ಭರದಿಂದ ಸಾಗುತ್ತಿರುವ ಮಾರ್ಪಡ್ಕ ಸೇತುವೆ ಕಾಮಗಾರಿ

Advt_Headding_Middle
Advt_Headding_Middle

 

*ಜಿ.ಪಂ.ನ ಐವತ್ತು ಲಕ್ಷ ಅನುದಾನದಲ್ಲಿ ನಿರ್ಮಾಣಗೊಳುತ್ತಿರುವ ಸೇತುವೆ ಕಾಮಗಾರಿ*

*ಸಂಪೂರ್ಣ ಕಾಮಗಾರಿಗೆ ಹೆಚ್ಚಿನ ಅನುದಾನ ಒದಗಿಸಿಕೊಡುವ ಭರವಸೆ ನೀಡಿರುವ ಶಾಸಕ.ಕೆ.ಜಿ. ಭೋಪಯ್ಯ*

ಕೊಡಗು ಜಿಲ್ಲೆಯ ಚೆಂಬು ಗ್ರಾಮದ ಮಾರ್ಪಡ್ಕ ಊರುಬೈಲು ದಬ್ಬಡ್ಕದ ಮೂಲಕ ದ.ಕ. ಜಿಲ್ಲೆಯ ತೊಡಿಕಾನ ಸಂಪರ್ಕ ರಸ್ತೆಯ ಮಾರ್ಪಡ್ಕ ಸೇತುವೆ ನಿರ್ಮಾಣ ಕಾಮಗಾರಿಯು ಕೊರೊನಾ ಲಾಕ್ ಡೌನ್ ಮಧ್ಯೆಯೂ ಭರದಿಂದ ಸಾಗುತ್ತಿದೆ.


ಕಳೆದ ಎರಡು ವರ್ಷಗಳ ಹಿಂದೆ ಕೊಡಗಿನಲ್ಲಿ ಸಂಭವಿಸಿದ ಭೀಕರ ಜಲಪ್ರಳಯದಿಂದಾಗಿ ಮಾರ್ಪಡ್ಕ ಸೇತುವೆಯು ನೀರಿನ ಸೆಳೆತಕ್ಕೆ ಕೊಚ್ಚಿಕೊಂಡು ಹೋಗಿತ್ತು.


