ಕಲ್ಮಡ್ಕ : ಮರದಿಂದ ಬಿದ್ದು ಯುವಕ ಮೃತ್ಯು

Advt_Headding_Middle
Advt_Headding_Middle

 

ಕಲ್ಮಡ್ಕ ಗ್ರಾಮದ ಶೆಟ್ಟಿಗದ್ದೆ ಎಂಬಲ್ಲಿ ಯುವಕರೊಬ್ಬರು ಮರದಿಂದ ಬಿದ್ದು ಮೃತಪಟ್ಟ ಘಟನೆ ವರದಿಯಾಗಿದೆ.
ಶೆಟ್ಟಿಗದ್ದೆಯ ಜಿನ್ನಪ್ಪ ಗೌಡ ಎಂಬವರ ಪುತ್ರ ಸುರೇಶ (30 ವರ್ಷ) ಎಂಬವರು ತೆಂಗಿನಮರಕ್ಕೆ ಸೊಪ್ಪು ಮಾಡಲೆಂದು ತಮ್ಮದೇ ಜಾಗದಲ್ಲಿರುವ ಮರಕ್ಕೆ ಹತ್ತಿ ಸೊಪ್ಪು ಕಡಿಯುತ್ತಿದ್ದಾಗ ಅಕಸ್ಮಾತ್ ಕಾಲು ಜಾರಿ ಕೆಳಕ್ಕೆ ಬಿದ್ದರು.

ಕೂಡಲೇ ಅವರನ್ನು ಅಲ್ಲಿಯೇ ಇದ್ದ ಕೃಷ್ಣಪ್ಪ ಗೌಡರ ಕಾರಿನಲ್ಲಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಬದುಕಿಸಲಾಗಲಿಲ್ಲ. ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತಿದೆ. ಅವಿವಾಹಿತರಾಗಿದ್ದ ಇವರು ತಂದೆ, ತಾಯಿ, ಇಬ್ಬರು ಸಹೋದರರನ್ನು ಅಗಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.