HomePage_Banner
HomePage_Banner
HomePage_Banner
HomePage_Banner

ಸಂಪಾಜೆ ಕೋವಿಡ್ 19 ಕಾರ್ಯಪಡೆ ಸಭೆ

ಸಂಪಾಜೆ ಗ್ರಾಮದ ಕೋವಿಡ್ 19 ಕಾರ್ಯಪಡೆಯ ಸಭೆಯು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ರೀಮತಿ ಸುಂದರಿ ಮುಂಡಡ್ಕರವರ ಅಧ್ಯಕ್ಷತೆಯಲ್ಲಿ ನಡೆಯಿತು.

ಈ ಸಭೆಯಲ್ಲಿ ಹಲವು ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಲಾಯಿತು. ಗ್ರಾಮದ ಸ್ವಚ್ಛತೆ ನೈರ್ಮಲ್ಯೀಕರಣಕ್ಕೆ ವಿಶೇಷ ಗಮನ ಹರಿಸುವುದು ಕಸ ವಿಲೇವಾರಿ ವ್ಯವಸ್ಥೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲು ತೀರ್ಮಾನಿಸಲಾಯಿತು. ಪ್ರತಿ ಹದಿನೈದು ದಿನಕ್ಕೊಮ್ಮೆ ಗ್ರಾಮ ಪಂಚಾಯತ ಕಾರ್ಯದರ್ಶಿ ಆರೋಗ್ಯ ಸಹಾಯಕಿ ಆಶಾ ಕಾರ್ಯಕರ್ತೆ ಅಂಗನವಾಡಿ ಕಾರ್ಯಕರ್ತೆಯರ ಒಳಗೊಂಡ ವಿಶೇಷ ತಪಾಸಣೆ ತಂಡ ರಚಿಸಲಾಯಿತು. ಅವರಿಗೆ ಪ್ರತಿ ಹೋಟೆಲ್ ಉದ್ಯಮಕ್ಕೆ ತೆರಳಿ ಆಹಾರ ಪದಾರ್ಥಗಳ ಪರಿಶೀಲನೆ, ಸ್ವಚ್ಛತೆ ಪರಿಶೀಲನೆಗೆ ಸಂಪೂರ್ಣ ಅಧಿಕಾರ ನೀಡಲಾಯಿತು. ಹಾಗೂ ದಂಡನೆ ಹಾಕಲು ಅಧಿಕಾರ ನೀಡಲಾಯಿತು.
ಎರುಕಡುಪು ಬಟ್ಟೆಗೆ ಬಣ್ಣ ಹಾಕುವ ಕಾರ್ಖಾನೆಗೆ ಹೊರ ರಾಜ್ಯಗಳಿಂದ ಜನಗಳು ಬಂದು ಕೆಲಸ ಮಾಡುವ ಬಗ್ಗೆ ಮೌಖಿಕ ದೂರು ಬಂದ ಹಿನ್ನೆಲೆಯಲ್ಲಿ ಈ ಕಾರ್ಖಾನೆಯನ್ನು ಮೂರು ದಿನದೊಳಗೆ ಮುಚ್ಚಿಸಲು ಸೂಕ್ತ ಕ್ರಮ ಕೈಗೊಳ್ಳಲು ಕಾರ್ಯದರ್ಶಿಯವರಿಗೆ ಅಧಿಕಾರ ನೀಡಲಾಯಿತು. ಕೆಎಫ್ ಡಿಸಿ ಅವರು ನಿರುಪಯುಕ್ತ ಪ್ಲಾಸ್ಟಿಕ್ ಹಾಗೂ ಗೆರಟೆಗಳನ್ನು ವಿಲೇಗೊಳಿಸಿ ಸೊಳ್ಳೆಗಳು ಉತ್ಪತ್ತಿಯಾಗದಂತೆ ಸಾಂಕ್ರಾಮಿಕ ರೋಗ ತಡೆಗಟ್ಟಲು ಆಡಳಿತದೊಂದಿಗೆ ಸಹಕರಿಸುವಂತೆ ಪತ್ರ ನೀಡಲು ತೀರ್ಮಾನಿಸಲಾಯಿತು.
ಸಭೆಯಲ್ಲಿ ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ಮೋಹಿನಿ ಪೆಲ್ತಡ್ಕ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನಾಗರಾಜ್ ಎಸ್., ಕಾರ್ಯದರ್ಶಿ ವಿದ್ಯಾಧರ ಎಸ್., ಹಾಗೂ ಪಂಚಾಯತ್ ಸದಸ್ಯ ಸೋಮಶೇಖರ ಕೊಯಿಂಗಾಜೆ, ಜಿ ಕೆ ಹಮೀದ್, ನಾಗೇಶ್ ಪಿ.ಆರ್., ಲೆತಿಶ್ಯಾ ಡಿಸೋಜ, ಕಿರಿಯ ಮಹಿಳಾ ಸಹಾಯಕಿ ಶ್ರೀಮತಿ ಹಿಮಲೇಶ್ವರಿ, ಆಶಾ ಕಾರ್ಯಕರ್ತೆಯರು ಮತ್ತು ಅಂಗನವಾಡಿ ಕಾರ್ಯಕರ್ತರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.