ಕೊಡಗು ಜಿಲ್ಲೆಯಾದರೂ ತಮ್ಮ ದಿನನಿತ್ಯದ ವಸ್ತುಗಳಿಗಾಗಿ ದ.ಕ. ಜಿಲ್ಲೆಯ ಕಲ್ಲುಗುಂಡಿಯನ್ನೇ ನೆಚ್ಚಿಕೊಂಡಿದ್ದ ಊರುಬೈಲು ಗ್ರಾಮಸ್ಥರು ಕೇವಲ ಒಂದು ಕಿ.ಮೀ ದೂರದ ದಾರಿಯಾದ ಮಾರ್ಪಡ್ಕ ಸೇತುವೆ ಇಲ್ಲದ ಕಾರಣದಿಂದಾಗಿ ಕಲ್ಲುಗುಂಡಿ ಬರಬೇಕಾದರೆ ಬಾಲೆಂಬಿ ಮೂಲಕ ಸುಮಾರು ಆರು ಕಿ.ಮೀ. ದೂರ ಸುತ್ತುವರಿದು ಬರಬೇಕಾದ ಅನಿವಾರ್ಯ ಪರಿಸ್ಥಿತಿ ನಿರ್ಮಾಣಗೊಂಡಿತ್ತು.
ಕಳೆದ ನಾಲ್ಕು ತಿಂಗಳ ಹಿಂದೆ ಕೊಡಗು ಜಿಲ್ಲಾ ಪಂಚಾಯತಿ ವತಿಯಿಂದ ಸೇತುವೆ ನಿರ್ಮಾಣ ಕಾಮಗಾರಿಗಾಗಿ ಐವತ್ತು ಲಕ್ಷ ರೂ. ಅನುದಾನ ಬಿಡುಗಡೆಯಾಗಿದ್ದು, ಗುತ್ತಿಗೆದಾರ ಯತೀಶ್ ಅವರ ನೇತೃತ್ವದಲ್ಲಿ ಕಳೆದ ಫೆಬ್ರವರಿ 12ರಿಂದ ಸೇತುವೆ ನಿರ್ಮಾಣ ಕಾಮಗಾರಿ ಆರಂಭಗೊಂಡಿದೆ. ಆದರೆ ಈ ವೇಳೆ ಬಂದ ಕೊರೊನಾ ಮಹಾಮಾರಿಯಿಂದಾಗಿ ಲಾಕ್ ಡೌನ್ ಆದ ಕಾರಣದಿಂದಾಗಿ ಕಾಮಗಾರಿಗೆ ಸ್ವಲ್ಪ ಪ್ರಮಾಣದ ಅಡಚಣೆಗಳಾದರೂ ಇದೀಗ ಕೆಲಸ ಭರದಿಂದ ಸಾಗುತ್ತಿದೆ.
ಕೊಡಗು ಜಿಲ್ಲಾ ಪಂಚಾಯತ್ ವತಿಯಿಂದ ಐವತ್ತು ಲಕ್ಷ ಅನುದಾನದಲ್ಲಿ ಕಾಮಗಾರಿ ನಡೆಯುತ್ತಿದೆ. ಆದರೆ ಜಿ.ಪಂ.‌ನಿಂದ ಬಿಡುಗಡೆಯಾದ ಐವತ್ತು ಲಕ್ಷ ರೂ. ಅನುದಾನ ಸಾಲುತ್ತಿಲ್ಲ. ಸೇತುವೆಯ ಸಂಪೂರ್ಣ ಕಾಮಗಾರಿ ಮುಗಿಸಲು ಇನ್ನೂ ಐವತ್ತು ಲಕ್ಷ ರೂ. ಅನುದಾನ ಬೇಕಾಗಿದ್ದು, ಗುತ್ತಿಗೆದಾರ ಯತೀಶ್, ಪಯಸ್ವಿನಿ ಸೊಸೈಟಿ ಅಧ್ಯಕ್ಷ ಎನ್.ಸಿ. ಅನಂತ ಹಾಗೂ ಚೆಂಬು ಗ್ರಾಮ ಪಂಚಾಯತಿ ಸದಸ್ಯ ಎನ್.ಸಿ. ಮನೋಹರ ಅವರ ನೇತೃತ್ವದಲ್ಲಿ ಊರುಬೈಲು ಗ್ರಾಮಸ್ಥರು ಸೇರಿ ವಿರಾಜಪೇಟೆ ಶಾಸಕ ಕೆ.ಜಿ. ಭೋಪಯ್ಯ ಅವರಲ್ಲಿ ಐವತ್ತು ಲಕ್ಷ ಅನುದಾನ ನೀಡುವಂತೆ ಮನವಿ ಮಾಡಿದ್ದು, ಶಾಸಕರು ಅನುದಾನ ಒದಗಿಸುವ ಭರವಸೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಇದೀಗ ಸೇತುವೆ ನಿರ್ಮಾಣದ ಕಾಮಗಾರಿಯು ಅಂತಿಮ ಹಂತಕ್ಕೆ ಬಂದಿದ್ದು, ಮುಂದಿನ ಒಂದು ತಿಂಗಳಲ್ಲಿ ಸಂಚಾರಕ್ಕೆ ಮುಕ್ತವಾಗಲಿದೆ ಎಂದು ಗುತ್ತಿಗೆದಾರ ಯತೀಶ್ ಅವರು ಸುದ್ದಿಗೆ ತಿಳಿಸಿದ್ದಾರೆ.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.