ಪಾಲೆಪ್ಪಾಡಿ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಅಷ್ಟಬಂಧ ಬ್ರಹ್ಮಕಲಶಾಭಿಷೇಕ

Advt_Headding_Middle
Advt_Headding_Middle

 

ಐವರ್ನಾಡು ಗ್ರಾಮದ ಪಾಲೆಪ್ಪಾಡಿಯ ದೇವರಗುಡ್ಡದ ಮೇಲೆ ವಿರಾಜಿಸುತ್ತಿರುವ ಶ್ರೀ ಗೋಪಾಲಕೃಷ್ಣ ಸನ್ನಿಧಿಯಲ್ಲಿ ಜೂ.13 ರ ಸಂಜೆಯಿಂದ ಜೂ.15 ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಶ್ರೀ ದೇವರ ಅಷ್ಟಬಂಧ ಬ್ರಹ್ಮಕಲಶಾಭಿಷೇಕ ನಡೆಯಿತು.


ಕೊರೊನಾದಿಂದ ಸರಕಾರದ ನಿಯಮಗಳ ಪಾಲನೆಯೊಂದಿಗೆ ಕಾರ್ಯಕ್ರಮವು ಅತ್ಯಂತ ವೈಭವದಿಂದ ನಡೆಯಿತು.


ಜೂ.15 ರಂದು ಬೆಳಿಗ್ಗೆ ಮಹಾಗಣಪತಿ ಹೋಮ,ಮಹಾವಿಷ್ಣು ಯಾಗ,ನಾಂದಿ ಪುಣ್ಯಾಹ ನಡೆಯಿತು.


ನಂತರ ಬೆಳಿಗ್ಗೆ ಗಂಟೆ 8.18 ರಿಂದ ಶ್ರೀ ಗೋಪಾಲಕೃಷ್ಣ ದೇವರಿಗೆ ಅಷ್ಟಬಂಧ ಲೇಪನ,ಪರಿಕಲಶಾಭಿಷೇಕ,ಬ್ರಹ್ಮಕಲಶಾಭಿಷೇಕ ನಡೆಯಿತು.

 


ಮಧ್ಯಾಹ್ನ ಶ್ರೀ ದೇವರಿಗೆ ಮಹಾಪೂಜೆ,ವೈದಿಕ ಮಂತ್ರಾಕ್ಷತೆ,ಪ್ರಸಾದ ವಿತರಣೆ ಬಳಿಕ ಅನ್ನಸಂತರ್ಪಣೆ ನಡೆಯಿತು.
ರಾತ್ರಿ ಗಂಟೆ 7.00 ರಿಂದ ರಂಗಪೂಜೆ ನಡೆಯಲಿದೆ.


ಬಳಿಕ ಪ್ರಸಾದ ವಿತರಣೆ ನಡೆಯಲಿದೆ.

ಬ್ರಹ್ಮಕಲಶಾಭಿಷೇಕ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಪ್ರಮುಖರಾದ ಡಾ.ಬಾಲಸುಬ್ರಹ್ಮಣ್ಯ ಭಟ್ ಮತ್ತು ಮನೆಯವರು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.