ಸುಳ್ಯ ಸಂತ ಜೋಸೆಫ್ ಆಂಗ್ಲ ಮಾಧ್ಯಮ ಶಾಲಾ ಪೋಷಕರ ಸಭೆ ರೂ. 30 ಲಕ್ಷದಷ್ಟು ಶುಲ್ಕ ವಿನಾಯಿತಿ ಘೋಷಿಸಿದ ಆಡಳಿತ ಮಂಡಳಿ

Advt_Headding_Middle
Advt_Headding_Middle

 

ಸುಳ್ಯದ ಸಂತ ಜೋಸೆಫ್ ಆಂಗ್ಲ ಮಾಧ್ಯಮ ಪೋಷಕರ ಸಭೆಯನ್ನು ಮೂರು ವಿಭಾಗಗಳಾಗಿ ವಿಂಗಡಿಸಿ ಸಂಚಾಲಕರ ಅಧ್ಯಕ್ಷತೆಯಲ್ಲಿ ಆಯೋಜಿಸಲಾಯಿತು.

ವಿದ್ಯಾ ಇಲಾಖೆಯ ಸುತ್ತೋಲೆಯಂತೆ ಶಾಲಾ ಪುನರಾರಂಭದ ಬಗ್ಗೆ ಸೂಚಿಸಿದ ದಿನಾಂಕಗಳಿಗೆ ಅಭಿಪ್ರಾಯ ಸಂಗ್ರಹಿಸಲಾಯಿತು. ಮಕ್ಕಳ ಆರೋಗ್ಯದ ಹಿತಾದೃಷ್ಟಿಯಿಂದ ಕೊರೋನ ವೈರಸ್ ಸಂಪೂರ್ಣ ನಿರ್ಮೂಲನವಾದರೆ, ಪರಿಸ್ಥಿತಿಯನ್ನು ಅವಲೋಕಿಸಿ ಸಪ್ಟೆಂಬರ್ ಬಳಿಕ ಶಾಲಾ ಪುನರಾರಂಭದ ಬಗ್ಗೆ ಆಲೋಚಿಸುವುದು ಉತ್ತಮ. ಶಾಲೆ ಪುನರಾರಂಭಗೊಂಡರೆ ಇಲಾಖೆ ಸೂಚಿಸಿದ ಮೂರನೇ ಮಾದರಿಯಾದ ತರಗತಿಗಳನ್ನು ಎರಡು ವಿಭಾಗವಾಗಿ ವಿಂಗಡಿಸಿ ದಿನ ಬಿಟ್ಟು ದಿನ ಶಾಲೆಯನ್ನು ನಡೆಸುವಂತೆ ಅಭಿಪ್ರಾಯ ಒಪ್ಪಿಕೊಳ್ಳಲಾಯಿತು.


ಬೋಧನಾ ವಿಷಯಗಳನ್ನು ಕಡಿತಗೊಳಿಸಬೇಕು, ಮಕ್ಕಳ ಸುರಕ್ಷತೆಯ ಬಗ್ಗೆ ಥರ್ಮಲ್ ಸ್ಕ್ಯಾನಿಂಗ್, ಸ್ಫ್ಯಾನಿಟೈಜೇಶನ್, ಸಾಮಾಜಿಕ ಅಂತರ, ಮಾಸ್ಕ್ ಧರಿಸುವುದು, ಟಾಯ್ಲೆಟ್ ಹಾಗು ತರಗತಿಗಳನ್ನು ಸ್ವಚ್ಛತೆ ಕಾಪಾಡುವುದು ಇತ್ಯಾದಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದಾಗಿ ಒಪ್ಪಿಕೊಳ್ಳಲಾಯಿತು. 

