ಕುಲ್ಕುಂದ ಶ್ರೀ ಬಸವೇಶ್ವರ ದೇವಸ್ಥಾನದ ಆರ್ಥಿಕ ಸಂಕಷ್ಟಕ್ಕೆ ಕೈ ಜೋಡಿಸಿದ ಬಸವೇಶ್ವರ ಭಜನಾ ಮಂಡಳಿ

Advt_Headding_Middle
Advt_Headding_Middle

 

ಕುಲ್ಕುಂದ ಶ್ರೀ ಬಸವೇಶ್ವರ ಭಜನಾ ಮಂಡಳಿಯ ವತಿಯಿಂದ ಕುಲ್ಕುಂದ ಶ್ರೀ ಬಸವೇಶ್ವರ ದೇವಸ್ಥಾನಕ್ಕೆ ೪.೬೫ ಲಕ್ಷ ರೂ. ನೀಡಲಾಯಿತು.


ಜೂ.೧೫ ರಂದು ದೇವಸ್ಥಾನದ ಒಳಾಂಗಣ ಮೇಲ್ಛಾವಣಿ ನಿರ್ಮಾಣದ ಪ್ರಯುಕ್ತ 2,55,೦೦೦ವನ್ನು ಶ್ರೀ ಬಸವೇಶ್ವರ ಭಜನಾ ಮಂಡಳಿಯ ಸದಸ್ಯರು ನೀಡಿದ್ದಾರೆ. ಊರಿನ ಸ್ನೇಹಿತರೊಂದಿಗೆ ನಡೆಸುತ್ತಿದ್ದ ಚಿಟ್ ಫಂಡ್ ನಲ್ಲಿ ಒಂದು ಹೆಸರನ್ನು ತಮ್ಮ ಹಣದಿಂದಲೇ ಶ್ರೀ ಬಸವೇಶ್ವರ ದೇವಸ್ಥಾನದ ಅಭಿವೃದ್ಧಿಗಾಗಿ ಮೀಸಲಿಡುತ್ತಿದ್ದ ಇವರು ಚಿಟ್ ಫಂಡ್ ನಲ್ಲಿ ಉಳಿಕೆಯಾದ ಹಣವನ್ನು ದೇವರಿಗೆ ಸಮರ್ಪಿಸಿದ್ದರು.

ಈ ಹಿಂದೆ ಜೀರ್ಣೋದ್ಧಾರ ವೇಳೆ ಗಣಪತಿ ಗುಡಿಯ ನಿರ್ಮಾಣಕ್ಕೆ ೪ ಲಕ್ಷ ಕ್ಕೂ ಮಿಕ್ಕಿ ಹಣ ನೀಡಿದ್ದರು. ಅಲ್ಲದೆ ಇತ್ತೀಚೆಗೆ ನಗರ ಭಜನೆ ಮುಖಾಂತರ ಹಣ ಸಂಗ್ರಹಿಸಿ ಆರ್ಥಿಕ ಸಂಕಷ್ಟ ಭರಿಸುವ ಸಲುವಾಗಿ ೪.೬೫ ಲಕ್ಷ ಹಣ ನೀಡಿದ್ದರು.
ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಗಿರಿಧರ ಸ್ಕಂದ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಮನೋಹರ ನಾಳ, ಕಾರ್ಯದರ್ಶಿ ಶಿವರಾಮ ಪಳ್ಳಿಗದ್ದೆ, ಗಿರೀಶ್ ಆಚಾರ್ಯ, ಶೀನಪ್ಪ ಮೇಸ್ರ್ತಿ, ನಾಗೇಶ್ ಕುದುರೆಮಜಲು, ಚಂದ್ರಶೇಖರ ಬಸವನಮೂಲೆ, ಗುಡ್ಡಪ್ಪ ಗೌಡ ಬೀಡಿನಗದ್ದೆ, ಬೆಳ್ಯಪ್ಪ ಪಳ್ಳಿಗದ್ದೆ, ರವಿ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.