ಇಂದು ರಾತ್ರಿ ಚಂದ್ರಗ್ರಹಣ : ನಭೋ ಮಂಡಲದಲ್ಲಿ ಕೌತುಕ

Advt_Headding_Middle
Advt_Headding_Middle
Advt_Headding_Middle

 

2020 ರ ಅಪರೂಪದ ವಿದ್ಯಮಾನಕ್ಕೆ ನಾವು ಇಂದು ಸಾಕ್ಷಿಯಾಗುತ್ತಿದ್ದು, ವರ್ಷದ ಎರಡನೇ ಚಂದ್ರಗ್ರಹಣ ಇಂದು ರಾತ್ರಿ (ಜೂನ್ 5 ಹಾಗೂ 6) ಸಂಭವಿಸಲಿದ್ದು, ಈ ಬಾರಿಯದ್ದು ಸ್ಟ್ರಾಬೆರಿ ಚಂದ್ರಗ್ರಹಣವಾಗಿದೆ.


ಈ ವರ್ಷದ ಜನವರಿ ೧೦ರಂದು ಪ್ರಥಮ ಚಂದ್ರಗ್ರಹಣ ಸುಮಾರು ೪ಗಂಟೆ ಐದು ನಿಮಿಷಗಳ ಕಾಲ ಭಾರತದಲ್ಲಿ ಗೋಚರಿಸಿತ್ತು. ಇದೀಗ ಎರಡನೇ ಚಂದ್ರಗ್ರಹಣ ಜೂನ್ ೫ಮತ್ತು ೬ರ ರಾತ್ರಿ ಸಂಭವಿಸಲಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಈ ಬಾರಿಯ ಚಂದ್ರಗ್ರಹಣವನ್ನು Penumbral Eclipse ಎಂದು ಹೆಸರಿಸಲಾಗಿದ್ದು, ಇಂದು ಚಂದ್ರನ ಮೇಲ್ಮೈ ಶೇ.೭೫ರಷ್ಟು ಭಾಗವು ಭೂಮಿಯಿಂದ ಭಾಗಶಃ ಮುಚ್ಚಿರುವುದರಿಂದ ಅದರ ಹೊರಭಾಗದ ನೆರಳು ಮಾತ್ರ ಗೋಚರಿಸುತ್ತದೆ.

ಈ ನಿಟ್ಟಿನಲ್ಲಿ ಗ್ರಹಣ ಪೂರ್ಣಪ್ರಮಾಣದಲ್ಲಿ ಗೋಚರವಾಗದಿರಬಹುದು ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಇಂದಿನ ಖಗೋಳ ವಿಸ್ಮಯವು ಯುರೋಪ್, ಏಷ್ಯಾ, ಆಸ್ಟ್ರೇಲಿಯಾ, ಆಫ್ರಿಕಾ, ದಕ್ಷಿಣ ಅಮೆರಿಕ, ಫೆಸಿಫಿಕ್, ಅಟ್ಲಾಂಟಿಕ್, ಹಿಂದೂ ಮಹಾಸಾಗರ, ಅಂಟಾರ್ಟಿಕಾ ಭಾಗಗಳಲ್ಲಿ ಗೋಚರಿಸಲಿದೆ ಎಂದು ವಿಜ್ಞಾನಿಗಳು ಹೇಳಿದ್ದು, ಭಾರತದಾದ್ಯಂತ ಈ ಚಂದ್ರಗ್ರಹಣ ಗೋಚರಿಸಲಿದೆ. ಚಂದ್ರಗ್ರಹಣ ಇಂದು ರಾತ್ರಿ ೧೧.೧೫ಕ್ಕೆ ಆರಂಭವಾಗಲಿದ್ದು, ಜೂನ್ ೬ರಂದು ೧೨.೫೪ಕ್ಕೆ ಪೂರ್ಣ ಪ್ರಮಾಣದಲ್ಲಿ ಗ್ರಹಣ ಗೋಚರಿಸಲಿದ್ದು, ಜೂನ್ ೬ರ ಬೆಳಗ್ಗಿನ ಜಾವ ೨.೩೪ಕ್ಕೆ ಪೂರ್ಣಗೊಳ್ಳಲಿದೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.