರು. ಸ್ಥಳೀಯರು, ಜನಪ್ರತಿನಿಧಿಗಳು, ನಾಗರಿಕರೊಂದಿಗೆ ಸಮಾಲೋಚಿಸಿದರು. ಬೇಡಿಕೆಯನ್ನು ಪರಿಹರಿಸಲು ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ಗ್ರಾಮ ಈ ಸ್ಥಳ ಒದಗಿಸಲು ಹಲವು ವರ್ಷಗಳಿಂದ ಬೇಡಿಕೆಯನ್ನು ಸಲ್ಲಿಸಿತು. ಇದೀಗ ಒನ್ ಲೈನ್ ಮೂಲಕ ಬೇಡಿಕೆ ಸಲ್ಲಿಸಿ ಇಲಾಖೆ ಗಮನ ಹರಿಸಿದೆ.
ಈ ಸಂದರ್ಭದಲ್ಲಿ ವಲಯ ಅರಣ್ಯ ಅಧಿಕಾರಿ ಮಂಜುನಾಥ, ಫಾರೆಸ್ಟ್ ಚಂದ್ರು, ಅರಣ್ಯ ಇಲಾಖೆಯ ಶಿವಕುಮಾರ್ , ಸುಂದರ, ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಹಮೀದ್ ಜಿ. ಕೆ., ಸದಸ್ಯ ಷನ್ಮುಗಂ, ವರ್ತಕರ ಸಂಘದ ಅಧ್ಯಕ್ಷ ಚಕ್ರಪಾಣಿ ಕಾರ್ಮಿಕ ಮುಖಂ,ಡರಾದ ಜೋನಿ ಕೆ. ಪಿ., ಜನಶೀಲನ್( ರಾಜು), ಹನೀಫ್ ಎಸ್.ಕೆ., ಭರತ್ ನಂದಾ ಬಾಚಿಗದ್ದೆ ಉಪಸ್ಥಿತರಿದ್ದರು. ಈ ಸಂದರ್ಭ ಮಾಜಿ ಅಧ್ಯಕ್ಷ ಹಮೀದ್ ಜಿ. ಕೆ. ಸ್ಮಶಾನ ಸ್ಥಳದ ಬಗ್ಗೆ ಹಾಗೂ ರಾಜರಂಪುರ ಸಬಸ್ಟೇಷನ್ ಸ್ಥಳದ ಬಗ್ಗೆ ಪ್ರಸ್ತಾಪಿಸಿದಾಗ ಸಬ್ ಸ್ಟೇಷನ್ ಸ್ಥಳ ಈಗಾಗಲೇ ಮೇಲಧಿಕಾರಿಗಳಿಗೆ ತಿಳಿಸಿದೆ. ಘನ ತ್ಯಾಜ್ಯ ಘಟಕದ ಬಗ್ಗೆಯೂ ಕೂಡಲೇ ಮೇಲಾಧಿಕಾರಿಗಳಿಗೆ ಕಳುಹಿಸಿ ಕೊಡುವುದಾಗಿ ತಿಳಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.