ಕನ್ನಡಿತೋಡು ಗಡಿಪ್ರದೇಶಕ್ಕೆ ಬಾರದ ಬಸ್ಸು- ಆತಂಕಕ್ಕೀಡಾದ ವಿದ್ಯಾರ್ಥಿಗಳು, ಸ್ಪಂದಿಸಿದ ಪಂಚಾಯತ್ ಸದಸ್ಯ ಸುದರ್ಶನ ಪಾತಿಕಲ್ಲು

Advt_Headding_Middle
Advt_Headding_Middle

 

ಬಂದಡ್ಕ ಭಾಗದಿಂದ ವಿದ್ಯಾಭ್ಯಾಸಕ್ಕಾಗಿ ಸುಳ್ಯ ವನ್ನು ಅವಲಂಬಿಸಿರುವ ಪಿ.ಯು.ಸಿ.ವಿದ್ಯಾರ್ಥಿ ಗಳು ಜೂ.18 ರಂದು ನಡೆಯಲಿರುವ ಪರೀಕ್ಷೆಗೆ ಹಾಜರಾಬೇಕಾಗಿದ್ದು ಬಸ್ಸಿಗಾಗಿ ಕಾದು ಆತಂಕಕ್ಕೀಡಾದ ಘಟನೆ ವರದಿಯಾಗಿದೆ.

ಬಂದಡ್ಕದಿಂದ  7 ಮಂದಿ ವಿದ್ಯಾರ್ಥಿಗಳು ಪಿ.ಯು. ಸಿ. ಪರೀಕ್ಷೆ ಬರೆಯಲು ಸುಳ್ಯಕ್ಕೆ ಹೋಗಬೇಕಾಗಿತ್ತು. ಅದಕ್ಕಾಗಿ ಗಡಿಪ್ರದೇಶವಾದ ಕನ್ನಡಿತೋಡು ಎಂಬಲ್ಲಿಗೆ ಬಸ್ಸು ವ್ಯವಸ್ಥೆ ಇದೆಯೆಂದು ತಿಳಿದು ಬೆಳಗ್ಗೆ ಕಾಯುತ್ತಿದ್ದರು.ಪರೀಕ್ಷಾ ಕೇಂದ್ರಕ್ಕೆ ಹಾಜರಾಗಲು ತಾಲೂಕು ಆಡಳಿತವು ಗಡಿಪ್ರದೇಶವಾದ ಕಲ್ಲಪಳ್ಳಿ ಬಡ್ಡಡ್ಕ ಮಾರ್ಗವಾಗಿ ಕೋಲ್ಚಾರು ಬಂದಡ್ಕ ಮಧ್ಯೆ ಕನ್ನಡಿತೋಡುವರೆಗೆ ಬಸ್ಸಿನ ವ್ಯವಸ್ಥೆ ಮಾಡುವುದಾಗಿ ಸೂಚಿಸಿದ್ದರು.

ಅದರಂತೆ ಬೆಳಗ್ಗೆ 7 ಗಂಟೆಯಿಂದ ಬಸ್ಸಿಗಾಗಿ ಕಾದು ನಿಂತ ವಿದ್ಯಾರ್ಥಿಗಳು ಬಸ್ಸು 9 ಗಂಟೆಯಾದರೂ ಬಾರದಿದ್ದುದರಿಂದ ಆತಂಕಕ್ಕೀಡಾದರು. ಈ ಬಗ್ಗೆ ಸ್ಥಳೀಯರಾದ ಪಾಲಾರು ವಿವೇಕ ರವರಿಗೆ ವಿಷಯ ತಿಳಿಸಿದರು. ಅವರು ತಕ್ಷಣ ಆಲೆಟ್ಟಿ ಪಂಚಾಯತ್ ಸದಸ್ಯ ಸುದರ್ಶನ ಪಾತಿಕಲ್ಲು ರವರಿಗೆ ದೂರವಾಣಿ ಮೂಲಕ ಸಮಸ್ಯೆ ಬಗ್ಗೆ ತಿಳಿಸಿದರು. ತಕ್ಷಣ ಸ್ಪಂದಿಸಿದ ಸುದರ್ಶನ ಪಾತಿಕಲ್ಲು ರವರು ಜೀಪಿನ ವ್ಯವಸ್ಥೆ ಕಲ್ಪಿಸಿಕೊಟ್ಟು ಎಲ್ಲಾ ವಿದ್ಯಾರ್ಥಿಗಳನ್ನು ಕರೆದುಕೊಂಡು ಬಂದು, ಪರೀಕ್ಷಾ ಕೇಂದ್ರಕ್ಕೆ ಸಮಯಕ್ಕೆ ಸರಿಯಾಗಿ ತಲುಪಿಸುವ ವ್ಯವಸ್ಥೆ ಮಾಡಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.