ರೋಟರಿ ವಿದ್ಯಾಸಂಸ್ಥೆಯಲ್ಲಿ ಪೋಷಕರ ಸಭೆ

Advt_Headding_Middle
Advt_Headding_Middle

ಈಗಿನ ಪರಿಸ್ಥಿತಿಯಲ್ಲಿ ಶಾಲಾರಂಭ ಬೇಡ : ಪೋಷಕರ ಸಲಹೆ

ಸುಳ್ಯ ರೋಟರಿ ವಿದ್ಯಾಸಂಸ್ಥೆಯಲ್ಲಿ ಶಾಲಾರಂಭದ ಬಗ್ಗೆ ಪೋಷಕರ ಅಭಿಪ್ರಾಯ ಪಡೆಯಲು ಮಕ್ಕಳ ಹೆತ್ತವರ ಸಭೆಯು ಇಂದು (ಜೂ.10ರಂದು) ನಡೆಯಿತು.
ಪ್ರಸಕ್ತ ಸನ್ನಿವೇಶದಲ್ಲಿ ಶಾಲೆಗಳನ್ನು ಆರಂಭಿಸುವುದು ಸರಿಯಲ್ಲ, ಪರಿಸ್ಥಿತಿ ಸಂಪೂರ್ಣ ಹತೋಟಿಗೆ ಬಂದು, ಎಲ್ಲವೂ ತಿಳಿಯಾದ ಮೇಲೆ ಶೈಕ್ಷಣಿಕ ವರ್ಷವನ್ನು ಆರಂಭಿಸಬೇಕು ಎಂಬ ಪೋಷಕರು ಸಲಹೆ ನೀಡಿದರು.

ಈ ಅಭಿಪ್ರಾಯವನ್ನು ಇಲಾಖೆಗೆ ತಿಳಿಸುವುದೆಂದು ತೀರ್ಮಾನಕ್ಕೆ ಬರಲಾಯಿತು.ಸಾಮಾಜಿಕ ಜಾಲ ತಾಣಗಳ ಮೂಲಕ ಶಾಲಾ ಶಿಕ್ಷಕರು ತಮ್ಮ ತಮ್ಮ ತರಗತಿಗಳ ವಿದ್ಯಾರ್ಥಿಗಳೊಂದಿಗೆ ಸಂವಹನ, ಸಂಪರ್ಕ ಇಟ್ಟುಕೊಳ್ಳುವುದೆಂದು ಅಭಿಮತಕ್ಕೆ ಬರಲಾಯಿತು.
ತರಗತಿಗಳಿಗೆ ಅನುಗುಣವಾಗಿ. ಸಾಮಾಜಿಕ ಅಂತರವನ್ನು ಕಾಪಾಡುವುದಕ್ಕೋಸ್ಕರ, ನರ್ಸರಿ ತರಗತಿಯಿಂದ 3 ರವರೆಗೆ, 4 ರಿಂದ 7 ನೆ ತರಗತಿವರೆಗೆ ಹಾಗೂ 8 ರಿಂದ 10 ನೆ ತರಗತಿವರೆಗಿನ ವಿದ್ಯಾರ್ಥಿಗಳ ಹೆತ್ತವರ ಸಭೆಗಳನ್ನು ಬೇರೆ ಬೇರೆಯಾಗಿ ನಡೆಸಲಾಯಿತು.
ಎಲ್ಲರಿಗೂ ಸಾನಿಟೈಸೆರ್ ವ್ಯವಸ್ಥೆ ಮಾಡಲಾಗಿತ್ತು.ಶಾಲಾ ಸಂಚಾಲಕ ರೊ. ಜಿತೇಂದ್ರ ಎನ್ ಎ, ಆಡಳಿತ ಮಂಡಳಿ ಸದಸ್ಯರಾದ ರೊ. ಗಿರಿಜಾಶಂಕರ ತುದಿಯಡ್ಕ, ರೊ. ಆನಂದ ಖಂಡಿಗ, ಪ್ರಾಂಶುಪಾಲೆ ಶ್ರೀಮತಿ ಶೋಭಾ ಬೊಮ್ಮೆಟ್ಟಿ, ಹೈಸ್ಕೂಲ್ ಮುಖ್ಯ ಶಿಕ್ಷಕಿ ಶ್ರೀಮತಿ ಜಯಲಕ್ಷ್ಮಿ ಕೆ. ವಿ., ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ಅಚ್ಯುತ ಅಟ್ಲುರು, ಪೂರ್ವ ಸಂಚಾಲಕ ರೊ. ಬಾಪು ಸಾಹೇಬ್ ಎಸ್.ಎಂ.ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಅತಿ ಹೆಚ್ಚಿನ ಸಂಖ್ಯೆಯಲ್ಲಿ ಪೋಷಕರು ಪಾಲ್ಗೊಂಡಿದ್ದು, ಸಾಮಾಜಿಕ ಅಂತರವನ್ನು ಕಾಯ್ದುಕೊಂಡು, ಸೂಕ್ತ ಸುರಕ್ಷಾ ವ್ಯವಸ್ಥೆಗಳೊಂದಿಗೆ ಸಭೆ ನಡೆಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.