ಬೆಳ್ಳಿಪ್ಪಾಡಿ ರಸ್ತೆ ಮಣ್ಣು ತೆಗೆಯಲು ಊರವರ ಒತ್ತಾಯ ಜಿಲ್ಲಾಧಿಕಾರಿ ಅನುಮತಿ ಇಲ್ಲದೆ ರಸ್ತೆ ತೆರವು ಸಾಧ್ಯವಿಲ್ಲ : ಅಧಿಕಾರಿಗಳ ಸ್ಪಷ್ಟನೆ

Advt_Headding_Middle
Advt_Headding_Middle

ಕೊರೊನಾ ಸಂದರ್ಭದಲ್ಲಿ ಅಂತರಾಜ್ಯ ರಸ್ತೆ ಮುಚ್ಚುವ ಸಂದರ್ಭದಲ್ಲಿ ಬೆಳ್ಳಿಪ್ಪಾಡಿ, ದೇಲಂಪಾಡಿ ಮೊದಲಾದೆಡೆ ಹೋಗುವ ರಸ್ತೆ ಬೆಳ್ಳಿಪ್ಪಾಡಿ ಎಂಬಲ್ಲಿ ಮುಚ್ಚಿದ್ದು ಅದನ್ನು ತೆರವು ಮಾಡುವಂತೆ ಊರವರು ಒತ್ತಾಯಿಸಿದ ಹಾಗೂ ಸ್ಥಳಕ್ಕೆ ಬಂದ ಅಧಿಕಾರಿಗಳು ಜಿಲ್ಲಾಧಿಕಾರಿ ಆದೇಶ ವಿಲ್ಲದೆ ರಸ್ತೆ ಮಣ್ಣು ತೆರವು ಸಾಧ್ಯವಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.

ಕೊರೊನಾ ಸಂದರ್ಭದಲ್ಲಿ ಮಂಡೆಕೋಲು ಪಂಚಾಯತ್ ವತಿಯಿಂದ ಕೇರಳ ಸಂಪರ್ಕದ ಬೆಳ್ಳಿಪ್ಪಾಡಿ ರಸ್ತೆಯನ್ನು ಮುಚ್ಚಲಾಗಿತ್ತು.

ಆ ಭಾಗದವರ ವ್ಯವಹಾರ ಎಲ್ಲವೂ ಸುಳ್ಯ, ಜಾಲ್ಸೂರು ಭಾಗದಲ್ಲಿತ್ತು.ಆದರೆ ಕೊರೊನಾ ಸಂದರ್ಭ ಸರಕಾರದ ಆದೇಶದಂತೆ ರಸ್ತೆ ಮುಚ್ಚಲಾಗಿತ್ತು. ಇದೀಗ ರಸ್ತೆಗೆ ಹಾಕಲಾಗಿರುವ ಮಣ್ಣು ತೆಗೆದು ಸಂಚಾರ ಮುಕ್ತ ಮಾಡಬೇಕೆಂದು ಆ ಭಾಗದವರು ಕೇಳಿದ್ದರಲ್ಲದೆ ಅವರ ಪರವಾಗಿ ಸ್ಥಳ ವೀಕ್ಷಣೆ ಗೆ ಇಂದು ಕಾಸರಗೋಡು ಜಿಲ್ಲಾ ಬಿಜೆಪಿ ಅಧ್ಯಕ್ಷ ಶ್ರೀಕಾಂತ್ ಬಂದಿದ್ದರು. ಜನ ಸೇರಿದರು.

ವಿಷಯ ತಿಳಿದು ಸುಳ್ಯ ತಹಶೀಲ್ದಾರ್ ಅನಂತಶಂಕರ್, ಎಸ್.ಐ. ಹರೀಶ್, ಮಂಡೆಕೋಲು ಪಿ.ಡಿ.ಒ. ಜಯಕುಮಾರ್, ತಾ.ಪಂ. ಅಧ್ಯಕ್ಷ ಚನಿಯ ಕಲ್ತಡ್ಕ, ಗ್ರಾ.ಪಂ.ಸದಸ್ಯ ಬಾಲಚಂದ್ರ ದೇವರಗುಂಡ, ಪ್ರಮುಖರಾದ ಸುರೇಶ್ ಕಣೆಮರಡ್ಕ, ಸುಬೋದ್ ಶೆಟ್ಟಿ, ಶಿವಪ್ರಸಾದ್ ಉಗ್ರಾಣಿಮನೆ, ಉದಯಕುಮಾರ್ ಆಚಾರ್ ಮೊದಲಾದವರಿದ್ದರು. ದೀರ್ಘ ಮಾತುಕತೆ ನಡೆದು ಜಿಲ್ಲಾಧಿಕಾರಿ ಆದೇಶ ಇಲ್ಲದೆ ಏನು ಮಾಡಲು ಸಾಧ್ಯವಿಲ್ಲ ಎಂದು ತಹಶೀಲ್ದಾರ್, ಎಸ್.ಐ. ಹೇಳಿದರೆ, ಮಣ್ಣು ತೆಗೆದು ಚೆಕ್ ಪೋಸ್ಟ್ ಮಾಡಿ ಎಂದು ಆ ಭಾಗದವರು ಮನವಿ ಮುಂದಿಟ್ಟರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.