ಮಂಡೆಕೋಲು : ಗ್ರಾಮ ವಿಕಾಸ ಸಮಿತಿ ವತಿಯಿಂದ ಸಸಿ ವಿತರಣೆ

Advt_Headding_Middle
Advt_Headding_Middle

ಗ್ರಾಮ ವಿಕಾಸ ಸಮಿತಿ ಮಂಡೆಕೋಲು ಅರಣ್ಯ ಇಲಾಖೆ ಮತ್ತು ಗ್ರಾಮದ ವಿವಿಧ ಸಂಘಟನೆಗಳ ವತಿಯಿಂದ ಸಸಿ ನೆಡುವುದು ಮತ್ತು ವಿತರಣಾ ಕಾರ್ಯಕ್ರಮ ನಡೆಯಿತು. ಗ್ರಾಮ ವಿಕಾಸ ಸಮಿತಿಯ ಅಧ್ಯಕ್ಷ ಉದಯ ಆಚಾರ್ ಸ್ವಾಗತಿಸಿದರು. ಉಪ ವಲಯ ಅರಣ್ಯಾಧಿಕಾರಿ ಯಶೋಧರ ಮತ್ತು ಮಂಡೆಕೋಲು ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷ ಶ್ರೀಧರ ಕಣೆಮರಡ್ಕ ಸಸಿನೆಡುವುದರ ಮೂಲಕ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಗ್ರಾಮ ವಿಕಾಸ ಸಮಿತಿಯ ಸಂಯೋಜಕಿ ಸಾವಿತ್ರಿ ಕಣೆಮರಡ್ಕ ಅತಿಥಿಗಳನ್ನು ಪರಿಚಯಿಸಿದರು. ಮಂಡೆಕೋಲು ಶಾಲೆಯ ಎಸ್.ಡಿ.ಎಂ ಸಿ ಉಪಾಧ್ಯಕ್ಷೆ ಲತಾ ಕೋರನ್, ‌ ಸದಸ್ಯರಾದ ಧನಂಜಯ ಕಣೆಮರಡ್ಕ ಉಪಸ್ಥಿತರಿದ್ದರು. ಅರಣ್ಯ ಪಾಲಕರಾದ ಡೀವಿಶ್, ಅರಣ್ಯ ಸಮಿತಿಯ ಪದಾಧಿಕಾರಿಗಳು, ತತ್ವಮಸಿ ಕನ್‌ಸ್ಟ್ರಕ್ಷನ್ ಕಣೆಮರಡ್ಕ , ಅಮರ ಸಂಘಟನಾ ಸಮಿತಿ ಸುಳ್ಯ ತಾಲೂಕು, ಯುವ ಬ್ರಿಗೇಡ್ ಸುಳ್ಯ , ಗ್ರಾಮ ವಿಕಾಸ ಸಮಿತಿಯ ಕಾರ್ಯದರ್ಶಿ ಲಕ್ಷ್ಮಣ ಉಗ್ರಾಣಿ ಮನೆ ಸದಸ್ಯರುಗಳಾದ ಯೋಗೀಶ್ ಪಂಜಿಕಲ್ಲು ದಿನೇಶ್ ಅಕ್ಕಪ್ಪಾಡಿ, ಕುಮಾರ್ ಮಾವಂಜಿ, ಧನುಷ್ ಮುರೂರು, ತುಳಸಿನಿ ದೇವರ ಗುಂಡ, ಸಂಧ್ಯಾ ಮಾವಂಜಿ, ಸರೋಜಿನಿ ಮಾವಂಜಿ, ಧನಂಜಯ ಉಗ್ರಾಣಿಮನೆ, ಜನಾರ್ಧನ ಕನ್ಯಾನ, ಭಾಗೀರಥಿ ಮಾವಂಜಿ ಉಪಸ್ಥಿತರಿದ್ದರು. ಸುಮಾರು 150 ಜನ ಸದಸ್ಯರುಗಳು ಗ್ರಾಮದ ಹಲವು ಶಾಲೆಗಳಲ್ಲಿ ಹಣ್ಣಿನ ಗಿಡಗಳನ್ನು ಹಾಗೂ ಅರಣ್ಯದಲ್ಲಿ ಸುಮಾರು 700 ವಿವಿಧ ಜಾತಿಯ ಹಣ್ಣಿನ ಗಿಡಗಳನ್ನು ನೆಡೆಲಾಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.