HomePage_Banner
HomePage_Banner
HomePage_Banner
HomePage_Banner

ಮುರುಳ್ಯದ ಅಬ್ದುಲ್ ಲತೀಫ್ ಹತ್ಯೆ ಪ್ರಕರಣ : ಮುಲ್ಕಿಯಲ್ಲಿ ನಾಲ್ವರು ಆರೋಪಿಗಳ ಬಂಧನ

ಮೂಲ್ಕಿ ಜಂಕ್ಷನ್ ಸಮೀಪದ ಬ್ಯಾಂಕ್ ಮುಂಭಾಗ ನಿನ್ನೆ ಸಂಜೆ ಮೂಡಬಿದ್ರೆಯ ಜ್ಯುವೆಲ್ಲರಿ ಮಾಲಕ ಅಬ್ದುಲ್ ಲತೀಫ್ ಎಂಬುವವರನ್ನು ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ನಾಲ್ವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಬಂಧಿತರನ್ನು ಮುಲ್ಕಿ ಕಾರ್ನಾಡ್ ಬಪ್ಪನಾಡುವಿನ ಮೊಹಮ್ಮದ್ ಹಾಸಿಮ್(27), ಬಪ್ಪನಾಡುವಿನ ರಿಯಾಝ್(33), ಉಡುಪಿ ಉಚ್ಚಿಲದ ಅಬೂಬಕ್ಕರ್ ಸಿದ್ಧಿಕ್ (27), ಬಪ್ಪನಾಡುವಿನ ಮೊಹಮ್ಮದ್ ರಾಝಿಂ (24) ಎಂದು ಗುರುತಿಸಲಾಗಿದೆ.

ದರ್ಗಾ ರೋಡ್ ನಿವಾಸಿ ಮುನೀರ್ ಮೇಲೆ ಕಾರ್, ಬೈಕ್‍ಗಳಲ್ಲಿ ಬೆನ್ನಟ್ಟಿ ಬಂದಿದ್ದ 9 ಮಂದಿ ದುಷ್ಕರ್ಮಿಗಳು ಬ್ಯಾಂಕ್ ಮುಂಭಾಗ ದಾಳಿ ನಡೆಸಿದ್ದರು. ಆಗ ಮುನೀರ್ ಅವರ ಅಳಿಯ ಅಬ್ದುಲ್ ಲತೀಫ್ ತಡೆಯಲು ಬಂದ್ದಿದ್ದರಿಂದ ಅವರ ಮೇಲೂ ಹಾಗೂ ಮುನೀರ್ ಅವರ ಮಗ ಇಯಾಜ್ ಮೇಲೂ ಹಲ್ಲೆ ನಡೆಸಿ ತಂಡ ಪರಾರಿಯಾಗಿತ್ತು.
ಲತೀಫ್ ಅವರು ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯದಲ್ಲಿ ಸಾವನ್ನಪ್ಪಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.