ಸುಳ್ಯ ಗಾಂಧಿನಗರದಲ್ಲಿ ಪಟೇಲ್ ಕ್ಲಿನಿಕಲ್ ಲ್ಯಾಬೋರೇಟರಿ ಉದ್ಘಾಟನೆ

Advt_Headding_Middle
Advt_Headding_Middle

 

ಸುಳ್ಯ ಗಾಂಧಿನಗರ ಮುನೀರ್ ಕಾಂಪ್ಲೆಕ್ಸ್ ನಲ್ಲಿ ಹಲವಾರು ವರ್ಷಗಳಿಂದ ದುಬೈಯಲ್ಲಿ ಮೆಡಿಕಲ್ ಮತ್ತು ಲ್ಯಾಬೋರೇಟರಿ ಉದ್ಯಮ ನಡೆಸುತ್ತಿದ್ದ ಬದ್ರುದ್ದೀನ್ ಪಟೇಲ್ ಮತ್ತು ಡಿಸಿಸಿ ಬ್ಯಾಂಕ್ ನಿವೃತ್ತ ವ್ಯವಸ್ಥಾಪಕ ಹಾಜಿ ಐ ಇಸ್ಮಾಯಿಲ್ ಮಾಲಕತ್ವದ ಪಟೇಲ್ ಕ್ಲಿನಿಕಲ್ ಲ್ಯಾಬೋರೇಟರಿ ಜೂ.15 ರಂದು ಶುಭಾರಂಭಗೊಂಡಿತು. ಇದರ ಉದ್ಘಾಟನೆಯನ್ನು ಸುಳ್ಯ ಹಿರಿಯ ವೈದ್ಯ ಚೆನ್ನಕೇಶವ ದೇವಸ್ಥಾನ ದ ಆಡಳಿತ ಮೊಕ್ತೇಸರರಾದ ಡಾ. ಹರಪ್ರಸಾದ್ ತುದಿಯಡ್ಕ ನೆರವೇರಿಸಿದರು.ವರ್ತಕರ ಸಂಘದ ಅಧ್ಯಕ್ಷರಾದ ಪಿ.ಬಿ ಸುಧಾಕರ ರೈ ಅಧ್ಯಕ್ಷತೆ ವಹಿಸಿದ್ದರು.

 ಕರ್ನಾಟಕ ರಾಜ್ಯ ಕೆಪೆಕ್ ಮಂಡಳಿ ಮಾಜಿ ನಿರ್ದೇಶಕ ಹಾಜಿ ಪಿ.ಎ ಮಹಮ್ಮದ್, ಹಾಜಿ ಅಹಮದ್ ಪಟೇಲ್ ಆರಂತೋಡು,ಹಾಜಿ ಅಬ್ದುಲ್ ಖಾದರ್ ಪಟೇಲ್, ಕಟ್ಟಡ ಮಾಲಕ ಹಾಜಿ ಕೆ.ಎಂ.ಮಹಮ್ಮದ್ ಮಹಮ್ಮದೀಯ ಸ್ಟೋರ್, ನ.ಪಂ. ಸದಸ್ಯ ರಿಯಾಜ್ ಕಟ್ಟೆಕ್ಕಾರ್ ಮೊದಲಾದವರು ಉಪಸ್ಥಿತರಿದ್ದರು.

ಸಂಸ್ಥೆಯ ಪಾಲುದಾರರಾದ ಹಾಜಿ ಐ ಇಸ್ಮಾಯಿಲ್ ಹಾಗೂ ಬದ್ರುದ್ದೀನ್ ಪಟೇಲ್ ಆಗಮಿಸಿದವರನ್ನು ಸ್ವಾಗತಿಸಿ,

ಲ್ಯಾಬೋರೇಟರಿ ಬಗ್ಗೆ ಮಾಹಿತಿ ನೀಡಿದರು.ಕಾರ್ಯಕ್ರಮದಲ್ಲಿ ಹಸೈನಾರ್ ಜಯನಗರ ಸ್ವಾಗತಿಸಿ, ಶರೀಫ್ ಜಟ್ಟಿಪಳ್ಳ ವಂದಿಸಿದರು..

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.