ಕೊರೋನಾಲಜಿ ಕುರಿತು ರಾಷ್ಟ್ರೀಯ ಮಟ್ಟದ ಆನ್‌ಲೈನ್ ರಸಪ್ರಶ್ನೆ

Advt_Headding_Middle
Advt_Headding_Middle

 

ಸುಳ್ಯ ಸರಕಾರಿ ಪ್ರಥಮ ದರ್ಜೆ ಕಾಲೇಜು, ಕಾಲೇಜಿನ ಇಂಗ್ಲೀಷ್ ವಿಭಾಗ ಮತ್ತು ಐಕ್ಯೂಎಸಿ ವತಿಯಿಂದ ರಾಷ್ಟ್ರೀಯ ಮಟ್ಟದ ರಸಪ್ರಶ್ನೆಯೊಂದು ನಡೆಯುತ್ತಿದೆ.

ಕೋವಿಡ್ 19 ಏಕಾಏಕಿ ಅಭೂತಪೂರ್ವ ಘಟನೆಗೆ ಸಾಕ್ಷಿಯಾಯಿತು. ಇದು ಹಲವು ತಿಂಗಳು ಬದುಕನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿತು. ಸಾಂಕ್ರಾಮಿಕ ರೋಗದಿಂದ ಉಂಟಾಗುವ ಅಸಾಮಾನ್ಯ ಅನುಭವಗಳನ್ನು ವಿವರಿಸಲು ಜನರು ಇಂಗ್ಲೀಷ್ ಮತ್ತು ಇತರ ಭಾಷೆಗಳಲ್ಲಿ ಅಸ್ತಿತ್ವದಲ್ಲಿರುವ ಪದಗಳನ್ನು ಮತ್ತು ಹೊಸ ಪದಗಳನ್ನು ಹೊಂದಿಸಿಕೊಳ್ಳಬೇಕಾಗಿತ್ತು. ಇದೀಗ ಈ ಪದಗಳು, ನುಡಿಗಟ್ಟುಗಳನ್ನು ಅರ್ಥ ಮಾಡಿಕೊಳ್ಳುವ ನಿಟ್ಟಿನಲ್ಲಿ ಸಾಮಾನ್ಯ ಜನರಿಗೆ ಸಹಾಯ ಮಾಡುವ ಪ್ರಯತ್ನವಾಗಿ ರಸಪ್ರಶ್ನೆಯೊಂದನ್ನು ಏರ್ಪಡಿಸಲಾಗಿದೆ.

ಜಾಹೀರಾತು

ಇದರ ಈವೆಂಟ್ ಎಲ್ಲರಿಗೂ ಮುಕ್ತವಾಗಿದ್ದು, ಜೂ.೩೦ರವರೆಗೆ ರಸಪ್ರಶ್ನೆ ಲಿಂಕ್ ಲಭ್ಯವಾಗಲಿದೆ. ದಿನಕ್ಕೆ ಗರಿಷ್ಟ ೧೦೦ ಮಂದಿ ಭಾಗವಹಿಸಬಹುದು. ಶೇ.೪೦ಕ್ಕಿಂತ ಹೆಚ್ಚು ಸ್ಕೋರ್ ಮಾಡುವ ಸ್ಪರ್ಧಿಗಳು ಈಮೇಲ್ ಮೂಲಕ ಇ ಪ್ರಮಾಣ ಪತ್ರವನ್ನು ಪಡೆಯಲಿದ್ದಾರೆ.

ಸುಳ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆಂಗ್ಲ ಉಪನ್ಯಾಸಕಿ ಸುರೇಖಾ ಹೆಚ್. ಇದರ ಸಂಯೋಜಕಿಯಾಗಿದ್ದಾರೆ. ಹೆಚ್ಚಿನ ವಿವರಗಳಿಗಾಗಿ ಅವರ ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಬಹುದು ಎಂದು ಪ್ರಾಂಶುಪಾಲ ಡಾ. ಅಚ್ಚುತ ಪೂಜಾರಿ ತಿಳಿಸಿದ್ದಾರೆ.
ಮೊ : 8618299732

https://forms.gle/m9WkzRPfW4VKgzmi8

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.