Breaking News

ಜೂ.30 ರಂದು ಆಲೆಟ್ಟಿ ಸೊಸೈಟಿ ಪ್ರ.ದರ್ಜೆ ಸಹಾಯಕ ಪೂವಯ್ಯ ಗೌಡ ಕುಂಚಡ್ಕ ನಿವೃತ್ತಿ

Advt_Headding_Middle
Advt_Headding_Middle

 

ಆಲೆಟ್ಟಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಸುಮಾರು 36 ವರ್ಷಗಳಿಂದ ಸೇವೆ ಸಲ್ಲಿಸಿ ಜೂ.30 ರಂದು ವೃತ್ತಿಯಿಂದ ನಿವೃತ್ತಿಯಾಗಲಿದ್ದಾರೆ.

1984 ನೇ ಇಸವಿಯಲ್ಲಿ ಕೇಂದ್ರ ಕಛೇರಿಗೆ ಜವಾನ ಹುದ್ದೆಗೆ ಸೇರ್ಪಡೆಯಾಗಿ 1994 ರ ತನಕ ಆಲೆಟ್ಟಿ ಕೇಂದ್ರ ಕಛೇರಿಯಲ್ಲಿ ಮಾರಾಟ ಸಹಾಯಕ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸಿರುತ್ತಾರೆ . ನಂತರ 1994 ರಿಂದ 2014 ರವರೆಗೆ ಕೋಲ್ಚಾರು ಶಾಖೆಯಲ್ಲಿ ಹಾಗೂ ಬಳಿಕ ಅರಂಬೂರು ಶಾಖೆಯಲ್ಲಿ ಸೇವೆ ಸಲ್ಲಿಸಿದ್ದು ಪ್ರಸ್ತುತ ಕೇಂದ್ರ ಕಛೇರಿಯಲ್ಲಿ ಪ್ರಥಮ ದರ್ಜೆ ಸಹಾಯಕ ಹುದ್ದೆಯಲ್ಲಿ ಕಳೆದ 8 ವರ್ಷಗಳಿಂದ ಸೇವೆ ಸಲ್ಲಿಸಿರುತ್ತಾರೆ. ಇವರು ಕುಂಚಡ್ಕ ಮನೆತನದ ದಿ.ಜನಾರ್ಧನ ಗೌಡ ಮತ್ತು ಶ್ರೀಮತಿ ಪೂವಮ್ಮ ಬಿಲ್ಲರಮಜಲು ದಂಪತಿಗಳ ಪುತ್ರರಾಗಿರುತ್ತಾರೆ. ಪತ್ನಿ ಶ್ರೀಮತಿ ಭಾಗೀರಥಿಯವರೊಂದಿಗೆ ಬಿಲ್ಲರಮಜಲು ಎಂಬಲ್ಲಿ ಪ್ರಸ್ತುತ ವಾಸವಾಗಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.