Breaking News

ಡಿಸೆಂಬರ್ ಬಳಿಕವೇ ಶಾಲೆ ಆರಂಭಿಸಿ 3ನೇ ತರಗತಿವರೆಗೆ ತರಗತಿ ಬೇಡ ದೇವಚಳ್ಳ ಶಾಲಾ ಸಭೆಯಲ್ಲಿ ಪೋಷಕರ ಮನವಿ

Advt_Headding_Middle
Advt_Headding_Middle

 

ದೇವಚಳ್ಳ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪೋಷಕರ ಸಭೆಯು ಇಂದು ಶಾಲೆಯಲ್ಲಿ ನಡೆಯಿತು.
ಎಸ್‌‌.ಡಿ.ಎಂ.ಸಿ. ಅಧ್ಯಕ್ಷ ರಮಾನಂದ ಜಬಳೆ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಶಿಕ್ಷಕ ಶ್ರೀಧರ ಗೌಡ ಪ್ರಸ್ತಾವಿಕ ಮಾತನಾಡಿದರು.

Advertisement

ಕೊರೋನಾ ವೈರಸ್ ಹೆಚ್ಚಳವಾಗುತ್ತಿರುವ ಕಾರಣದಿಂದಾಗಿ ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ಪೋಷಕರು ಹಿಂದೇಟು ಹಾಕುತ್ತಿದ್ದು, ಡಿಸೆಂಬರ್ ಬಳಿಕವೇ ಶಾಲೆ ಪುನರಂಭಿಸಬೇಕು ಮತ್ತು ಸರಕಾರದ ಸುತ್ತೋಲೆ ವರದಿ 3 ರಂತೆ ದಿನ‌ ಬಿಟ್ಟು ದಿನ ತಗತಿಗಳನ್ನು ಸಾಮಾಜಿಕ ಅಂತರ ಕಾಯ್ದುಕೊಂಡು ಮಾಡಬೇಕು. ಹಾಗೂ ಈ ಶೈಕ್ಷಣಿಕ ವರ್ಷದಲ್ಲಿ 3ನೇ ತರಗತಿಯವರೆಗಿನ ಮಕ್ಕಳಿಗೆ ತರಗತಿಗಳು ನಡೆಸುವುದು ಬೇಡ ಎಂದು ಸಭೆಯಲ್ಲಿ ನಿರ್ಣಯಿಸಲಾಗಿದೆ.

ಒಂದು ವೇಳೆ ಸರಕಾರ ಒತ್ತಾಯದಲ್ಲಿ ಶೀಘ್ರದಲ್ಲಿ ತರಗತಿಗಳನ್ನು ಆರಂಭಿಸಿದರೂ ಮಕ್ಕಳನ್ನು‌ಶಾಲೆಗೆ ಕಳುಹಿಸುವುದಿಲ್ಲ ಎಂದೂ ಸಭೆಯಿಂದ ಕೇಳಿ ಬಂದಿದೆ.
ವೇದಿಕೆಯಲ್ಲಿ ಸಿ ಆರ್ ಪಿ ಸಂತೋಷ್ ಉಪಸ್ಥಿತರಿದ್ದರು. ಶಿಕ್ಷಕರು ಸಹಕರಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.