ದುಗಲಡ್ಕ ಅಕ್ರಮ ಗೋ ಸಾಗಾಟ ಮತ್ತು ಹಲ್ಲೆ ಪ್ರಕರಣ

Advt_Headding_Middle
Advt_Headding_Middle

*ಕೇಸಿಗೊಳಗಾದ ಐವರಿಗೆ ಮಧ್ಯಂತರ ಜಾಮೀನು*

ಸುಳ್ಯ ದ ನಾವೂರು ಎಂಬಲ್ಲಿಂದ ಪಿಕಪ್ ವಾಹನದಲ್ಲಿ ಅಕ್ರಮವಾಗಿ ಗೋವುಗಳನ್ನು ಸಾಗಿಸುತ್ತಿದ್ದವರ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಕೇಸಿಗೊಳಗಾಗಿದ್ದ ಐವರಿಗೆ ಕೋರ್ಟ್ ಜಾಮೀನು ನೀಡಿದೆ.

ನಾವೂರು ಎಂಬಲ್ಲಿಂದ ಪಿಕಪ್ ವಾಹನದಲ್ಲಿ ಅಕ್ರಮವಾಗಿ ಗೋವುಗಳನ್ನು ಕಡಬಕ್ಕೆ ಸಾಗಿಸುತ್ತಿದ್ದವರನ್ನು ದುಗಲಡ್ಕದಲ್ಲಿ ತಡೆದ ಯುವಕರ ತಂಡ ಮೂವರ ಮೇಲೆ ಹಲ್ಲೆ ನಡೆಸಿತ್ತು. ಬಳಿಕ ಪೋಲಿಸರು ಆಗಮಿಸಿ ಸಾಗಾಟಗಾರರನ್ನು ಮತ್ತು ಸಾಗಾಟದ ವಾಹನವನ್ನು ವಶ ಪಡಿಸಿಕೊಂಡು ಅವರ ಮೇಲೂ ಕೇಸು ದಾಖಲಿಸಿದ್ದರು.ಅವರಿಗೆ ನಿನ್ನೆ ಜಾಮೀನು ದೊರೆತ್ತಿದ್ದು, ಹಲ್ಲೆ ನಡೆಸಿದ ಘಟನೆಗೆ ಸಂಬಂಧಿಸಿ ದೇವನಾಥ,ಧನಂಜಯ,ಶಿವ,ದೇವರಾಜ್ ಮತ್ತು ಗಂಗಾಧರ ಎಂಬ ಐವರ ಮೇಲೆ ಕೇಸು ದಾಖಲಾಗಿತ್ತು. ಅವರನ್ನು ನಿನ್ನೆ ರಾತ್ರಿ ಬಂಧಿಸಿ ಇಂದು ಪುತ್ತೂರು ಕೋರ್ಟ್ ಗೆ ಹಾಜರು ಪಡಿಸಲಾಗಿದ್ದು ಅವರಿಗೆ ಕೋರ್ಟ್ ಮಧ್ಯಂತರ ಜಾಮೀನು ನೀಡಿರುವುದಾಗಿ ತಿಳಿದುಬಂದಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.