ಇದೆ ಸಭೆಯಲ್ಲಿ ಶಾಲಾ ಶುಲ್ಕದ ಬಗ್ಗೆಯೂ ವಿವರಣೆ ನೀಡಲಾಯಿತು. ಮಕ್ಕಳ ಸುರಕ್ಷತೆಯಷ್ಟೇ ಶಿಕ್ಷಕ-ಗುರುವಿನ ಬಗ್ಗೆಯೂ ಕಾಳಜಿ ವಹಿಸುವುದು ತಮ್ಮ ಕರ್ತವ್ಯವಾಗಿದೆ. ಆದುದರಿಂದ ಪಾಠ – ಬೋಧನೆ ಇಲ್ಲದ ಮೂರು ತಿಂಗಳ ಅವಧಿಯ ಬೋಧನಾ ಶುಲ್ಕದ 50% ದಷ್ಟು ಪಾವತಿಸಿ ಶಿಕ್ಷಕರಿಗೆ ಕನಿಷ್ಠ 50% ವೇತನ ನೀಡಲು ಸಹಕರಿಸುವುದಾಗಿ ಪೋಷಕರು ಸಮ್ಮತಿಯನ್ನು ಸೂಚಿಸಿದರು . ಈ ರೀತಿ ಕೊರೋನ ಸಂಕಷ್ಟದ ಅವಧಿಯಲ್ಲಿ ಯು.ಕೆ.ಜಿ.ಯಿಂದ ಹತ್ತನೇ ತರಗತಿಯವರೆಗೆ ಅಧ್ಯಾಪನಾ ಶುಲ್ಕದಲ್ಲಿ ಸುಮಾರು ರು. 23ಲಕ್ಷ ಹಾಗು ಇತರೆ ಶುಲ್ಕಗಳಾದ ಸ್ಮಾರ್ಟ್ ಕ್ಲಾಸ್, ಕಂಪ್ಯೂಟರ್ ಕ್ಲಾಸ್, ಸ್ಕೂಲ್ ಆಚರಣೆ ಇತ್ಯಾದಿಗಳಿಗೆ ರು. 9 ಲಕ್ಷದಷ್ಟು ಒಟ್ಟು 1370 ಮಕ್ಕಳಿಗೆ ಶುಲ್ಕ ವಿನಾಯಿತಿ ನೀಡಲಾಗುವುದು ಎಂದು ಸಂಚಾಲಕರು ಆಡಳಿತ ಮಂಡಳಿಯ ಪರವಾಗಿ ಘೋಷಿಸಿದರು.
ವೇದಿಕೆಯಲ್ಲಿ ಮಕ್ಕಳ ಸುರಕ್ಷತಾ ಸಮಿತಿಯ ಅಧ್ಯಕ್ಷರಾದ ರಾಜೇಶ್ ಎಲಿಮಲೆ ಇವರು ಸಂದರ್ಭಯೋಚಿತವಾಗಿ ಮಾತನಾಡಿದರು. ಸಂತ ಬ್ರಿಜಿಡ್ ಚರ್ಚ್ ಪಾಲನಾ ಉಪಾಧ್ಯಕ್ಷರಾದ ಪ್ರಸನ್ನ ಪೀಟರ್ ಡಿ’ ಸೋಜ ಶಾಲಾ ಮುಖ್ಯೋಪಾಧ್ಯಾಯಿನೀ ಸಿಸ್ಟರ್ ಬಿನೋಮ, ಪಿ.ಟಿ.ಏ ಅಧ್ಯಕ್ಷರಾದ ಶ್ರೀ ಕಲಂದರ್ ಎಲಿಮಲೆ, ಶಿಕ್ಷಕರ ಕಾರ್ಯದರ್ಶಿ ಶ್ರೀಮತಿ ಕಲಾವತಿ ಹಾಗು ಶ್ರೀಮತಿ ರೇಷ್ಮಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸುಮಾರು 750 ಪೋಷಕರು ಹಾಜರಿದ್ದರು. ಶಿಕ್ಷಕಿಯರಾದ ಶ್ರೀಮತಿ ವಿದ್ಯಾಶ್ರೀ ಮತ್ತು ಶ್ರೀಮತಿ ದೇವಿಲತಾ ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.