ದುಗಲಡ್ಕ; ಅಕ್ರಮ ಗೋ ಸಾಗಾಟಗಾರರಿಗೆ ಯುವಕರಿಂದ ಥಳಿತ, ವಾಹನ ಮತ್ತು ಸಾಗಾಟಗಾರರು ಪೋಲಿಸ್ ವಶ

Advt_Headding_Middle
Advt_Headding_Middle

ಸುಳ್ಯದಿಂದ ಪಿಕಪ್ ವಾಹನದಲ್ಲಿ ಗೋವುಗಳನ್ನು ತೆಗೆದುಕೊಂಡು ಹೋಗುತ್ತಿದ್ದವರನ್ನು ತಡೆದು ಅವರನ್ನು ಥಳಿಸಿದ ಘಟನೆ ಇಂದು ಸಂಜೆ ದುಗಲಡ್ಕದಲ್ಲಿ ನಡೆದಿದೆ.


ಸುಳ್ಯದ ನಾವೂರು ಎಂಬಲ್ಲಿಂದ ಎರಡು ದನ ಹಾಗೂ ಒಂದು ಹೋರಿಯನ್ನು ಪಿಕಪ್ ವಾಹನದಲ್ಲಿ ದುಗಲಡ್ಕ ಮಾರ್ಗವಾಗಿ ಕಡಬಕ್ಕೆ ಅಕ್ರಮವಾಗಿ ಸಾಗಿಸುತ್ತಿದ್ದರು.ವಿಷಯ ತಿಳಿದು ದುಗಲಡ್ಕದಲ್ಲಿ ಯುವಕರು ವಾಹನವನ್ನು ತಡೆದು ಪಿಕಪ್ ನಲ್ಲಿದ್ದ ಮೂವರಿಗೆ ಥಳಿಸಿದರೆನ್ನಲಾಗಿದೆ. ಈ ಸಂದರ್ಭದಲ್ಲಿ ಸ್ಥಳಕ್ಕೆ ಸುಳ್ಯ ಪೋಲಿಸರು ಆಗಮಿಸಿದರು.ಬಳಿಕ ದನ ಸಹಿತ ಪಿಕಪ್ ವಾಹನ ಮತ್ತು ದನ ಸಾಗಿಸುತ್ತಿದ್ದ ಮೂವರನ್ನು ವಶಕ್ಕೆ ಪಡೆದುಠಾಣೆಗೆ ಕರೆದುಕೊಂಡು ಹೋದರೆಂದು ತಿಳಿದುಬಂದಿದೆ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.