ಅರಂತೋಡಿಗೆ ಬಂದಿದ್ದ ವೈದ್ಯರ ಎರಡನೇ ರಿಪೋರ್ಟ್ ನೆಗೆಟಿವ್

Advt_Headding_Middle
Advt_Headding_Middle
Advt_Headding_Middle

ಜಾಹೀರಾತು

ಕಳೆದ ವಾರ ಅರಂತೋಡಿಗೆ ಬಂದಿದ್ದ ವೈದ್ಯರೊಬ್ಬರಿಗೆ ಕೊರೋನಾ ಪಾಸಿಟಿವ್ ಕಂಡುಬಂದು ಹಲವರು‌ ಕ್ವಾರಂಟೇನ್ ಆಗಬೇಕಾಗಿ ಬಂದ ಬೆನ್ನಲ್ಲೇ ಇದೀಗ ಅವರ ಎರಡನೇ ರಿಪೋರ್ಟ್ ನೆಗೆಟಿವ್ ಬಂದಿದೆ.

ಮಲೇಷ್ಯಾದಿಂದ ಬಂದು‌ ಬೆಂಗಳೂರಿನಲ್ಲಿ ಒಂದು ವಾರ ಕ್ವಾರಂಟೇನ್ ನಲ್ಲಿದ್ದ ಈ ವೈದ್ಯರು ಬಳಿಕ ಮಂಗಳೂರಿನ ಮನೆಗೆ ಬಂದಿದ್ದರು. ಅಲ್ಲಿಂದ ಅರಂತೋಡು ಬಳಿಯ ತನ್ನ ಸಂಬಂಧಿಕರ ಮನೆಗೆ ಬಂದ ಸಂದರ್ಭ ಅವರಿಗೆ ಪಾಸಿಟಿವ್ ಬಂದಿರುವುದಾಗಿ ಫೋನ್ ಬಂದಿತ್ತು. ಈ ಹಿನ್ನೆಲೆಯಲ್ಲಿ ಅವರು ಮಂಗಳೂರು ಕೋವಿಡ್ ಆಸ್ಪತ್ರೆಯಲ್ಲಿ ದಾಖಲಾಗಿದ್ದರು.

ವೈದ್ಯರು ಬಂದ ಮನೆಯವರನ್ನು ಕ್ವಾರಂಟೇನ್ ಗೆ ಸೂಚಿಸಲಾಗಿತ್ತು. ಮನೆಯ ಯಜಮಾನ ಮದುವೆಯೊಂದರಲ್ಲಿ ಭಾಗಿಯಾದ ಹಿನ್ನೆಲೆಯಲ್ಕಿ ಮದುವೆಯಲ್ಲಿ ಭಾಗಿಯಾದ ಐವತ್ತಕ್ಕೂ ಹೆಚ್ಚು ಮಂದಿಯ ಕ್ವಾರಂಟೇನ್ ಗೂ ಸೂಚಿಸಲಾಗಿತ್ತು.

 

ಜಾಹೀರಾತು

ಈ ಮಧ್ಯೆ ಕೋವಿಡ್ ಆಸ್ಪತ್ರೆಯಲ್ಲಿ ವೈದ್ಯರ ಗಂಟಲ ದ್ರವ ಮಾದರಿಯನ್ನು ಪರೀಕ್ಷಿಸಲಾಗಿತ್ತು, ಇದರ ವರದಿ ನೆಗೆಟಿವ್ ಬಂದಿದೆ.

ಬೆಂಗಳೂರಿನಲ್ಲಿ ವರದಿ ಪಾಸಿಟಿವ್ ಬಂದ ಹಲವರ ವರದಿ ಕೆಲವೇ ದಿನದಲ್ಲಿ ನೆಗೆಟಿವ್ ಬಂದಿದ್ದು, ಬಿಬಿಎಂಪಿಯವರು ಲ್ಯಾಬ್ ನವರಿಂದ ಸ್ಪಷ್ಟೀಕರಣ ಕೇಳಿರುವುದಾಗಿ ತಿಳಿದುಬಂದಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.