ವಲಸೆ ಕಾರ್ಮಿಕರಿಗೆ ಊಟ ಪ್ರಾಯೋಜಕತ್ವದ ಸಂಘಟಕರ ಸ್ನೇಹ ಸಮ್ಮಿಲನ

Advt_Headding_Middle
Advt_Headding_Middle

ಲಾಕ್ಡೌನ್ ಸಮಯದ ಪ್ರಾರಂಭದ ಹಂತದಲ್ಲಿ ಸುಳ್ಯದಲ್ಲಿ ಸುಮಾರು 800ಕ್ಕೂ ಹೆಚ್ಚು ಅಸಂಘಟಿತ ಕೂಲಿಕಾರ್ಮಿಕರಿಗೆ ನಿರಂತರ 35 ದಿನಗಳ ಕಾಲ ದಾನಿಗಳ ಸಹಕಾರ ಪಡೆದು ಭೋಜನವನ್ನು ತಯಾರಿಸಿ ಮನೆ ಮನೆಗೆ ತಲುಪಿಸಿ ಸಹಕಾರಿಯಾಗಿದ್ದ ಎಂಬಿ ಫೌಂಡೇಶನ್ ಸುಳ್ಯ ಮತ್ತು ಕಾರ್ಮಿಕರ ಸಂಘ ಸಿಐಟಿಯು ಮುಖಂಡರುಗಳ ಸ್ನೇಹ ಸಮ್ಮಿಲನ ಕಾರ್ಯಕ್ರಮ ಪರಿವಾರಕಾನ ಉಡುಪಿ ಗಾರ್ಡನ್ ರೆಸ್ಟೋರೆಂಟ್ ನಲ್ಲಿ ಜೂನ್ 14ರಂದು ನಡೆಯಿತು.


ಕಾರ್ಯಕ್ರಮದಲ್ಲಿ ಮುಂದಿನ ದಿನಗಳಲ್ಲಿ ತುರ್ತುಪರಿಸ್ಥಿತಿ ನಿರ್ಮಾಣವಾದಲ್ಲಿ ಸಮಾಜಮುಖಿ ಕಾರ್ಯಕ್ರಮಗಳನ್ನು ರೂಪಿಸಿ ಸಂಕಷ್ಟದಲ್ಲಿರುವವರಿಗೆ ಸಹಾಯ ಹಸ್ತವನ್ನು ನೀಡುವ ಕುರಿತು ಚರ್ಚೆ ನಡೆಯಿತು. ಈ ಸಂದರ್ಭದಲ್ಲಿ ಕಾರ್ಯಕ್ರಮದ ಆಯೋಜಕರು ಎಂ ಬಿ ಫೌಂಡೇಶನ್ ಅಧ್ಯಕ್ಷ ಎಂ ಬಿ ಸದಾಶಿವ ಸುಳ್ಯ ತಾಲೂಕು ಕಟ್ಟಡದ ಕಾರ್ಮಿಕ ಸಂಘದ ಅಧ್ಯಕ್ಷ ಎಚ್ ಕೆ ನಾಗರಾಜ್ ಮೇಸ್ತ್ರಿ ಜಯನಗರ, ಉಪಾಧ್ಯಕ್ಷ ಮಂಜುನಾಥ್ ಬಳ್ಳಾರಿ ,ಕೋಶಾಧಿಕಾರಿ ಬಿಜು ಅಗಸ್ಟಿನ್, ಶಿಲ್ಪಾಚಾರ್ಯ, ಉಸ್ಮಾನ್ ಜಯನಗರ , ವೆಂಕಟೇಶ್ ನಾರ್ವಿ, ನ.ಪಂ ಸದಸ್ಯ ಶರೀಫ್ ಕಂಠಿ ಮೊದಲಾದವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.