HomePage_Banner
HomePage_Banner
HomePage_Banner
HomePage_Banner

ಶಶೀಂದ್ರ ಬೊಣ್ಯಡ್ಕ ಆತ್ಮಹತ್ಯೆ

ಮುರುಳ್ಯ ಗ್ರಾಮದ ಕಾಯರ್ತಡ್ಕ ಬಳಿಯ ಬೊಣ್ಯಡ್ಕ ಎಂಬಲ್ಲಿಯ ನಿವಾಸಿ ಶಶೀಂದ್ರರವರು ಜೂ. 4ರಂದು ತಮ್ಮ ಮನೆಯ ಒಳಗಡೆ ಪಕ್ಕಾಸಿಗೆ ನೆಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.


ನೆರೆ ಮನೆಯ ಆನಂದ ಎಂಬವರು ಜೂ. 4ರಂದು ಬೆಳಿಗ್ಗೆ ಕೂಲಿ ಕೆಲಸಕ್ಕೆ ಹೋಗಲೆಂದು ಕರೆಯಲು ಬಂದಾಗ ಶವ ಪಕ್ಕಾಸಿನಲ್ಲಿ ನೇತಾಡಿಕೊಂಡಿದ್ದನ್ನು ಗಮನಿಸಿ ಬಳಿಕ ಇತರರಿಗೆ ತಿಳಿಸಿದರೆನ್ನಲಾಗಿದೆ. ಮೃತರ ಪತ್ನಿ ಶ್ರೀಮತಿ ರತ್ನಾವತಿಯವರು ಮಾ. 13 ರಂದು ತಮ್ಮ ಮಕ್ಕಳಾದ ನಯನ್ ಕುಮಾರ್, ಹೇಮಂತ್ ಮತ್ತು ಶರತ್ ಕುಮಾರ್ ರೊಂದಿಗೆ ತಮ್ಮ ತವರು ಮನೆ ಬೆಳ್ಳಿಪ್ಪಾಡಿಗೆ ತೆರಳಿದವರು ಅಲ್ಲೇ ಇದ್ದರು.

ಶಶೀಂದ್ರರು ಒಬ್ಬರೇ ಮನೆಯಲ್ಲಿದ್ದು, ಕುಡಿತದ ಚಟಕ್ಕೆ ಬಲಿಯಾಗಿದ್ದರೆನ್ನಲಾಗಿದೆ. ಆತ್ಮಹತ್ಯೆಯ ವಿಷಯ ಪತ್ನಿ ಮಕ್ಕಳಿಗೆ ತಿಳಿದು ತಾಯಿ, ಮಕ್ಕಳು ಬೊಣ್ಯಡ್ಕಕ್ಕೆ ಆಗಮಿಸಿದ್ದಾರೆ. ಮೃತರಿಗೆ 41 ವರ್ಷ ವಯಸ್ಸಾಗಿದ್ದು, ಪತ್ನಿ, ಮೂವರು ಮಕ್ಕಳು, ಇಬ್ಬರು ಸಹೋದರಿಯರಾದ ಅಪ್ಪಿ ಮತ್ತು ಅನಿತಾರನ್ನು ಅಗಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.