ಜೂ. 21 ರಿಂದ ಬೆಳ್ಳಾರೆ ಹೋಲಿ ಕ್ರಾಸ್ ಚರ್ಚ್ ನಲ್ಲಿ ಪ್ರಾರ್ಥನೆಗೆ ಅವಕಾಶ

Advt_Headding_Middle
Advt_Headding_Middle

ಬೆಳ್ಳಾರೆಯ ಹೋಲಿ ಕ್ರಾಸ್ ಚರ್ಚ್ ನಲ್ಲಿ ಸುಮಾರು 2 ತಿಂಗಳಿಂದ ಕೊರೊನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಸರಕಾರದ ನಿಯಮದಂತೆ ಪ್ರಾರ್ಥನೆಗೆ ಅವಕಾಶ ಇರಲಿಲ್ಲ.

ಜೂ.14 ರಂದು ಚರ್ಚ್ ನಲ್ಲಿ ಸಮಿತಿಯ ಮೀಟಿಂಗ್ ನಡೆದಿದ್ದು ಜೂ.21 ರಿಂದ ಚರ್ಚ್ ನಲ್ಲಿ ಪ್ರಾರ್ಥನೆಗೆ ಅವಕಾಶ ನೀಡುವುದಾಗಿ ನಿರ್ಣಯಿಸಲಾಯಿತು.

ಸರಕಾರದ ನಿಬಂಧನೆಗಳನ್ನು ಪಾಲಿಸಿಕೊಂಡು ಜನರಿಗೆ ಚರ್ಚ್ ನ ಒಳಗೆ ಬರಲು ಅವಕಾಶ ನೀಡುವುದಾಗಿ ನಿರ್ಣಯಿಸಲಸಗಿದೆ.

ಚರ್ಚ್ ನಲ್ಲಿ ಎರಡು ವಾಳೆ ಅಥವಾ ವಾರ್ಡ್ ಗಳಿದ್ದು
ಜನರಿಗೆ ಅನುಕೂಲವಾಗಲು ಬೆಳಿಗ್ಗೆ ,8.30 ಮತ್ತು 10.00 ಗಂಟೆಗೆ ಎರಡು ಪೂಜೆಗಳನ್ನು ಇಡಲಾಗಿದೆ.


ಒಂದೊಂದು ಹಾಲ್ ನಲ್ಲಿ 30 ಜನರಿಗೆ ಕುಳಿತುಕೊಳ್ಳಲು ಅವಕಾಶ ನೀಡಲಾಗಿದೆ.
ಸಾಮಾಜಿಕ ಅಂತರ ಕಾಯ್ದುಕೊಂಡು ಕುಳಿತುಕೊಳ್ಳಬೇಕು.
ಮುಖಕ್ಕೆ ಮಾಸ್ಕ್ ಕಡ್ಡಾಯ ಹಾಕಿಕೊಂಡು ಬರಬೇಕು.
ಕೈಕಾಲು ತೊಳೆದುಕೊಳ್ಳಲು ನೀರಿನ ವ್ಯವಸ್ಥೆ,ಸ್ಯಾನಿಟೈಸರ್,ಹ್ಯಾಂಡ್ ವಾಶ್ ವ್ಯವಸ್ಥೆ ,ಮತ್ತು ಟೆಂಪರೇಚರ್ ಪರೀಕ್ಷೆಗೆ ಕೂಡ ವ್ಯವಸ್ಥೆ ಮಾಡಲಾಗುವುದು.
ಜನರು ತುಂಬಾ ಕಡಿಮೆ ಬರುತ್ತಾರೆ.


ಬರುವವರಿಗೆ ತೊಂದರೆಯಾಗದಂತೆ ಪ್ರಾರ್ಥನೆಗೆ ವ್ಯವಸ್ಥೆ ಮಾಡಲಾಗುವುದು ಎಂದು ಚರ್ಚ್ ನ ಧರ್ಮಗುರು ಪೌಲ್ ಡಿ ಸೋಜಾ ರವರು ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.