Breaking News

ಕುಕ್ಕೆ ದೇವಸ್ಥಾನ ಪ್ರವೇಶಕ್ಕೆ ಬೆಳಿಗ್ಗೆ 8.30 ರಿಂದ ಸಂಜೆ 5.30 ರವರೆಗೆ ಮಾತ್ರ ಅವಕಾಶ

Advt_Headding_Middle
Advt_Headding_Middle

ಲಾಕ್‌ಡೌನ್ ಬಳಿಕ ಇದೀಗ ಆರಾಧನಾ ಕೇಂದ್ರಗಳನ್ನು ತೆರೆಯಲು ಸರಕಾರ ಅನುಮತಿ ನೀಡಿದ್ದು, ನಾಳೆಯಿಂದ ಕುಕ್ಕೆ ಸುಬ್ರಹ್ಮಣ್ಯ ಸೇರಿದಂತೆ ತಾಲೂಕಿನ ಎಲ್ಲಾ ದೇವಸ್ಥಾನಗಳು ಭಕ್ತಾದಿಗಳ ಪ್ರವೇಶಕ್ಕೆ ನಿಯಮಾವಳಿಗಳೊಂದಿಗೆ ಅನುಮತಿಯನ್ನು ನೀಡಲಾಗಿದೆ.


ಕುಕ್ಕೆ ದೇವಳದ ನಿಯಮಾವಳಿ :
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಆಗಮಿಸುವ ಎಲ್ಲಾ ಭಕ್ತಾದಿಗಳಿಗೆ ಬೆಳಿಗ್ಗೆ ಗಂಟೆ 8.30 ರಿಂದ ಸಂಜೆ ಗಂಟೆ 5.3೦ವರೆಗೆ ಮಾತ್ರ ಶ್ರೀ ದೇವರ ದರ್ಶನಕ್ಕೆ ಅವಕಾಶವಿದೆ.

ಜೂ. 3೦ರವರೆಗೆ ದೇವಳದ ವಸತಿ ಗೃಹದಲ್ಲಿ ತಂಗಲು ಅವಕಾಶವಿಲ್ಲ.

ದೇವಳದ ಮುಂಭಾಗದಲ್ಲಿ ಕಡ್ಡಾಯವಾಗಿ infrared thermometer ನಿಂದ ತಪಾಸಣೆ ಮಾಡಲಾಗುವುದು ಕೈಗಳಿಗೆ ಸ್ಯಾನಿಟೈಸರ್ ನೀಡಲಾಗುವುದು ಜ್ವರ ಕೆಮ್ಮು ಶೀತವಿರುವ ಭಕ್ತರಿಗೆ ಕಡ್ಡಾಯವಾಗಿ ದೇಗುಲದ ಒಳಗೆ ಪ್ರವೇಶವಿಲ್ಲ.

ವೇಶನಕ್ಕೆ ಸ್ವತಃ ಭಕ್ತರೆ ಶಲ್ಯ / ಶಾಲು ತಂದು ಮೇಲು ಹೊದ್ದು ದರ್ಶನ ಮಾಡುವುದು. ದೇವಳದ ಆಡಳಿತ ಮಂಡಳಿಯಿಂದ ಯಾವುದೇ ಶಲ್ಯ / ಶಾಲಿನ ವ್ಯವಸ್ಥೆ ಇರುವುದಿಲ್ಲ.

ದೇವಳದಲ್ಲಿ ಕೇವಲ ದರ್ಶನಕ್ಕೆ ಮಾತ್ರ ಅವಕಾಶವಿದೆ ಗಂಧ ತೀರ್ಥ ಮಂಗಳಾರತಿ ಪ್ರಸಾದ
ಹಾಗೂ ಅನ್ನ ಪ್ರಸಾದ ವಿನಿಯೋಗ ವಿರುವುದಿಲ್ಲ.

ದೇವಾಲಯದ ಒಳಗಡೆ ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು. ಗುರುತಿಸಿರುವ ಪ್ರದೇಶದಲ್ಲಿ ಮಾತ್ರ ನಿಲ್ಲುವ ಅವಕಾಶವಿದೆ. ದೇವಳದ ಗೋಡೆ ಕಂಬ ಇತ್ಯಾದಿಗಳನ್ನು ಭಕ್ತರು ಮುಟ್ಟುವಂತಿಲ್ಲ.

ದೇವಳದಲ್ಲಿ ಅಡ್ಡ ಬೀಳುವುದು ಹಾಗೂ ಕೂರುವುದಕ್ಕೆ ಅವಕಾಶವಿಲ್ಲ.

ಮಾಸ್ಕ್ ಧರಿಸದ ಭಕ್ತಾದಿಗಳಿಗೆ ಪ್ರವೇಶವಿಲ್ಲ.

ಪ್ರಸ್ತುತ ಕೋವಿಡ್ ಸನ್ನಿವೇಶವೂ ಸೂಕ್ಷ್ಮವಾಗಿರುವ ಹಿನ್ನೆಲೆ 65 ವರ್ಷ ದಾಟಿದವರು / 1೦ ವರ್ಷ ಗಳ ಒಳಗಿನ ಮಕ್ಕಳು ಗರ್ಭಿಣಿಯರು ಮುಂಜಾಗ್ರತಾ ಕ್ರಮವಾಗಿ ದೇವಾಲಯದ ಭೇಟಿಯನ್ನು ಮುಂದೂಡಲು ಕೋರಿದೆ .

ದೇವಳದ ಒಳಗೆ time slot ಗಳಲ್ಲಿ ಭಕ್ತಾದಿಗಳಿಗೆ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಟೋಕನ್ ವಿತರಿಸಿ ಸೂಕ್ತ ಕ್ರಮ ವಹಿಸಲಾಗುವುದು.

ದೇವಳದ ಕಲ್ಯಾಣಿ, ಸ್ನಾನಘಟ್ಟಗಳಲ್ಲಿ ಸ್ನಾನ ಮಾಡಲು ಅನುಮತಿ ಇರುವುದಿಲ್ಲ.

ಮೇಲಿನ ಎಲ್ಲಾ ಕ್ರಮಗಳನ್ನು ಪಾಲಿಸಿ ಕೋವಿಡ್ ಸೋಂಕು ಹರಡದಂತೆ ಕ್ರಮವಹಿಸಲು ಎಲ್ಲ ಭಕ್ತಾದಿಗಳು ದೇವರ ಜನಾಡಳಿತದ ಮಂಡಳಿಯೊಂದಿಗೆ ಸಹಕರಿಸಬೇಕೆಂದು ಆಡಳಿತಾಧಿಕಾರಿ ಹಾಗೂ ಅಪರ ಜಿಲ್ಲಾಧಿಕಾರಿಯವರಾದ ಶ್ರೀಮತಿ ರೂಪಾ ಎಂ.ಜೆ.ಸಾರ್ವಜನಿಕರಲ್ಲಿ ಮನವಿ ಮಾಡಿರುತ್ತಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.