Breaking News

ಅರಂಬೂರು ಸೇತುವೆ ಸಂಪರ್ಕ ಕಾಮಗಾರಿ -ಗುತ್ತಿಗೆದಾರರಿಂದ ಶೀಘ್ರ ಗತಿಯಲ್ಲಿ ಪೂರ್ಣಗೊಳಿಸುವ ಭರವಸೆ

Advt_Headding_Middle
Advt_Headding_Middle

 

ಅರಂಬೂರು ಸೇತುವೆ ಕಾಮಗಾರಿಯ ಗುತ್ತಿಗೆದಾರ ಕುಂದಾಪುರ ದ ರಾಜೇಶ್ ಕಾರಂತ್ ಹಾಗೂ ಇಂಜಿನಿಯರ್ ಸಣ್ಣೇಗೌಡ ರವರು ಜೂ.17 ರಂದು ಕಾಮಗಾರಿ ಕೆಲಸ ನಡೆಯುವ ಸ್ಥಳಕ್ಕೆ ಭೇಟಿ ನೀಡಿದರು.

ಈ ಸಂದರ್ಭ ಸೇತುವೆ ನಿರ್ಮಾಣ ಸಮಿತಿ ಅಧ್ಯಕ್ಷ ಉದಯ ಕುಮಾರ್ ಅರಂಬೂರು ,ಕಾರ್ಯದರ್ಶಿ ತೀರ್ಥರಾಮ ನೆಡ್ಚಿಲು ,ಮತ್ತು ಸ್ಥಳದಾನಿಗಳು ಹಾಗೂ ಊರವರು ಸೇತುವೆ ನಿರ್ಮಾಣಕ್ಕೆ 4 ವರ್ಷ ತಗೊಂಡು ಇನ್ನೂ ಪೂರ್ತಿ ಮಾಡಿಕೊಟ್ಟಿಲ್ಲ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು .

ಇದಕ್ಕೆ ಧ್ವನಿಗೂಡಿಸಿದ ಇಂಜಿನಿಯರ್ ಸಣ್ಣಯ್ಯ ಗೌಡರು ಊರಿನ ಜನರಿಗೆ ಅನುಕೂಲವಾಗುವಂತೆ ಬೇಗನೆ ಕಾಮಗಾರಿ ಪೂರ್ಣಗೊಳಿಸಿ ಸಂಪರ್ಕ ಕಲ್ಪಿಸಿ ಕೊಡಬೇಕೆಂದು ಸೂಚಿಸಿದರು .

ಸ್ಪಂದಿಸಿದ ಗುತ್ತಿಗೆದಾರ ರಾಜೇಶ್ ಕಾರಂತ್ ಇನ್ನೆರಡು ದಿವಸಗಳಲ್ಲಿ ಕೆಲಸ ಪ್ರಾರಂಭ ಮಾಡಿ ಶೀಘ್ರವಾಗಿ ಪೂರ್ಣಗೊಳಿಸಿಕೊಡುತ್ತೇನೆ ಎಂದು ಭರವಸೆ ನೀಡಿರುತ್ತಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.