Breaking News

ಸುಣ್ಣಮೂಲೆ ಹಾಗೂ ಜಾಲ್ಸೂರಿನಲ್ಲಿ ರಸ್ತೆಬದಿ ಇಟ್ಟಿದ್ದ ಖಾಲಿ ಗ್ಯಾಸ್ ಸಿಲಿಂಡರ್ ಕಳವು

Advt_Headding_Middle
Advt_Headding_Middle

Advertisement

ರಸ್ತೆಬದಿ ಇರಿಸಿದ್ದ ಎರಡು ಖಾಲಿ ಗ್ಯಾಸ್ ಸಿಲಿಂಡರ್‌ಗಳು ಕಳವಾದ ಘಟನೆ ಸುಣ್ಣಮೂಲೆ ಹಾಗೂ ಜಾಲ್ಸೂರಿನಲ್ಲಿ ಜೂ. 8 ರಂದು ಮದ್ಯಾಹ್ನ ಸಂಭವಿಸಿದೆ.
ಗ್ಯಾಸ್ ಸಿಲಿಂಡರ್‌ನ ವಾಹನ ತಿಂಗಳಲ್ಲಿ ಲೈನ್ ಬರುವ ದಿನವಾದ ಜೂ.೮ ರಂದು ಬೆಳಿಗ್ಗೆ ಜಾಲ್ಸೂರಿನ ಕುರಿಯ ನಿವಾಸಿಯಾದ ಮಹಮ್ಮದ್ ಹುಸೈನ್ ಅವರು ತಮ್ಮ ಮನೆಯ ಖಾಲಿಯಾದ ಗ್ಯಾಸ್ ಸಿಲಿಂಡರ್‌ನ್ನು ಬೆಳಿಗ್ಗೆ ೧೦.೦೦ ಗಂಟೆಗೆ ಮುಖ್ಯ ರಸ್ತೆಯ ಬದಿಯಲ್ಲಿ ಇರಿಸಿ ಹೋಗಿದ್ದರು. ಹೀಗೆಯೇ ಸುಣ್ಣಮೂಲೆಯ ರೋಹಿತ್ ಬುಡ್ಲೆಗುತ್ತು ಅವರೂ ಕೂಡ ಬೆಳಿಗ್ಗೆ ೧೧.೩೦ ಕ್ಕೆ ತಮ್ಮ ಮನೆಯ ಪಕ್ಕದ ಮುಖ್ಯ ರಸ್ತೆಯ ಬದಿಯಲ್ಲಿ ಖಾಲಿ ಗ್ಯಾಸ್ ಸಿಲಿಂಡರ್ ಇರಿಸಿದ್ದರು.

ಸುಣ್ಣಮೂಲೆಯ ರೋಹಿತ್ ಬುಡ್ಲೆಗುತ್ತು ಅವರ ತಾಯಿ ರೋಹಿಣಿ ಬುಡ್ಲೆಗುತ್ತು ಅವರು ಗ್ಯಾಸ್ ಸಿಲಿಂಡರ್ ಬಳಿಯೇ ನಿಂತಿದ್ದು, ಮನೆಗೆ ಹೋಗಿ ಬರುವ 10ನಿಮಿಷದಲ್ಲಿ ರಸ್ತೆ ಬದಿ ಇರಿಸಿದ್ದ ಗ್ಯಾಸ್ ಸಿಲಿಂಡರ್ ನಾಪತ್ತೆಯಾಗಿತ್ತು. ಇದೇ ಸಮಯಕ್ಕೆ ಸುಣ್ಣಮೂಲೆಯಿಂದ ಮುಂದೆ ಜಾಲ್ಸೂರಿನ ಕುರಿಯದಲ್ಲಿ ಇರಿಸಿದ್ದ ಮಹಮ್ಮದ್ ಹುಸೈನ್ ಅವರ ಗ್ಯಾಸ್ ಸಿಲಿಂಡರ್ ಕೂಡ ನಾಪತ್ತೆಯಾಗಿತ್ತು.
ಈ ಬಗ್ಗೆ ಎರಡೂ ಮನೆಯವರು ಸೇರಿ ಅಂದೇ ಅಪರಾಹ್ನ ಸುಳ್ಯ ಪೊಲೀಸ್ ಠಾಣೆಗೆ ತೆರಳಿ ಸಿಲಿಂಡರ್ ಕಳವಾಗಿರುವ ಬಗ್ಗೆ ದೂರು ದಾಖಲಿಸುವಂತೆ ಮನವಿ ಮಾಡಿದಾಗ ಪೊಲೀಸರು ದೂರು ಬರೆದುಕೊಡುವಂತೆ ಹೇಳಿದ್ದರೆನ್ನಲಾಗಿದೆ. ಮರುದಿನ ಎರಡೂ ಮನೆಯವರು ಸೇರಿ ದೂರು ಬರೆದು ಪೊಲೀಸ್ ಠಾಣೆಗೆ ತೆರಳಿದಾಗ ಅಲ್ಲಿದ್ದ ಪೊಲೀಸರು ದೂರು ಸ್ವೀಕರಿಸದೇ ಅರ್ಧಗಂಟೆ ಬಿಟ್ಟು ಬರುವಂತೆ ಹೇಳಿದರೆನ್ನಲಾಗಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.